Sunday, November 20, 2011

ನಲ್ಲೇ .. ನಾನಲ್ಲಿರಲಿಲ್ಲ...!!!


ಅರಳು..
ಹುರಿದಂತೆ..ಮರಳು ಮಾಡುವ 
ನಿನ್ನ ..
ಮಾತಿಗೆ..ಕಿವಿಯಾಗಿದ್ದರೂ..

ನಲ್ಲೇ .. ನಾನಲ್ಲಿರಲಿಲ್ಲ...!

ತುಟಿಗಳ..
ಅಂಚಲ್ಲಿ ಮಿಂಚು ಹರಿವ..
ಮುಂಗುರಳ..
ಕೆನ್ನೆಗಳ .. ನಾಚಿಕೆ ರಂಗಿನ..
ಕತ್ತಿನಡಿ .. 
ಸುತ್ತ ..
ಮತ್ತಿನ ಮುತ್ತುಗಳಾಗಿ...

ನನ್ನೊಳಗೇ...
ನಿನ್ನಂದ.. ಚಂದಗಳ.. ಆನಂದವಾಗಿ..
ಕಣ್ ..
ಮುಚ್ಚಿದ್ದೆ.. ಕಣೆ ...

ನಲ್ಲೇ ..... ನಾ ನಲ್ಲಿರಲಿಲ್ಲ... !!! 

10 comments:

  1. Saar ee photo tegeyuvaaga neev alli irlilwa? ha ha.. chennagide

    ReplyDelete
  2. ಹ್ಹಾ.. ಹ್ಹಾ... ಪ್ರದೀಪು...
    ಧನ್ಯವಾದಗಳು...

    ನಲ್ಲೇ...
    ನಿನ್ನಂದ ಚಂದಗಳ ಆನಂದವಾಗಿ..
    ಕ್ಯಾಮರವಾಗಿ...
    ಕಣ್..
    ಮುಚ್ಚಿದ್ದೆ ಕಣೆ..
    ಅಲ್ಲೇ.. ಇರಲಿಲ್ಲ...!!

    ReplyDelete
  3. ಸೂಪರ್ ಮಾತಿನ ಮಣಿಗಳು!

    ReplyDelete
  4. ಆಕೆಯ ಮತ್ತಲ್ಲಿ ಕಳೆದು ಹೋಗುವ ದಿವ್ಯ ಕ್ಷಣ ಸಂಭವಿಸುತ್ತಲೇ ಇರಲಿ.

    ಪ್ರಕಾಶಣ್ಣ ಈ ನಡುವೆ ನಿಮ್ಮ ಕವನಗಳು ಶತಕ ಬಾರಿಸುತ್ತಲೇ ಇವೆ.

    ReplyDelete
  5. ನಲ್ಲ ನಲ್ಲೆಯರ ಪ್ರೀತಿಯ ಪಿಸು ಪಿಸು ಮಾತುಗಳು ಕವಿತೆಯಾಗಿ ಹೊಮ್ಮಿವೆ ಇಲ್ಲಿ. ನಾವು ಏನೆ ಹೇಳಿದರೂ ವ್ಯರ್ಥ ಇಲ್ಲಿ.ನಮ್ಮ ಮಾತು ಗಳೇಕೆ ಬೇಕು ಈ ಪಿಸುಮಾತುಗಳ ಪಿಸುಗುಟ್ಟುವಿಕೆಯಲ್ಲಿ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  6. ನಿನ್ನಂದ ಮಕರಂದ...ಕೆನ್ನೆ ಕತ್ತು ಓಹ್ ! ಪರಮಾನಂದ.....ಪುಟ್ಟ ಓಲೆಯ ಮುತ್ತು ನಾನಾಗಲೇ....ಕರಿಮಣಿಯ ನಡುವಿನ ಚಿನ್ನದ ಗುಂಡಾಗಲೇ....ಏನಾಗಲೇ? ನಾ ಏನಾಗಲೇ ?????

    ReplyDelete
  7. ಆ ನಿನ್ನ ರೇಶಿಮೆಯ ಎಳೆಗಳು
    ಚಂದವನಿತ್ತರೆ ನಿನಗೆ, ಬಳೆಗಳು
    ಎದೆಯಲೆಬ್ಬಿಸಿ ಮೋಹಕ ಅಲೆಗಳು
    ಪಟ-ಪಟ ಮುದ್ದಾದ ಬಡಿವ ಕಣ್ಣಾಲಿಗಳು
    ಅತ್ತಿಗೇ...ಬಿದ್ದನಲ್ಲಾ ಇವನು ಅಂದು
    ಎದ್ದಿಲ್ಲ ಮತ್ತೆ ಮತ್ತೆ ಬೀಳುತಿಹ ಇಂದೂ
    ಚಿತ್ರಿಸಿ, ಕವನಿಸಿ, ಕನವರಿಸಿ
    ಗೆಳೆಯಾ..
    ಅದಕೇ ಏನು ರಾಮಕೃಷ್ಣರು
    ಸತಿಯ ಆರಾಧಕರಾದದ್ದು?????

    ReplyDelete
  8. azaad sir heLiddu sariyide......

    nimma kavana chennaagide..........

    ReplyDelete
  9. ಪ್ರಕಾಶಣ್ಣ ಅದ್ಭುತವಾಗಿದ್ದು, ಫೋಟೊ ಕೂಡ ತು೦ಬಾ ಚನ್ನಾಗಿ ಬ೦ದಿದೆ...:)

    ReplyDelete
  10. ಚೆನ್ನಾಗಿದ್ದು :-)

    ReplyDelete