Monday, July 25, 2011

ನೀ .. ಬದಲಾಗುವ.. ನಿನ್ನ ಬಣ್ಣಗಳು..!





ನಾ..
ಕಟ್ಟಿದ..
ಕನಸುಗಳು..
ಕಾಲದ....
ಗಾಳಿ.. 
ಮಳೆ... ಛಳಿಯಲ್ಲಿ..


ನೀ...
ಬದಲಾಗುವ...
ನಿನ್ನ..
ಬಣ್ಣಗಳ ನೋಡಿ..

ಈ..
ಬೆಚ್ಚನೆಯ..
ಆಲಿಂಗನದ...
ಭರವಸೆಯ...
ಬಿಸಿಯುಸಿರಿನಲ್ಲೂ...

ನಾ ...
ಒಂಟಿಯಾಗಿಬಿಟ್ಟೆ..
ಗೆಳೆಯಾ..


11 comments:

  1. ಹುಷಾರಾದ ಮೇಲೆ ರಸಿಕತನ ವಜೃಂಭಿಸುತ್ತಿದೆ.
    ಕವನದಲ್ಲಿ ಪ್ರೇಮೋತ್ಕರ್ಷದ ಕರೆ ಇದೆ ಪ್ರಕಾಶಣ್ಣ!

    ReplyDelete
  2. ಬದರಿನಾಥರವರೆ... ಧನ್ಯವಾದಗಳು...

    ನಾ..
    ಕಟ್ಟಿದ..
    ಆಸೆ.. ಕನಸುಗಳು
    ಗಾಳಿ..
    ಛಳಿ.. ಮಳೆಯಲ್ಲಿ..
    ನಿನ್ನಂತೆ ಬದಲಾಗುವ..
    ನಿನ್ನ
    ಬಣ್ಣಗಳ ನೋಡಿ..
    ನಿನ್ನ..
    ಸಿಹಿಯಪ್ಪುಗೆ..
    ಬಿಸಿಯುಸಿರಲ್ಲೂ..
    ನಾ..
    ಒಂಟಿಯಾಗಿಬಿಟ್ಟೆ.. ಗೆಳೆಯಾ...

    ReplyDelete
  3. ನಿಮ್ಮ ಆರೋಗ್ಯ ಸುಧಾರಿಸಿದ ಮೇಲೆ ನಿಮ್ಮೊಳಗಿನ ಪ್ರೇಮ ಕವಿತೆ ಸುಂದರ ಚಿತ್ತಾರದ ಹನಿಗಳಾಗಿ ಮೂಡಿ ಬಂದಿದೆ. ಜೈ ಹೋ.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  4. Thank you Baloo Sir...

    ನಾ..ನಳಿಸಿದರೂ..
    ಅಳಿಸಲಾಗದು
    ಅಂದುಕೊಂಡಿದ್ದೆ..
    ನೋಡೀಗ
    ಅಳಿಸುತಿದೆ ..
    ನಿನ್ನ
    ಪ್ರೀತಿ..
    ಪ್ರೇಮದ
    ಬಣ್ಣಗಳನು... ಹನಿ ಹನಿಗಳಾಗಿ...

    ReplyDelete
  5. ಫೋಟೋ ತುಂಬಾ ಚೆನ್ನಾಗಿದೆ. ನಂಗೆ ತುಂಬಾ ಇಷ್ಟ ಆಯ್ತು.

    ReplyDelete
  6. ಚೆನ್ನಾಗಿದೆ..

    ನನ್ನ 'ಮನಸಿನಮನೆ'ಗೂ ಬನ್ನಿ:

    ReplyDelete
  7. ಪ್ರೇಮದ ತುಂತುರು ತಮ್ಮ ಮನಸ್ಸಿನಲ್ಲಿ ಸದಾ ಇರುತ್ತದೆ ಬಿಡಿ.....

    ಸಕತ್ ಬೈಂದೋ......

    ನಿನ್ ಇಲ್ಲಿ ನೋಡದ್ದೆ ತುಂಬಾ ಕಾಲಾ ಆಗಿತ್ತು....

    ಜೈ ಹೋ...

    ReplyDelete
  8. ಛಾಯೆ
    ಮಾಯೆ
    ಮೂಲ
    ಅಮೂಲ್ಯ
    ಬೆಳಕು
    ಥಳಕು
    ಕತ್ತಲು
    ಮುತ್ತಲು
    ಮುತ್ತು
    ಬೆಳೆಯದು
    ಬಿತ್ತಲು
    ಕಳೆವುದು
    ಕತ್ತಲು..

    ಛಾಯಾಚಿತಾರದ ಚಿತ್ತ ಕಲಕುವ ಬಿತ್ತಾರ....

    ReplyDelete
  9. ಚೆನ್ನಾಗಿದೆ ಕವನ ಮತ್ತು ಚಿತ್ರ

    ReplyDelete