Wednesday, October 12, 2011

ನಿನ್ನ.. ಪ್ರೇಮದ ಬೇರು..



ನಿನ್ನ..
ಪ್ರೇಮದ ಬೇರು..
ಇಳಿಯಲಿ .
ಬಿಡು..
ನನ್ನೆದೆಯೊಳಗೆ..

ನೀರು ...
ಗೊಬ್ಬರ  ನೀಡುವೆ..
ಬೆಳೆದು ..
ಹೆಮ್ಮರವಾಗಲಿ..

ಹೂ.. 
ಮೊಗ್ಗುಗಳ  ಕಂಪ  ಹೊತ್ತು..

ತಂಪನ್ನೆರೆಯಲಿ..
ಈ....
ಪ್ರೀತಿಯ  ನೆರಳು..
ತಂಗಾಳಿಯಾಗಿ..
ನನ್ನ.. 
ಬಾಳ ಬಿಸಿಲ  ಬೇಗೆಯಲಿ...!



12 comments:

  1. ತುಂಬಾ ರಸಿಕ ಯೋಚನೆ ಯೋಜನೆ ತಮ್ಮದು

    ReplyDelete
  2. Anna day by day mahan Rasikaru agtidira !

    ReplyDelete
  3. ಸುಂದರ ಚಿತ್ರ!ಚೆಂದದ ಬರಹ!

    ReplyDelete
  4. ಅಗಗಗಗ
    ಏನಣ್ಣಾ ಪ್ರಕಾಶಣ್ಣ....ಈ ಪಾಟಿ ಸಿಕ್ಸರ್ಗಳು...
    ನನ್ನ ಲೈನುಗಳು...ಇವಕ್ಕೆ ಹಾಕೇ ಬಿಡ್ತೀನಿ...
    ಆ ವಾಕು
    ಆ ಹಾದಿ
    ಆ ನಿನ್ನ ಸಂಗ
    ಆ ಮರದ
    ಆ ನೆರಳ
    ಆ ನಿನ್ನ ಸಂಗ
    ಈ ದಿನವೂ
    ಈ ಕ್ಷಣವೂ
    ಈ ನಿನ್ನ ಸಂಗ

    ReplyDelete
  5. `ಮೋಹ'ಕ ಕವನ. ಅಭಿನ೦ದನೆಗಳು ಪ್ರಕಾಶ್ ಸರ್..

    ReplyDelete
  6. ಯೋಚಿಸುತ್ತೇನೆ ನಿನ್ನ ನೆನಪೆಂಬ ಮರವನ್ನು ಕಡಿಯಬೇಕೆಂದು, ಆದರೆ ಮನದಾಳದಲ್ಲಿ ಬೇರುಗಳಿವೆಯಲ್ಲ ಅವನ್ನೇನು ಮಾಡಲಿ?

    ReplyDelete
  7. ಮೊದಲೇ ಹೇಳಿ ಬಿಡುತ್ತೇನೆ: ಕಾವ್ಯವನ್ನು ಸರಳವಾಗಿ ಬರೆಯುವುದು, ಕಾಲೇಜು ಜೀವನಗಳಲ್ಲಿ ಹುಡುಗಿಯರಿಗೆ "ಐ ಲವ್ ಯೂ" ಎನ್ನುವಷ್ಟೇ ಕಠಿಣ. ನಿಮಗೆ ಸಿದ್ಧಿಸಿದ ಕಲೆ ನಮಗೂ ಎರವಲು ಕೊಡಿ ಪ್ಲೀಸ್!

    ಅದು ಇನ್ನೆಂಥ ಮರ ಬ್ರದರ್! ಪ್ರೇಮಿಗಳ ಅಂಡು ತಾಣ. ಪ್ರೇಮಿಗಳೆಷ್ಟೋ ಅವಳ ನೆರಳಿನಲ್ಲೇ ಪ್ರೇಮದ ಬೆಚ್ಚನೆ ಸ್ವೆಟರ್ರು ಹೆಣದುಕೋಡಿದ್ದಾರೋ? ಅದನ್ನು ಗ್ರಹಿಸಿದ ಮತ್ತು ಕಾವ್ಯವಾಗಿಸಿದ ನಿಮ್ಮ ತೆರೆದ ಮನಸ್ಸು ನಮ್ಮನ್ನು ಸೆಳೆಯುತ್ತದೆ.

    ಸೂಪರ್, ಸೂಪರ್, ಸೂಪರ್...

    ReplyDelete
  8. aha...onde chitrakke yeradu vibbinna kavanagalu..(nivu mattu azad sir ninda)..masthagide prakashanna..

    ReplyDelete
  9. ಅಬ್ಬಾ ಅಂಥಾ ಸೊಂಪು ಎದೆಗೂ ಭಾಳ ಬಿಸಿಲ ಬೇಗೆ ಅಂತಂದರೆ
    ನಮ್ದೆಂಗಿರ್ಬೇಡಾ............

    ಒಳ್ಳೆ ಕವನ ಹಾಂ........

    ReplyDelete
  10. ವಾಹ್! ಚೆಂದದ ಚಿತ್ರ.. ಇಷ್ಟು ಚೆಂದದ ಚಿತ್ರಗಳು ಮತ್ತೆ ಮತ್ತೆ ಹೇಗೆ ನಿಮ್ಮ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬೀಳುತ್ತವೆ ಎಂಬುದೇ ಅಚ್ಚರಿ!

    ReplyDelete