Wednesday, October 19, 2011

ಬೆಳಕಿನ ಸೆರಗಿನಂಚಿನಲಿ....



ಈ..
ಸಂಜೆ  ತಿಳಿಗತ್ತಲಲಿ..
ಜಾರು..
ಜಾರುವ..
ಬೆಳಕಿನ ಸೆರಗಿನಂಚಿನಲಿ..

ಬೇಕು..ಬೇಕೆನಿಸುವ ..
ಈ..
ಸನಿಹದಲಿ..
ಹೇಳಲಾಗದೆ..ಸೋತಿರುವ 
ನನ್ನ.. 
ಮಾತುಗಳು.. ಶಬ್ಧಗಳು..

ನಿನ್ನ..
ಕಣ್ಣಂಚಿನ ಭಾವಗಳು ..
ಮಧುರ..
ಮೌನ ಸಂಭಾಷಣೆಗಳು..  
ಬಲು ..
ಇಷ್ಟ ಕಣೆ.. ಹುಡುಗಿ.. !!



13 comments:

  1. ಸುಂದರ ಚಿತ್ರಕ್ಕೆ ಸುಂದರ ಸಾಲುಗಳು..ಚೆನ್ನಾಗಿದೆ ಪ್ರಕಾಶಣ್ಣ :)

    ReplyDelete
  2. ಚಿತ್ರದಲಿ ಮೂಡಿರುವ ಸ೦ಧ್ಯಾರಾಗ, ಕವನದಲಿ ಹೊರಹೊಮ್ಮುತ್ತಿರುವ ಅರ್ಪಣಾಭಾವ, ಪರಸ್ಪರ ಪೂರಕವಾಗಿವೆ ಸರ್, ಅಭಿನ೦ದನೆಗಳು.

    ReplyDelete
  3. ರವಿಯ ಮುಳುಗಿಸುತಿದೆ.. ತೀರದ ದಾಹದಿಂದ ವಾರಿಧಿಯೊಳಗೆ...
    ನಮ್ಮ ಮನ ತಣಿಸುತಿದೆ... ಪ್ರಕಾಶಣ್ಣನ ಚಿತ್ರ-ಕವನ ’ಛಾಯಾ ಚಿತ್ತಾರ..’ದೊಳಗೆ... :) ಸೂಪರ್ ಲಾಯಕ್ಕೂ ಪ್ರಕಾಶಣ್ಣ... :)

    ReplyDelete
  4. tumba chennagide! photo yaaru tegediddu?

    ReplyDelete
  5. ಈ ಸುಂದರ ಸಂಜೆಯ
    ಚಂದದ ಚಿತ್ರವ ಸೆರೆಹಿಡಿವ
    ಕಣ್ಣ ಗೊಂಬೆ ನಾನು!
    ನಿನ್ನ ಬಾಹುಗಳ
    ಬಂಧನದ ರೆಪ್ಪೆಗಳಲ್ಲಿ
    ನನ್ನ
    ಮುಚ್ಚಿಟ್ಟು ಬಿಡು ಗೆಳೆಯ!

    ReplyDelete
  6. Super baradyo, photos adbhuta, sanje belakina adbhuta combination

    ReplyDelete
  7. ಹೇಳಲಾಗದೆ ಸೋತು ಹೋಗಿರುವ ನಿಮ್ಮೀ ಮಾತುಗಳು ಆ ಹುಡುಗಿಗೆ ಇಷ್ಟವಾಯ್ತೋ-ಇಲ್ವೋ ಗೊತ್ತಿಲ್ಲ ನಂಗಂತೂ ಬಲ್ ಇಷ್ಟವಾಯ್ತು

    ReplyDelete
  8. chitra haagu kavana eradu tumbaa chanagiddu prakaashanna.............:)

    ReplyDelete
  9. ಮನಸು ಮನಸುಗಳ ನಡುವಿನ ಸೇತುವೆಗೆ ಬಣ್ಣದೋಕುಳಿಯ ಸಂಗ ಬಲು ಚಂದ

    ReplyDelete