Sunday, November 27, 2011

ಕತ್ತಲಲಿ .. ಕಟ್ಟಲಾಗದ ಕನಸುಗಳು..


ಹೊತ್ತು..
ಹೊತ್ತು ಇಳಿದರೂ.. ..
ಅಳಿಯದೆ..
ಒಳಗುಳಿದ ನೆನಪುಗಳು .. 
ಮತ್ತೆ..
ಮತ್ತೆ  ಮರೆಯದೇ.. ಮರಳುವದು.. 

ಇಲ್ಲದಿರುವ..
ಇರುವುಗಳ .. 
ತರುವ ..
ಮರುಳು ಇರುಳಿನ ನೆರಳ  ಹಾಗೆ..

ಕತ್ತಲಲಿ ..
ಕಟ್ಟಲಾಗದ  ಕನಸುಗಳು..
ಕರಗಿ.... 
ಕೊರಗಿ ಕೊನರುವದು.. ..
ನಿನ್ನ ..
ಕನವರಿಕೆಗಳೇ.... ಹೀಗೆ...


14 comments:

  1. ಕನಸ ಕನವರಿಕೆಯ ಕವನ.....

    ಸುಪ್ಪರ್...

    ReplyDelete
  2. ಕತ್ತಲಲಿ ..
    ಕಟ್ಟಲಾಗದ ಕನಸುಗಳು..
    ಕರಗಿ....
    ಕೊರಗಿ....
    ಕೊನರುವದು.. ..
    ನಿನ್ನ ..
    ಕನವರಿಕೆಗಳೇ.... ಹೀಗೆ...
    very nice lines prakashanna ....

    ReplyDelete
  3. ಕರಗಿ ಕೊನರುವದು
    ಕತ್ತಲಲಿ...
    ಕಟ್ಟಲಾಗದ ಕನಸುಗಳು..
    ನಿನ್ನ ..
    ಕನವರಿಕೆಗಳೇ
    ಹೀಗೆ.ಕಟ್ಟಲಾಗದ ಕನಸುಗಳು

    ReplyDelete
  4. ಸೂಪರ್ ಲೈಕ್ ಪ್ರಕಾಶಣ್ಣ..

    ReplyDelete
  5. ಕನಸನ್ನು ಕಟ್ಟಲಾಗುವುದಿಲ್ಲ...ಕನಸು ಗಳು ತನ್ನಿಂತಾನೆ ಬಿಚ್ಚಿ ಹರಡಿಕೊಳ್ಳುತ್ತವೆ ಮಾರಾಯ್ರೇ.....

    ReplyDelete
  6. ಸಿಂಧೂರವರೆ..
    ಅದಕ್ಕಾಗಿಯೇ ಹೇಳಿದ್ದು.. "ಕಟ್ಟಲಾಗದ ಕನಸುಗಳು" ಅಂತ... !!

    ReplyDelete
  7. ಆಕೆ ಚಿಗುರಿಸುವ ಆಸೆಗಳ ಸಚಿತ್ರ ಕವನ. ಕನವರಿಕೆ ದೈವ ದನಿ, ಒಲುಮೆ ಸಾಕ್ಷಾತ್ಕಾರ.

    ReplyDelete
  8. ಹೂಂ... ನೆನಪುಗಳೇ ಹಾಗೆ... ಅಗೆದಷ್ಟು ಚಿಮ್ಮುವ ನೀರ ಚಿಲುಮೆಯಂತೆ.....

    supper ಪ್ರಕಾಶಣ್ಣಾ......

    ReplyDelete
  9. ಮುಸ್ಸಂಜೆಯ ಹೊತ್ತಲ್ಲಿ
    ನಡು ನೀರ ನೆತ್ತಿಯಲ್ಲಿ
    ಸುತ್ತಿ ಸುಳಿದಾಡುವ ನೆನಪುಗಳಿಗೆ
    ಕತ್ತಲಲ್ಲಿ ಕನಸಾಗುವಂತೆ
    ಅಜ್ಞಾಪಿಸುತ್ತೇನೆ

    ಚಿತ್ರ ಮತ್ತು ಕವನ ಸೂಪರ್

    ReplyDelete
  10. ಚೆನ್ನಾಗಿದೆ ಪ್ರಕಾಶಣ್ಣ :-) ಕವನವೂ, ಚಿತ್ರವೂ :-)

    ReplyDelete
  11. ಇಲ್ಲದಿರುವ....
    ಇರುವಗಳ....
    ತರುವ...........
    ಸು೦ದರವಾದ ಸಾಲುಗಳು ಪ್ರಕಾಶಣ್ಣ....:)

    ReplyDelete