Wednesday, November 16, 2011

ನೀ.. ಅಂದ ... ಅಂದು.. ನೀನಂದ ಮಾತು...!



ತುಟಿ ಕಚ್ಚಿ..
ಸೇರಗಿನಂಚನು ಬೆರಳ ತುದಿಗೆ ಸುತ್ತಿ..
ನಿನ್ನಾಸೆಯ ...
ಮೌನ ಭಾಷೆಯ ..
ಆ.. 
ತುಂಟ   ಕಿರುನೋಟ ..

ನೀನಿಲ್ಲದಿರೂ  ..
ನೀ...  ಅಂದ ...
ನೀನಂದ ಮಾತು..
ನಿನ್ನೊಡನೆಯ  ಕಳೆದ  ಕ್ಷಣಗಳಿವೆಯಲ್ಲೇ..


ನಲ್ಲೆ.. ನನಗಿಷ್ಟು ಸಾಕು ಕಣೆ..

ನನ್ನ ..
ತುಟಿಗೆ ಬಾರದ ..
ನೀಲಿ.. ಹಸಿರು ಹಾಸಿನ ..
ರಂಗು 
ರಂಗಿನ  ನೆನಪು  ಕನಸಿನ  ಚಿಗುರಿಗೆ.....





5 comments:

  1. ಆರಾಧನಾ ಭಾವವನ್ನು ಇಷ್ಟು ಚೆನ್ನಾಗಿ ಪದಗಳಲ್ಲಿ ಕಟ್ಟಿ ಕೊಡಬಹುದೇ...?!
    ಇಷ್ಟವಾಯ್ತು ಪ್ರಕಾಶಣ್ಣ...

    ReplyDelete
  2. ಉತ್ಕಟ ಪ್ರೀತಿಯ ಭಾವ ಸಂಚಲನ. ಬಂಬಾಟ್!

    ReplyDelete
  3. ವಿಮಾನದಿಂದ ತೆಗೆದಂತಿದೆ!

    ReplyDelete
  4. ಅದ್ಭುತವಾದ ಚಿತ್ರಕ್ಕೆ ಅದ್ಭುತವಾಗಿ ಜೀವ ತು೦ಬಿದ್ದೀರಿ...:)

    ReplyDelete