ಛಾಯಾ ಚಿತ್ತಾರಾ....
Tuesday, November 29, 2011
ಪಿಸುಮಾತು... ಮೃದು ಕೆನ್ನೆಯ ಮೇಲೆ.. !
ಹುಸಿ..
ಮುನಿಸು..
ತುಟಿಗಳಲಿ....
ತುಸು ..
ನಸು ನಗುವ ಹನಿಸು..
ಮೆಲ್ಲಗೆ..
ಬಿಸಿಯುಸಿರ ಪಿಸುಮಾತಲಿ..
ಮೃದು..
ಕೆನ್ನೆಯ ಮೇಲೆ.. .. !
ನಲ್ಲೆ..
ಬರೆಯಲೇನೆ..
ನಮ್ಮ ಪ್ರೇಮ ಕವಿತೆ..
ಹನಿ..
ಹನಿ ಮುತ್ತುಗಳಾಗಿ ...
?
Sunday, November 27, 2011
ಕತ್ತಲಲಿ .. ಕಟ್ಟಲಾಗದ ಕನಸುಗಳು..
ಹೊತ್ತು..
ಹೊತ್ತು ಇಳಿದರೂ.. ..
ಅಳಿಯದೆ..
ಒಳಗುಳಿದ ನೆನಪುಗಳು ..
ಮತ್ತೆ..
ಮತ್ತೆ ಮರೆಯದೇ.. ಮರಳುವದು..
ಇಲ್ಲದಿರುವ..
ಇರುವುಗಳ ..
ತರುವ ..
ಮರುಳು ಇರುಳಿನ ನೆರಳ ಹಾಗೆ..
ಕತ್ತಲಲಿ ..
ಕಟ್ಟಲಾಗದ ಕನಸುಗಳು..
ಕರಗಿ....
ಕೊರಗಿ
ಕೊನರುವದು.. ..
ನಿನ್ನ ..
ಕನವರಿಕೆಗಳೇ.... ಹೀಗೆ...
Sunday, November 20, 2011
ನಲ್ಲೇ .. ನಾನಲ್ಲಿರಲಿಲ್ಲ...!!!
ಅರಳು..
ಹುರಿದಂತೆ..
ಮರಳು ಮಾಡುವ
ನಿನ್ನ ..
ಮಾತಿಗೆ..ಕಿವಿಯಾಗಿದ್ದರೂ..
ನಲ್ಲೇ .. ನಾನಲ್ಲಿರಲಿಲ್ಲ...!
ತುಟಿಗಳ..
ಅಂಚಲ್ಲಿ ಮಿಂಚು ಹರಿವ..
ಮುಂಗುರಳ..
ಕೆನ್ನೆಗಳ ..
ನಾಚಿಕೆ ರಂಗಿನ..
ಕತ್ತಿನಡಿ ..
ಸುತ್ತ ..
ಮತ್ತಿನ ಮುತ್ತುಗಳಾಗಿ...
ನನ್ನೊಳಗೇ...
ನಿನ್ನಂದ..
ಚಂದಗಳ..
ಆನಂದವಾಗಿ..
ಕಣ್ ..
ಮುಚ್ಚಿದ್ದೆ.. ಕಣೆ ...
ನಲ್ಲೇ ..... ನಾ ನಲ್ಲಿರಲಿಲ್ಲ... !!!
Saturday, November 19, 2011
ಹತ್ತಾಸೆ ಬಯಕೆಗಳ ಹೊತ್ತ.. ಬೆಳ್ಳ ಬೆಳಗಿನ ಕನಸು ...
ಗುಳಿಕೆನ್ನೆ..
ಮುದ್ದು ಗಲ್ಲಗಳ ಮುದ್ದಾಗಿ...
ಕಣ್ಣು..
ತುಟಿಗಳ ಮುಗುಳು ನಗುವಾಗಿ..
ಇಲ್ಲೇ..
ನಿನ್ನೊಳಗಿನ...
ನಿತ್ಯ..
ಪ್ರೀತಿ ಕ್ಷಣಗಳ ಸಾಕ್ಷಿಯಾಗಿ...
ಹತ್ತಾಸೆ..
ಬಯಕೆಗಳ
ಹೊತ್ತ..
ಬೆಳ್ಳ..
ಬೆಳಗಿನ ಕನಸಾಗಿ ..
ನಿನ್ನ ..
ಹೊಸ ಪ್ರೇಮದ ಗುಂಗು ನಾನಾಗಲೇನೆ ಹುಡುಗಿ....?
Wednesday, November 16, 2011
ನೀ.. ಅಂದ ... ಅಂದು.. ನೀನಂದ ಮಾತು...!
ತುಟಿ ಕಚ್ಚಿ..
ಸೇರಗಿನಂಚನು
ಬೆರಳ ತುದಿಗೆ
ಸುತ್ತಿ..
ನಿನ್ನಾಸೆಯ ...
ಮೌನ ಭಾಷೆಯ ..
ಆ..
ತುಂಟ ಕಿರುನೋಟ ..
ನೀನಿಲ್ಲದಿರೂ ..
ನೀ...
ಅಂದ ...
ನೀನಂದ ಮಾತು..
ನಿನ್ನೊಡನೆಯ ಕಳೆದ ಕ್ಷಣಗಳಿವೆಯಲ್ಲೇ..
ನಲ್ಲೆ.. ನನಗಿಷ್ಟು ಸಾಕು ಕಣೆ..
ನನ್ನ ..
ತುಟಿಗೆ ಬಾರದ ..
ನೀಲಿ..
ಹಸಿರು ಹಾಸಿನ ..
ರಂಗು
ರಂಗಿನ ನೆನಪು ಕನಸಿನ ಚಿಗುರಿಗೆ.....
Friday, November 11, 2011
ಹಗಲಲಿ ಹೆಗಲೇರಿ ಬರುವದು.. ನಿನ್ನ ಪ್ರಿತಿ....
ಕನವರಿಕೆಯ
ಕನಸಲಿ...
ತಾರೆಗಳ..
ತೇರನೇರಿ..
ಚಂದ್ರಮನೂ ಗುನುಗಿದನಲ್ಲೇ....
ನಿನ್ನಂದ
ಚಂದದ ಹಾಡು..!
ಈ..
ಚುಮು ಚುಮು
ಬೆಳಗಲ್ಲೂ..
ನೆರಳಾಗಿ ಬರುವದು..
ನೀನಿತ್ತ..
ಸಿಹಿ..ಚುಂಬನದ ನೆನಪು...!
ಗೆಳತಿ..
ಕತ್ತಲಲಿ ಕಳೆದು ಹೋಗದು....
ಹಗಲಲಿ
ಹೆಗಲೇರಿ ಬರುವದು..
ನಿನ್ನ ..
ಪ್ರಿತಿಯಿದು
ಸದಾ ಹಸಿರು..
ನನ್ನೊಳಗಿನ ಉಸಿರು...
Monday, November 7, 2011
ನಿರೀಕ್ಷೆಗಳೇ.. .. .. ಚಂದ...!
ಬರುವ
ಮುನ್ನ...
ನೀ...
ಹುಟ್ಟಿಸುವ..
ಹತ್ತಾರು
ಹುಚ್ಚಾಸೆಗಳ..
ಆ...
ನಿರೀಕ್ಷೆಗಳೇ..
ಬಲು ..
ಚಂದ ಗೆಳೆಯಾ...!!
Wednesday, November 2, 2011
ಕನಸುಗಳೇ ಹೀಗೆ... ಗೆಳೆಯಾ.. ಈ ಕ್ಷಣಕ್ಕಷ್ಟೇ ಚಂದ... !!
ಮುಂಜಾವಿನ ಮಂಜಲ್ಲಿ..
ಹನಿ..
ಹನಿ ಗಟ್ಟಿಸಿ..
ಆರಿ ..
ಹೋಗುವ ಹಾಗೆ..
ಚುಮು..
ಚುಮು ಛಳಿಯ..
ಬೆಚ್ಚನೆಯ ಚಾದರದೊಳಗೆ ..
ಬೇಕು ಬೇಕೆನಿಸುವ..
ನಿನ್ನ ..
ಮುದ್ದು ..
ಮುದ್ದಿಸುವ ನೆನಪುಗಳು..
ನೀ..
ಕಟ್ಟಿಕೊಡುವ ಕನಸುಗಳೇ ಹೀಗೆ...
ಗೆಳೆಯಾ..
ಈ ..
ಕ್ಷಣ...
ಕ್ಷಣಕ್ಕಷ್ಟೇ.. ಚಂದ... !!
Newer Posts
Older Posts
Home
Subscribe to:
Comments (Atom)