Saturday, December 17, 2011

ಮುಸುಕಿನೊಳಗಿನ .. ಮಾದಕ.. ಮೌನ ...


ತುಟಿಗೆ...
ಬಾರದ ..
ಭಾವ ಸಂಕೋಚ..
ಪ್ರೀತಿ.. 
 ಹನಿ ಹನಿಗಳಾಗಿ..

ಮುಂಜಾನೆಯ .. 
ಮಂಜಿನ ಮುಸುಕಿನೊಳಗಿನ  ..
ಮೌನ ..
ಮಾದಕ..
ಮೋಹಕ  ಮಾತಿನಂತೆ....

ಅಲ್ಲಗಳೆಯದೆ..
ಬಾ..
ಎನ್ನ ಆಲಿಂಗನಕೆ..
ಅರೆ 
ಬೆಚ್ಚನೆಯ ..
ಭರವಸೆಯ   ಕನಸುಗಳಂತೆ..!




10 comments:

  1. ಮುಕಿನೊಳಗಿನ ಅಂದ್ರೆ ಗೊತ್ತಾಗಿಲ್ಲ.

    ಚಂದವಿದೆ :) :) ಅರೆ! ಬೆಚ್ಚನೆಯ ಭರವಸೆಯ ಕನಸುಗಳಂತೆ... ವಾವ್ :)

    ReplyDelete
  2. ಮುಕಿನೊಳಗಿನ = ?????

    ReplyDelete
  3. ಅಲ್ಲಗಳೆಯದೆ..
    ಬಾ..
    ಎನ್ನ ಆಲಿಂಗನಕೆ..
    ಅರೆ
    ಬೆಚ್ಚನೆಯ ..
    ಭರವಸೆಯ ಕನಸುಗಳಂತೆ..!
    nice lines....

    ReplyDelete
  4. ಪ್ರೀತಿಯ ಈಶ್ವರ್...
    ಮಿಂಚುಳ್ಳಿ...
    ನನ್ನೊಳಗಿನ ಕನಸು... ಸಾಲುಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

    ಮುಸುಕು ಅಂದರೆ...
    ಚಾದರದ ಮುಸುಕು ಅಥವಾ..
    ಮುಂಜಾನೆಯಲ್ಲಿ ಮಂಜಿನ ಮುಸುಕು ಕವಿದ ವಾತಾವರಣ...

    ಮುಂಜಾನೆಯ
    ಮಂಜನಲ್ಲಿ..
    ಬೆಳಗಿಗೂ ಮುಸುಕು ಕವಿದಿರುತ್ತದೆ...
    ಅರೆ ..
    ಬೆಚ್ಚನೆಯ ಛಳಿ..
    ಕೊಡುವ ..
    ಭರವಸೆಯ ಕನಸು..
    ಮೋಹಕ... ಮಾದಕ... ಮಧುರ..!
    ಅಲ್ವಾ?

    ReplyDelete
  5. ಮುತ್ತಿಡುವೆ
    ಸುತ್ತಿರುವೆ
    ಬತ್ತುವ ಮುನ್ನ
    ಸುರಿಸಿಬಿಡುವೆ
    ನೀನಡ್ಡ ಹಾಕದಿರು
    ದಾರಿ- ಹೋಗಲು ಬಿಡು
    ಬಳಸಿ ಬಂದರೂ ಭುವಿಯ
    ನಿನ್ನೆ ನೆತ್ತಿಯಲೇ
    ಇಳಿವೆ,
    ಸುರಿವೆ,
    ಹರಿವೆ,
    ಧರೆಗುಣಿಸಿ
    ಮನತಣಿಸಿ
    ಸರೋವರಿಸಿ
    ಮತ್ತೆ ತೇಲಾಡುವ
    ನಿನ್ನಮೇಲೆ
    ಎಂಥ ಲೀಲೆ..?
    ಅವನದೆಂಥ ಲೀಲೆ!!!

    ಸೂಪರ್ ಸ್ನಾಪ್ ಪ್ರಕಾಶಾ...

    ReplyDelete
  6. ಗೆಳೆಯರೆ..
    ಕ್ಷಮಿಸಿ...
    ತಲೆ ಬರಹದಲ್ಲಿ ಒಂದಕ್ಷರ ಬಿಟ್ಟು ಹೋಗಿತ್ತು...
    ಅದು "ಮುಸುಕಿನೊಳಗಿನ...ಮಾದಕ.. ಮೌನ " ಅಂತ ಆಗಬೇಕಿತ್ತು...
    ಈಗ ಸರಿ ಪಡಿಸಿರುವೆ...

    ಅಕ್ಷರಗಳ ತಪ್ಪು "ಊಟದಲ್ಲಿ ಅನ್ನದ ಸಂಗಡ "ಕಲ್ಲು" ಜಗಿದ ಹಾಗೆ.."

    ಕ್ಷಮಿಸಿ..

    ReplyDelete
  7. ಮುಸುಕು ಆವರಿಸುವ ಹಾಗೇ ನಿನ್ನ ನೆನಪು...ತಂಪು ಮೈ ಗಾದರೂ , ಮನಸಿಗೆ ಬೆಚ್ಚನೆಯ ಭಾವ.....

    ReplyDelete
  8. ಪಕ್ಕು ಮಾಮ,
    ಅಮ್ಮನ ಮಡಿಲ
    ಬೆಚ್ಚನೆಯ ಅಪ್ಪುಗೆಗೆಯಂತೆ
    ಪ್ರಿಯತಮೆಯ ಬಿಸಿಯುಸಿರ
    ರೋಮಾಂಚನ ದಂತೆ
    ಈ ನಿಮ್ಮ ಕವನಗಳು,

    ReplyDelete
  9. ಬೆಚ್ಚನೆಯ ಕನಸುಗಳು ನಿಮ್ಮ ಸಾಲುಗಳಲ್ಲಿ ಹಿತವಾಗಿ ಕಾಡುತ್ತವೆ...

    ಇಷ್ಟವಾಯ್ತು ಪ್ರಕಾಶಣ್ಣ...

    ReplyDelete
  10. "madaka" & "mohaka" heart touching words. nice kavana sir....

    ReplyDelete