Wednesday, December 14, 2011

ನೀನಿದ್ದೆ .. ನನ್ನ ಇಂದು.. ನಿನ್ನೆಗಳಲಿ..


ಹೂ ..
ನಗುವಾಗಿ..
ಸುಂದರ  ಕನಸಿನಂತೆ...
ನೀನಿದ್ದೆ ...
ನಾ ..
ಕಳೆದ..
ಇಂದು..  ನಿನ್ನೆಗಳಲಿ..

ಅರಿಯದೆ..
ಅಳಿವ..
ನನ್ನ.. 
ಅಳಿದುಳಿದ  ನಾಳೆಗಳಲಿ ...

ಅಳು ..
ನೋವುಗಳ ..
ಅನಿವಾರ್ಯಗಳ....
ಹೇಗೆ  ನೋಡಲೇ  ನಾನೊಬ್ಬನೆ...
ಒಬ್ಬಂಟಿಯಾಗಿ.....
... ... ..




12 comments:

  1. ಚಿತ್ರಕ್ಕೆ ತಕ್ಕ, ಒಳ್ಳೆಯ ಆಶಯದ ಕವಿತೆ.

    ReplyDelete
  2. ಸಾಲುಗಳು, ಅವು ಹೇಳುವ ಭಾವಗಳು ಜೊತೆಗೆ ನಗು ಮೊಗದ ತುಂಬು ದಾಂಪತ್ಯದ ಚಿತ್ರವೂ ಕೂಡ ಇಷ್ಟವಾಯ್ತು.

    ReplyDelete
  3. ಎಲ್ಲಿಂದ ತರುತ್ತಿರಿ ಪ್ರಕಾಶಣ್ಣ ಫೋಟೋಗಳನ್ನ ಮತ್ತೆ ಅಂದದ ಸಾಲುಗಳನ್ನ ....

    ReplyDelete
  4. ಇಬ್ಬರಲ್ಲಿ ಒಬ್ಬರಿಲ್ಲದ ಅಳಿದುಳಿದ ನಾಳೆಗಳ ಕಲ್ಪನೆ ಕೂಡ ಕಾಡದಿರಲಿ ಜತೆಯಾಗಿ ನಗುತಿರುವ ಈ ಮಧುರ ಘಳಿಗೆಯಲಿ...

    ಭಾವಗಳ ಎಲ್ಲಿಗೋ ಒಯ್ಯುವ ನೈಜ ಚಿತ್ರ...
    ಅಷ್ಟೇ ಸುಂದರ ಸಾಲುಗಳು...

    ReplyDelete
  5. Sundara Chitra...adakke takka sundara salugalu...Very Nice Prakashanna....

    ReplyDelete
  6. ಸು೦ದರವಾದ ಸಾಲುಗಳು ಪ್ರಕಾಶಣ್ಣ...ಪ್ರೀತಿ ಅನ್ನೊದು ವಯಸ್ಸು, ಸೌ೦ದರ್ಯ, ಸಮಯ ಎಲ್ಲವೆನ್ನು ಮೀರಿದ್ದು ಎ೦ಬುದಕ್ಕೆ ಈ ಸಾಲುಗಳು ಹಾಗು ಈ ಚಿತ್ರ ಸಾಕು.

    ReplyDelete
  7. ನನ್ನ ಮುಖದ ನೆರಿಗೆಗಳಲಿ ಗೆರೆಗಳಾಗಿ ನಿನ್ನ ನೆನಪುಗಳು ಹಾಸು ಹೊಕ್ಕಾಗಿವೆ...ಅವು ಹಾಗೆಯೇ ಆಳವಾಗುತ್ತಾ ಹೋಗಲಿ...ಬೇಡ ನನಗೆ ಸುಕ್ಕಿಲ್ಲದ ನುಣುಪಾದ ಗಲ್ಲ....ನಲ್ಲ

    ReplyDelete