Tuesday, December 6, 2011

ನೀರಾಗಿಸುವೆ ನಿನ್ನೆಲ್ಲ ನಿರಾಸೆಗಳನು....!


ಅನುಮಾನ..
ಬಿಟ್ಟು..
ಮನಗೊಟ್ಟು..
ನಿನ್ನೊಳಗಿನ ದುಗುಡ ದುಮ್ಮಾನಗಳ ..
ಬಿಸಿ..
ಬೇಗೆಗಳ  ಮೋಡಗಳ ಹೊತ್ತು..
ಬಾ...

ಹನಿ..
ಹನಿಗಟ್ಟಿಸಿ..
  ನೀರಾಗಿಸುವೆ  ನಿನ್ನೆಲ್ಲ  ನಿರಾಸೆಗಳನು..
ಪ್ರೇಮ ಸಾಗರದಲಿ....

ನಲ್ಲೆ..
ಈ..
ನೀಲಿ  ಗಗನ ....
ನನ್ನೆದೆಯ  ಪ್ರೀತಿ  ಕಣೆ...!


13 comments:

  1. adeshtu chanda padagalannu jodisuttidri bro...
    intha preetiyalli anuvanakke yede iralu saadyave illa...

    mastagide....superb...

    ReplyDelete
  2. ಸೂಪರ್ ಕಲ್ಪನೆ!ಸೂಪರ್ ಸಾಲುಗಳು!

    ReplyDelete
  3. ಹನಿ..
    ಹನಿಗಟ್ಟಿಸಿ..
    ನೀರಾಗಿಸುವೆ ನಿನ್ನೆಲ್ಲ ನಿರಾಸೆಗಳನು..
    ಪ್ರೇಮ ಸಾಗರದಲಿ....

    ಕವಿತೆಯಲ್ಲಿ ಹೊಸತನವಿದೆ ಸಾಂತ್ವನವಿದೆ ಇಷ್ಟವಾಯಿತು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು.

    ReplyDelete
  4. ನೀರಾಗಿಸುವುದು ಬೇಡ ನಿರಾಸೆಯನ್ನು...ಹುಟ್ಟು ಹಾಕಿದರೆ ಸಾಕು ಹೊಸ ಆಸೆಗಳನ್ನು ನಿನ್ನ ಪ್ರೇಮದಾಕಾಶದಲಿ....ಪ್ರೀತಿಯ ಅಲೆಗಳಲ್ಲಿ...

    ReplyDelete
  5. ಅನುರಾಗವೆಲ್ಲೆಲ್ಲೋ, ಅನುಮಾನವಲ್ಲಲ್ಲಿ,
    ಬ್ರಹದಾಕಾಶದಲಿ ಶುಭ್ರತೆಯ ಜೊತೆಜೊತೆಗೆ ಮೋಡಗಳ ತೆರದಿ.

    ReplyDelete
  6. Thank u Mouna raaga,, Krishnamurthy ji / Baloo ji,,/ Sindhu ji.., Jagadish ji....
    Thank u very much.. !

    ದುಃಖ..
    ದುಗುಡದ ಮೋಡಗಳು
    ಹನಿ ..
    ಹನಿಗಟ್ಟಿಸಿ ನೀರಾದರೇ ಸೊಗಸು..
    ನಲ್ಲೆ..
    ಈ ನೀಲಿ ಗಗಗನ ನನ್ನೆದೆಯ ಪ್ರೀತಿ ಕಣೆ..

    ReplyDelete
  7. ನಲ್ಲೆ..
    ಈ..
    ನೀಲಿ ಗಗನ ....
    ನನ್ನೆದೆಯ ಪ್ರೀತಿ ಕಣೆ...!

    ಆಕಾಶದಷ್ಟು ಉದ್ದಗಲ ನಿನ್ ಪ್ರೀತಿ ಅನ್ನು......

    ಅಬ್ಬಾ.................!!!!!!

    ReplyDelete
  8. ಲಾಲಿತ್ಯ ಕವಿಯ ಕೆನೆಗಟ್ಟಿದ ಕವನವಿದು.

    ಆ ನಿಮ್ಮ ಒಲವಿನ ಆಕಾಶದ ತುಂಬ ಸದಾ ಮೋಡಗಟ್ಟುತ್ತಲೇ ಇರಲಿ.

    ಜೈಹೋ!

    ReplyDelete
  9. ಚಂದದ ಕವನ.
    ಪ್ರಕಾಶಣ್ಣ, ಅವಧಿಯಲ್ಲಿ ನೀ ಬರೆದ 'ಅಗತ್ಯ' ಕಥೆ ತುಂಬಾ ಇಷ್ಟವಾಯ್ತು.

    ReplyDelete
  10. Prakaashanna,

    sundara...atee sundara......Jai Ho.....

    ReplyDelete