ಛಾಯಾ ಚಿತ್ತಾರಾ....
Saturday, September 3, 2011
ಆಸೆ .. ಕಣ್ಣಿನ.. ನಶೆ.. !
ತಿಳಿ..
ನೀಲಿ
ಬಾನ
ಚಂದ್ರಮ..
ನಲಿ..
ಮಿನುಗುವ ತಾರೆಗಳು..!
ಅಲ್ಲೇಕೆ ..
ನೋಡಲಿ..?
ನಲ್ಲೆ..
ಆಸೆ ತುಂಬಿದ..
ಈ..
ಬೊಗಸೆ...
ಕಣ್ಣಲಿ..
ನಾ..
ಏರಿಸಿದಷ್ಟೂ..
ಇಳಿಯದ..
ನಿನ್ನ..
ಮೋಹಕ
ನಶೆ
ನನಗಿದೆಯಲ್ಲೇ....
Thursday, September 1, 2011
ನೆನಪುಗಳು.. ಹಸಿ.. ಹಸಿರಾಗಿ..
ಹನಿ
ಹನಿಯಾಗಿ..
ಜಲ
ಧಾರೆಯಾಗಿ..
ನೀ..
ಭೋರ್ಗರೆದು..
ಹರಿದು..
ಬರುವೆಯಲ್ಲ..
ನಲ್ಲಾ..
ನನ್ನೆಲ್ಲ..
ಇಲ್ಲಗಳ ನಡುವೆಯೂ..
ನೆನಪುಗಳೊಡನೆ..
ಹಸಿ ..
ಹಸಿರಾಗಿ...
Tuesday, August 30, 2011
ನನ್ನಾಸೆ.. ಭರವಸೆಗಳಿಗೆ ಅಕ್ಕರೆಯ ಸಕ್ಕರೆ ಬೆರೆಸಲು ಬಾ..
ಇರುಳು
ಕಪ್ಪಲ್ಲಿ..
ಆಳಕ್ಕಿಳಿಗಿಳಿದು..
ಕಳೆದು ಹೋಗುವ..
ಕನಸು..
ಕರಗಿದ
ಭಾವ..
ಘಳಿಗೆಗಳ..
ಮುಸುಕು ನೆನಪುಗಳ ..
ನಸುಕಿಗೆ..
ನನ್ನಾಸೆ.. ಭರವಸೆಗಳಿಗೆ ..
ಅಕ್ಕರೆಯ...
ಸಕ್ಕರೆ..
ಬೆರಸಲು..
ಬೆಳ್ಳನೆಯ ಬೆಳಕಾಗಿ..
ಬಾ...
ಗೆಳೆಯಾ.. ಬಾ..
Thursday, August 25, 2011
ತುಟಿ.. ಬಿಚ್ಚಲಾಗದ ಸಂಕೋಚ...ನನ್ನಾಸೆಗಳಿಗೆ..!
ನೀ..
ಎದುರಿದ್ದರೂ...
ತುಟಿ..
ಬಿಚ್ಚಲಾಗದ.. ಸಂಕೋಚ..
ಈ..
ಗರಿಗೆದರಿದ..
ನನ್ನಾಸೆಗಳಿಗೆ..
ಸಿಕ್ಕಿದ್ದು
ಮುಗುಳು ನಗೆಯಷ್ಟೆ..
ಹುಡುಗಿ..
ನನ್ನ ನಿನ್ನ ..
ಮೌನದಲಿ ಎಷ್ಟೊಂದು ಮಾತುಗಳು.. !!
Monday, August 22, 2011
ಅರೆ ಮುಚ್ಚಿದ ಕಂಗಳ ಮಾತು..
ಬಾಹುಗಳೊಳಗೆ..
ನವಿರು..
ಭಾವಗಳರಳಿಸುವ..
ನಿನ್ನ
ಬೆಚ್ಚನೆಯ..
ಬಿಸಿಯುಸಿರು..
ನಲ್ಲೆ..
ಅರೆ ..
ಮುಚ್ಚಿದ ಕಂಗಳಲಿ..
ಕೊನೆಯಾಗದ..
ಮೌನ
ಮಾತುಗಳು..
ಪ್ರೀತಿ..
ಮಂಜು.. ಮಂಜಾಗುವ..
ನಿನ್ನ ..
ಈ ..
ನೋಟ ಬಲು ಚಂದ ಕಣೆ...!
Friday, August 19, 2011
ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳು... ಜೈ ಹೋ !!
ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳು... ಜೈ ಹೋ !!
Wednesday, August 17, 2011
ತುಟಿ ಬಿಚ್ಚದ ಮಾತು ಕಣೆ ..
ಹಸಿ..
ಹಸಿರು..
ತಂಗಾಳಿಯ..
ಹರಿವ..
ನದಿಯ ಗಾಢ ಮೌನದಲೂ..
ಸುಡು..
ಬಿಸಿಲಿನ ಝಳ..
ನಲ್ಲೆ..
ನೀ..
ನನ್ನೊಳಗಿನ..
ಅವ್ಯಕ್ತ..
ಭಾವ..
ತುಟಿ ಬಿಚ್ಚದ ಮಾತು ಕಣೆ
.
Newer Posts
Older Posts
Home
Subscribe to:
Posts (Atom)