ಛಾಯಾ ಚಿತ್ತಾರಾ....
Tuesday, November 19, 2013
ನಿನ್ನ ಕಂಗಳಲಿ...ನನ್ನ ಕನಸು ಹಾಡಿದ ಹಾಡು...!
ಕತ್ತಲಲಿ
ಬೆಳ್ಳಿ
ಚಂದ್ರಮ ...
ಚುಕ್ಕಿ
ತಾರೆಗಳಿಗಾಗಿ..
ಬೆಳದಿಂಗಳಾಗಿ ಹಾಡಿದ ಹಾಡು..
ಮೊಗ್ಗರಳಿ
ಪುಳಕಿತ
ಹೂ..
ದುಂಬಿಗೆ
ಪರಿಮಳವಾಗಿ ..
ಪಿಸುಗುಟ್ಟಿ
ಹಾಡಿದ ಹಾಡು..
ನಿನ್ನ
ನಗುವ ಕಂಗಳಲಿ
ನನ್ನ
ಕನಸು ಹಾಡಿದ ಹಾಡು..
ಈ
ಬೆಡಗು
ಬಿನ್ನಾಣ..
ಸಂಭ್ರಮ
ಸೊಬಗು..
ಹಾಡಾಗಿ
ಹಾಡು..
ಹಾಡು
ಬಾ ನೀ ಹುಡುಗಿ..!
Sunday, October 13, 2013
ಮೌನ... ನುಡಿದು ನಡೆವ ಹೆಜ್ಜೆಗೆ... ಗೆಜ್ಜೆ ಕಟ್ಟುವೆ ಬಾರೆ....!
ಕತ್ತಲ
ಒಂಟಿ
ಮನದಲಿ
ನೆನಪುಗಳು ಗುನುಗುವ....
ನನ್ನ
ಮಿನುಗು
ಚುಕ್ಕಿ
ತಾರೆಗಳ
ಪ್ರೀತಿಯ
ಗೆಜ್ಜೆ ಕಟ್ಟುವೆ ಬಾರೆ...
ನಮ್ಮದೇ
ದಾರಿ..
ಇಬ್ಬರದೆಯೆಲಿ
ಈ
ಮೌನ..
ನುಡಿದು
ನಡೆವ
ಹೆಜ್ಜೆ
ಗೆ..
ಸಂಭ್ರಮದ
ಗೆಜ್ಜೆ
ಕಟ್ಟುವೆ ಬಾರೆ....
Tuesday, October 1, 2013
ಅವಳ ಪ್ರೀತಿ ಎಂದಿಗೂ ಮಾತನಾಡುವದಿಲ್ಲ...!
ಅವಳ
ಪ್ರೀತಿ
ಎಂದಿಗೂ
ಮಾತನಾಡುವದಿಲ್ಲ...
ಬಿಸಿ
ಬಿಸಿಯ
ಉಸಿರಲ್ಲಿ ರಂಗೇರುತ್ತವೆ..
ಕೆನ್ನೆಗಳ ಮೇಲೆ...
ಮೃದು
ಹೂಗಳ
ಸಿಹಿ
ನಗುವಿನ ನಾಚಿಕೆಯಂತೆ..
ಸಾವಿರ
ಆಸೆಗಳ ಸುಂದರ ಭಾಷೆಯ
ಭಾವ..
ಒಂಟಿ ಕತ್ತಲ
ಮೌನ
ಮನಕೆ ಆವರಿಸುವಂತೆ...
...
ಅರಳುತ್ತವೆ..
ಹಸಿ
ಹಸಿರ ಚಿಗುರ ಮೊಗ್ಗಿನಂತೆ..
ಒಳಗೊಳಗೆ
ನನ್ನೊಳಗೆ...
ಅವಳ
ಪ್ರೀತಿಯೇ ಹೀಗೆ..
ಎಂದಿಗೂ
ಮಾತನಾಡುವದಿಲ್ಲ...
Thursday, September 26, 2013
ಕಣ್ಣಂಚಿನ.. ಕುಡಿಮಿಂಚಲಿ ಗರಿಗೆದರುವ ಆಸೆಗಳಂತೆ...
ಎದುರಿದ್ದರೂ
ಎದೆಯೊಳಗೆ
ಹೇಳಲಾಗದ
ಢವ
ಢವಗಳ ಮಾತು ಕಂಪನ... ..
ಈ
ಬತ್ತದ
ಭಾವಗಳ
ಕಣ್ಣಂಚಿನೊಳಗಿನ
ಸಣ್ಣ
ಕುಡಿಮಿಂಚಲಿ ಗರಿಗೆದರುವ ಆಸೆಗಳು..
..
ಕಾತುರದ
ನನ್ನೆಲ್ಲ ಮೌನಗಳಿಗೆ
ನೀ
ಒಮ್ಮೆ
ಶಬ್ಧವಾಗು ಬಾ ಹುಡುಗಾ..
Tuesday, September 17, 2013
ಮಂಜು... ಮಂಜಾಗಿ.. ಹುಟ್ಟಿಸುವ ಹುಚ್ಚು ಭಾವಗಳು...
ಮಂಜು...
ಮಂಜಾಗಿ ಮುಂಜಾವು
ಹುಟ್ಟಿಸುವ
ಹುಚ್ಚು ಭಾವಗಳು...
ಹನಿ
ಹನಿಗಳಾಗಿ
ಕರಗಿ ಹೋಗುವ ಮುನ್ನ...
ನೀ
ಬಂದು ಬಿಡು ಗೆಳೆಯಾ...
ನನ್ನ
ಕಣ್ಣಾಸೆ
ಕನಸುಗಳ
ಮುದ್ದು
ಮುತ್ತಾಗಿ
ನನಗಾಗಿ
ನನಸಾಗಿ ನನ್ನೆದುರಿಗೆ...
Thursday, September 12, 2013
ಚಂದಮಾಮ.. ಮತ್ತೆ ಮತ್ತೆ... ನಕ್ಕ ಕಣೆ.. !
ನೀ..
ಕೊಟ್ಟು ಹೋದ
ನನ್ನ
ಒಂಟಿ
ಮೌನ
ರಾತ್ರಿ
ಕತ್ತಲ
ಆಗಸ ನೋಡುತ್ತಿತ್ತು...
ಚಂದದ
ಚಂದಿರ ಅಂದದಿ ನಗುತ್ತಿದ್ದ... !
ಅಶ್ಚರ್ಯವಾಯಿತು...
" ಇದು ಹೇಗೋ
ಮಾಮಾ.. ..
ನೀನೊಬ್ಬನೆ
ಈ
ಬೆಳಕಿಲ್ಲದ
ಬೆಳದಿಂಗಳದಿ
?.."
ಚಂದಮಾಮ..
ನನ್ನ
ನೋಡಿ
ಮತ್ತೆ
ಮತ್ತೆ ಸಿಹಿ ನಗು ನಕ್ಕ ಕಣೆ ...
ಥೇಟ್..
ನಿನ್ನ ಹಾಗೆ... !
Sunday, August 18, 2013
ಇನಿ.. ಇನಿತಾಗಿ.. ಇಬ್ಬನಿ ಹನಿಯಾಗಿ..ನೀ ಬಾ ಇನಿಯಾ..!
ಇನಿ..
ಇನಿತಾಗಿ..
ಇಬ್ಬನಿ ಹನಿಯಾಗಿ..
ನೀ
ಸನೀಹ
ಬಾ
ಇನಿಯಾ..
ಸಕ್ಕರೆ
ಸವಿ ಜೇನ
ಕನಸಲಿ..
ಅರೆ
ಕಣ್ಮುಚ್ಚಿದ ರೆಪ್ಪೆಯ
ಮುದ್ದು
ಮುದ್ದಿನಲಿ ಮುಚ್ಚಲು..
ನೀ
ಸಿಹಿ
ಮುತ್ತಾಗಿ ಬಾ ಗೆಳೆಯಾ...
ಇನಿ..
ಇನಿತಾಗಿ..
ಇಬ್ಬನಿ ಹನಿಯಾಗಿ..
ನೀ
ಸನೀಹ
ಬಾ
ಇನಿಯಾ...
( ರೂಪದರ್ಶಿ :: ಕುಮಾರಿ ಅರ್ಪಿತಾ ಕೂರ್ಸೆ.... )
Newer Posts
Older Posts
Home
Subscribe to:
Posts (Atom)