Thursday, September 26, 2013

ಕಣ್ಣಂಚಿನ.. ಕುಡಿಮಿಂಚಲಿ ಗರಿಗೆದರುವ ಆಸೆಗಳಂತೆ...

ಎದುರಿದ್ದರೂ
ಎದೆಯೊಳಗೆ ಹೇಳಲಾಗದ 
ಢವ
ಢವಗಳ  ಮಾತು  ಕಂಪನ... ..


ಬತ್ತದ
ಭಾವಗಳ
ಕಣ್ಣಂಚಿನೊಳಗಿನ 
ಸಣ್ಣ
ಕುಡಿಮಿಂಚಲಿ ಗರಿಗೆದರುವ ಆಸೆಗಳು....

ಕಾತುರದ
ನನ್ನೆಲ್ಲ ಮೌನಗಳಿಗೆ
ನೀ
ಒಮ್ಮೆ
ಶಬ್ಧವಾಗು ಬಾ ಹುಡುಗಾ..


15 comments:

  1. ಚಿತ್ರ ಕಾವ್ಯ ...
    ನೀಲ ರತ್ನಕ್ಕೊಂದು ಬಂಗಾರದ ಚೌಕಟ್ಟು ಹಾಕಿದಂತೆ...

    ReplyDelete
  2. Mattomme nimma kavanavannu 'EDE'yoLagiLisikonDe Prakaash ji...

    ReplyDelete
  3. ಕಣ್ಣಂಚಿನ ಕೂಡಿ ಮಿಂಚು ಇಲ್ಲಿ ಸಾದೃಶವಾಯಿತು.
    ರೂಪದರ್ಶಿಯವರಿಗೆ ಇಂತಹ ಒಳ್ಳೆಯ ಕಾವ್ಯ ಕಟ್ಟಲು ಕವಿಯನ್ನು ಪ್ರೇರೇಪಿಸಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿರಿ.

    ReplyDelete
  4. ಸುಂದರ ಸಾಲುಗಳು, ಅದಕ್ಕೊಪ್ಪುವ ಚಿತ್ರ... ವ್ಹಾವ್ ಗುರೂ....

    ReplyDelete
  5. sooper expression and sooper lines prakashanna....

    ReplyDelete
  6. ಹನಿ ಹನಿಯಾಗಿ ಸುರಿವ ಸೋನೆ ಮಳೆಯಂತೆ ಅಪರೂಪದ ಕಕ್ಕುಲತೆಯ ಭಾವ ಚೆನ್ನಾಗಿದೆ..

    ReplyDelete