Friday, February 13, 2015

ಮೆಲ್ಲನೆ ಮುದ್ದು ಮುತ್ತಿಡುವೆ ಬಾ .... ಈ ಮತ್ತಿನ ಕಣ್ಣಿನಲಿ.. !

ತುಟಿಯಲಿ
ಇದೀಗ
ಬಿರಿದ ಮೊಗ್ಗಿನಂತೆ
ಒಳಗೊಳಗೆ 
ನಗುವೆಯಲ್ಲೊ...
ನನ್ನ
ನಾಚಿ ಕೆಂಪೇರಿದ ಕೆನ್ನೆಗಳಲಿ...

ಅತ್ತಿತ್ತ 
ಸುಳಿದಾಡಿ 
ಮೆಲ್ಲನೆ ಮುದ್ದು ಮುತ್ತಿಡುವೆ 
ಬಾ
ಈ ಮತ್ತಿನ ಕಣ್ಣಿನಲಿ..

ಬಾ
ಬಾರೋ ಹುಡುಗಾ...

ಎಷ್ಟೂ 
ಅಂತ ಮುಚ್ಚಿಡಲೊ
ಬಚ್ಚಿಟ್ಟ 
ನಿನ್ನ  ಹುಚ್ಚು  ಕನಸುಗಳನು ?




1 comment:

  1. ಹುಚ್ಚು ಕನಸುಗಳನು ಮುಚ್ಚಿಟ್ಟು ಕಾಪು ಕಾದ ಲಲನೆ, ಇನಿಯನು ಕೂಡಿದೊಡನೆ ಕೊಡುವಳು ಮುತ್ತುಗಳನು ಬಡ್ಡಿ ಸಮೇತ.
    ಮೋಡಿ ಮಾಡುವ ಅವಳ ಕಣ್ಣುಗಳ ಸಮೋಹನಕೆ ಹುಡುಗನೂ ಕ್ಲೀನ್ ಬೋಲ್ಡ್..

    ಛಾಯಾಗ್ರಹಣಕ್ಕೆ: ೨೫
    ರೂಪದರ್ಶಿಗೆ: ೨೫
    ಕವನಕ್ಕೆ: ೫೦

    ReplyDelete