Wednesday, December 24, 2014

ನನ್ನ... ಚುಕ್ಕಿ ಚಂದ್ರಮ ಬೆಳ್ಳಿ ನಗು ನಗುವಾಗ...


ಹೇಗೆ 
ಹೇಳಲೇ  ಹುಡುಗಿ 
ನನ್ನೀ
ಬಚ್ಚಿಟ್ಟ ಭಾವಗಳ 
ಢವ 
ಢವಗಳ ಗದ್ದಲದಿ 
ನನ್ನೊಳಗಿನ ಮಾತುಗಳ 
ಮೌನ
ಮೌನವಾಗುವ ಮುನ್ನ.... 


ಒಮ್ಮೆಯಾದರೂ
ಬಾ
ನನ್ನ 
ಈ 
ಒಂಟೀ ಭಾವಗಳು
ಕತ್ತಲಲಿ
ತಾರೆಗಳ  ಎಣಿಸುವಾಗ.. 

ಬೆಳ್ಳಿ
ಬೆಳದಿಂಗಳಲಿ ಬಿದಿಗೆ ಚಂದ್ರಮ 
ಚುಕ್ಕಿ 
ನಗು  ನಗುವಾಗ... 

ಬಾ .. 
ಬಾರೇ  ಒಮ್ಮೆಯಾದರೂ 
ನೀ .... 

5 comments:

  1. ಚಂದದ ಸಾಲಿಗೆ ಚಂದ್ರಿಕೆ ರೂಪದರ್ಶಿ...

    ReplyDelete
  2. ಹೋಯ್ ಸಂಧ್ಯಾ ಪುಟ್ಟೀ...

    ಈ ಪ್ರೀತಿ ಎಷ್ಟು ಚಂದ ಅಲ್ಲವಾ ?.....

    ಬರೆದಷ್ಟೂ ಮುಗಿಯದೂ...
    ಅನುಭವಿಸದಷ್ಟೂ ಸಮಧಾನವಿರದು...

    ಕೊರತೆಯಲ್ಲೇ
    ಪ್ರೀತಿಯ ಸೆಲೆ ಇರುವದು... Thank u puttakkaa....

    ReplyDelete
  3. wah! very very lovely photo and poem...

    ReplyDelete
  4. ಮೊದಲ ಚಪ್ಪಾಳೆ ರೂಪದರ್ಶಿಯವರಿಗೆ, ಯಾಕೆಂದರೆ ಅವರೇ ತಾನೇ ತಮ್ಮ ಸಮಸ್ತ ಕಾವ್ಯಕೂ ಸ್ಪೂರ್ತಿ!

    ಮೌನವೂ ಮೌನವಾಗುವ ಮುನ್ನ ಬಾ ಎನ್ನುವ ಕವಿ ಆಶಯವಿದೆಯಲ್ಲವೇ ಅದೇ ನಿಜ ಒಲುಮೆಯ ಸಾಕ್ಷಾತ್ಕಾರ.

    ಬೆಳ್ಳಿ ಬೆಳದಿಂಗಳು ಬಿದಿಗೆ ಚಂದ್ರಮ ಎಂತಹ ರಸಿಕ ಕಲಾ ಸಜ್ಜಿಕೆ ತಮ್ಮದು. ವಾರೇವಾ...

    ReplyDelete
  5. ಮೌನ ಮಾತುಗಳನ್ನು ಉಳಿಸಿದರೆ
    ಮಾತು ಮೌನವನ್ನು ಕಳಿಸುತ್ತದೆ
    ಸೂಪರ್ ಚಿತ್ರಕ್ಕೆ ಸೂಪರ್ ಮಾತುಗಳು.. ಒಂದೊಕ್ಕೊಂದರ ಜುಗಲ್ ಬಂದಿ ಸೂಪರ್

    ReplyDelete