Friday, December 14, 2012

ಉಸಿರು ಉಸಿರಲಿ ಉಲಿಯುವ ಭಾವ ..



ಉಸಿರು 
ಉಸಿರಲಿ ಉಲಿಯುವ 
ಭಾವ ..
ಹಸಿ ..
ಬಿಸಿಯಲಿ ಕಂಪಿಸುವ ..
ನನ್ನೆಲ್ಲ
ಢವ 
ಢವಗಳು ..
ಪಿಸು
ಮಾತಾಗಬಾರದೇನೆ .. .. ಹುಡುಗಿ....
ತುಟಿಗಳಲಿ...
ನಿನ್ನ
ಕಣ್ಣಾಲಿಗಳಲಿ... .. ? ..



(ರೂಪದರ್ಶಿ  :: ಪಲ್ಲವಿ ಮತ್ತಿಘಟ್ಟ )
ಉದಯೋನ್ಮುಖ  ಕಿರುತೆರೆ, ಯಕ್ಷಗಾನ ಪ್ರತಿಭೆ 

27 comments:

  1. ನಿಮ್ಮೀ ಕವನವನ್ನು ಓದುತ್ತ ಓದುತ್ತ ನಾನು ಮತ್ತೆ ತರುಣನಾಗಿಬಿಟ್ಟೆ... ! ಭಾವ... ಪ್ರಕಾಶ ಭಾವ...! :)

    ReplyDelete
    Replies
    1. ನಿಮ್ಮಂಥಹ ಹಿರಿಯರ ಆಶೀರ್ವಾದ ಯಾವಾಗಲೂ ಇರಲಿ....

      ಜೈ ಹೋ ಸರ್ ಜಿ....

      Delete
  2. ಎದೆಯಾಳದ ಕಡಲಲ್ಲಿ ಸಣ್ಣಗೆ ಅಪ್ಪಳಿಸುವ ಒಂದು ಅಲೆ
    ಮಾತಿನ ಮುತ್ತಾಗಿ ಹೊರಬರಲು ಕಾಯುತ್ತಿದೆ
    ಕಣ್ಣಂಚಲಿರುವ ತೆರೆ ತನಗರಿಯದೆ ಮಿಟುಕಿಸುತ್ತಿದೆ
    ಇದರ ಸಂಗಮವೇ ಕಿರುನಗೆ..ಹೂ ನಗೆ..
    ಸುಂದರ ಚಿತ್ರ-ಗೀತೆ...

    ReplyDelete
    Replies
    1. ಪ್ರೀತಿಯ ಶ್ರೀ....

      ನಿಮ್ಮ ಪ್ರತಿಕ್ರಿಯೆ ಸ್ಪೂರ್ತಿದಾಯಕ...
      ಇನ್ನೊಂದಿಷ್ಟು ಸಾಲುಗಳನ್ನು ಬರೆಯಬಹುದು...

      ತುಂಬಾ ತುಂಬಾ ಧನ್ಯವಾದಗಳು...

      Delete
  3. ಢವ ಢವಗಳು ಪಿಸುನುಡಿದರೆ ಕಣ್ಣಾಲಿ ತೆರೆದು
    ಮನ ಮನಗಳು ಬೆರೆತಾವು ತಮ್ಮೊಳ ಹೊರ ಮರೆತು.........

    ReplyDelete
    Replies
    1. ಆಜಾದೂ...

      ಢವ ಢವಗಳು ಹಾಡುವ ಹಾಡುಗಳು ಬಲು ಸೊಗಸು ಅಲ್ವಾ?

      ಧನ್ಯವಾದಗಳು ಚಂದದ ಕವನ ಪ್ರತಿಕ್ರಿಯೆಗೆ...

      Delete
  4. ಚಿತ್ರ ತುಂಬಾ ಚೆನ್ನಾಗಿದೆ...ಅದಕ್ಕೆ ತಕ್ಕ ಭಾವಪೂರಣ ಸಾಲುಗಳು...

    ReplyDelete
    Replies
    1. ಧನ್ಯವಾದಗಳು ಸುಮತಿ ಪುಟ್ಟಕ್ಕಾ...

      Delete
  5. ಮನದ ಭಾವಗಳು,
    ಮಾತಾದಾಗ....
    ಬಿಟ್ಟ ಉಸಿರುಗಳು..
    ಮುತ್ತಾದವು....

    ಸುಪರ್... ಕವನ...ಚಿತ್ರ...

    ReplyDelete
    Replies
    1. ದಿನಕರ...

      ಚಂದದ ಕವನ ಪ್ರತಿಕ್ರಿಯೆಗೆ ಧನ್ಯವಾದಗಳು . ಜೈ ಹೊ.....

      Delete
  6. ನಿಜವಾಗಿಯೂ ಆ ಸಾಲುಗಳು ಮುತ್ತುಗಳು ಪ್ರಕಾಶಣ್ಣಾ...
    ಡವಡವ ಶಬ್ಧಕ್ಕೆ ಆಷ್ಟೆಲ್ಲಾ ಭಾವತುಂಬಬಹುದೆಂದು ಯೋಚಿಸಿಯೂ ಇರಲಿಲ್ಲ..
    ಇಷ್ಟವಾಯ್ತು ಸಾಲುಗಳು..
    ಇಷ್ಟವಾಯ್ತು ಚಿತ್ರವೂ ಕೂಡಾ...


    ReplyDelete
    Replies
    1. ಪ್ರೀತಿಯ ಚಿನ್ಮಯ...

      ನನ್ನ ಪ್ರೇಮದ ದಿನಗಳಲ್ಲಿ ಎಷ್ಟೋ ಬಾರಿ ಅನ್ನಿಸಿದ್ದುಂಟು..
      "ಢವ...
      ಢವಗಳು ಮಾತಾಗಿದ್ದರೆ... " ಅಂತ

      ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

      Delete
  7. pisu maathige nasu naguva baale....

    ReplyDelete
  8. ನಿಮ್ಮ ಸಾಲುಗಳು...ರೂಪದರ್ಶಿ ಇಬ್ಬರೂ ಸೂಪರ್.....

    ReplyDelete
  9. ಯಾವ ಭಾವವು ಎದೆಯಾಳದಲಿ ಬದುಕೆಲ್ಲ ಕಂಪನದ ಹಸಿಯನುಳಿಸಿ ಕಾಡುವುದೋ ಅಂತಹ ಭಾವ ಇಲ್ಲಿ ತೆರೆದುಕೊಂಡ ರೀತಿಯೇ ಅನನ್ಯ.

    ReplyDelete
  10. The Photo is exposed in very nice manner.

    ReplyDelete
  11. ಸುಂದರ ಚಿತ್ರಕ್ಕೆ ತಕ್ಕ ಸೊಗಸಾದ ಸಾಲುಗಳು ಪ್ರಕಾಶಣ್ಣ....ಸೂಪರ್....

    ReplyDelete
  12. ಪ್ರಕಾಶಣ್ಣ;ಸೂಪರ್ ಹನಿಗವನ.ನನ್ನದು ಮತ್ತದೇ ಪ್ರಶ್ನೆ "ಪ್ರೀತಿ ,ಪ್ರೇಮದ"ಹನಿಗಳ ಸಂಕಲನ ಯಾವಾಗ ಹೊರ ತರುತ್ತೀರಿ?all the best.

    ReplyDelete