Wednesday, July 25, 2012

ಆಗಲೂ ಈಗಲೂ .. ಸಿಕ್ಕಿದ್ದವು ..ಹೂಗಳು ನನಗೆ...ಸಿಕ್ಕಿದ್ದವು ಹೂಗಳು ನನಗೆ...


ನಕ್ಕಿದ್ದವು..
ಕೆಲವಷ್ಟು ನೂಕಿದ್ದವು...
ಚಚ್ಚಿ 
ಚುಚ್ಚಿದ್ದವು...
ರಕ್ತ ನೋವು ತಂದಿದ್ದವು...


ಸಿಕ್ಕಿದ್ದವು ಹೂಗಳು ನನಗೆ...


ಹಾರಿ
ಹೋಗಿದ್ದವು ಹಲವು...
ಹಿಂದೆ 
ಉಳಿದು ಬಿಟ್ಟಿದ್ದವು ..
ಕೆಲವು
ಬಿಸಿಲಿಗೆ ಬಾಡಿ ಹೋಗಿದ್ದವು..


ಮೊಗ್ಗು
ಅರಳಿದ್ದವು..
ಹಸಿರು ಹುಲ್ಲು ಹಾಸುಗಳಾಗಿದ್ದವು..
ಬದುಕಿನುದ್ದಕ್ಕೂ..
ಸುಂದರ 
 ಪುಳಕದ ಪಕಳೆ ಪರಿಮಳಗಳಾಗಿ..
ಜೊತೆ ಜೊತೆಯಾಗಿದ್ದವು..


ಗುರುತು
ಇಟ್ಟಿದ್ದವು ಕೆಲವು... 
ಕಾಣದೆ 
ಕಾಲದೊಳಗೆ ಕಲೆತುಹೋಗಿದ್ದವು ಹಲವು..
ಮರೆಯದೆ..
ಮರೆಯಾಗದೆ ಉಳಿದು ಬಿಟ್ಟಿದ್ದು ನನ್ನೊಲವು...


ಆಗಲೂ..
ಈಗಲೂ
ಸಿಕ್ಕಿದ್ದವು ಹೂಗಳು ನನಗೆ...


23 comments:

 1. ಎಲ್ಲಿಂದ ಸಿಗುತ್ತವೆ ಶಬ್ದ ಪುಂಜ... ಜೋತೆಗೆ ಫೋಟೋ ..........
  nice prakashanna

  ReplyDelete
  Replies
  1. ಥ್ಯಾಂಕ್ಸು.... ಜೀ...

   ವಂದನಾ ಕೀ ಜೈ !

   Delete
 2. ಸೂಪರ್ ಚಿತ್ರ-ಗೀತೆ...
  (ನಿಮ್ಮ ಚಿತ್ರ-ಪದದಿಂದ ಪ್ರೇರೇಪಿತ...)
  ಹಸಿರಲ್ಲಿ ಉಸಿರು ತುಂಬಿ ಕೆಂಪಾದಾಗ...
  ನಗುವ ಸರದಿ ಹೂವಿನದು..
  ನಕ್ಕು ನಕ್ಕು ಸುಸ್ತಾಗಿ ಸುಕ್ಕಾದಾಗ..
  ಅರಳುವ ಸರದಿ ಮೊಗ್ಗಿನದು..
  ಅರಳಿದ ಸುಮ ಮೂಡಿವ ಬಾಲೆ..
  ಮನದಲ್ಲಿ ಹಾಕುವಳು ರಂಗೋಲೆ..

  ReplyDelete
  Replies
  1. ಶ್ರೀಕಾಂತ್ ಜೀ..

   ಬಹಳ ಸುಂದರ ಸಾಲುಗಳ ಪ್ರತಿಕ್ರಿಯೆ...

   Jai hO !!

   Delete
 3. ಹೂವಿನಂತಹ ಕವನವಿದು..
  ಬದುಕಲ್ಲಿ ಪಡೆದುಕೊಂಡ ಹೂವುಗಳೆಷ್ಟೋ...
  ಕಳೆದುಕೊಂಡ ಹೂವುಗಳೆಷ್ಟೋ ..
  ಜೊತೆಯಿರುವ ಜೊತೆಯಾಗುವ ಹೂವುಗಳೆಷ್ಟೋ..
  ನಾನ್ಯಾವ ಹೂವೋ ಇದರಲ್ಲಿ...

  ReplyDelete
  Replies
  1. ಸಂಧ್ಯಾ...

   ನಾವೆಲ್ಲ ಯಾವ ಹೂಗಳೋ ಗೊತ್ತಿಲ್ಲ...

   ಬಹಳ ಚಂದದ ಪ್ರತಿಕ್ರಿಯೆ... !

   ಇಲ್ಲಿ ಹೂ ಅಂದರೆ ಬಾಂಧವ್ಯ...
   ಅಥವಾ
   ಸಂದರ್ಭ ಅಂತ ತೆಗೆದುಕೊಂಡರೆ ...
   ಅವುಗಳಿಗೂ ಸರಿಯಾಗಿ ಹೊಂದುತ್ತದೆ...

   ಆಗಲೂ ...
   ಈಗಲೂ ಹೂಗಳು ಸಿಗುತ್ತವೆ ನಮಗೆಲ್ಲರಿಗೂ....

   Delete
 4. wwwwaaah! the flow, the thought and the underlying story...complementing picture.. Thank you for the treat!

  ReplyDelete
  Replies
  1. ಆರ್.ಕೆ...

   ಹೂವೆಂದರೆ ಪ್ರೀತಿ ಎನ್ನೋಣ...
   ಆಗ ಇನ್ನಷ್ಟು ಅರ್ಥಗಳು...

   ಯಾವ ಪ್ರೀತಿನೂ ಆಗಬಹುದು..
   ಬದುಕಿನ ಎಲ್ಲ ಬಾಂಧವ್ಯಗಳ ಪ್ರೀತಿ... ಈ ಹೂವುಗಳು..

   ಧನ್ಯವಾದಗಳು...

   Delete
 5. ನಕ್ಕು ನಗಿಸುವ ಸುಮಗಳು
  ಸುಮ್ಮನಾಗಿಸುವ ಮನಗಳು
  ಸುಮನಕೊಂದು ಸುಮವಾಗಿ
  ನಗುವುದೇ ಸದಾ ಮನವಾಗಿ
  ಬೆಳೆಅಯಲಿ ಹಲವು ಸುಮವನಗಳು

  ReplyDelete
  Replies
  1. PuTTannaa...
   ಕಾಲೇಜು ದಿನಗಳ ಗೆಳೆಯನೊಬ್ಬ ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿದ್ದ..
   ರಾತ್ರಿ ಅಪಘಾತವಾಗಿದೆ..
   ಯಾರೋ ಆಸ್ಪತ್ರೆಗೂ ಸೇರಿಸಿದ್ದಾರೆ..

   ನಮಗೆ ವಿಷಯಗೊತ್ತಾಗಿದ್ದು ಮರುದಿನ ಬೆಳಿಗ್ಗೆ..

   ಆತಂಕದಿಂದ ಹೋಗಿ ನೋಡಿದರೆ ಅಲ್ಲಿ ಅವನ ಮಡದಿ.. ಮಕ್ಕಳು ಮಾತ್ರ ಇದ್ದರು..

   ಅಲ್ಲಿ..
   ಹತ್ತಿರದ ಬಂಧುಗಳು ಯಾರೂ ಇರಲಿಲ್ಲ...
   ಅಣ್ಣ, ತಮ್ಮ
   ಅತ್ತೆ ಮಾವ ಎಲ್ಲರೂ ಇದೇ ಊರಲ್ಲಿದ್ದಾರೆ...
   ವಿಷಯವೂ ಅವರಿಗೆ ಗೊತ್ತಾಗಿದೆ.. ಒಬ್ಬರೂ ಬರಲಿಲ್ಲ...

   ಯಾವಾಗಲೂ ಮಾತು ಕಡಿಮೆಯಾಡುವ ಆತ ಚೆನ್ನಾಗಿ ಹಣ ಸಂಪಾದಿಸಿದ್ದಾನೆ...

   ಕಳೆದ ಮೂರು ನಾಲ್ಕು ದಿನಗಳಿಂದ ಯಾಕೋ ಮನಸ್ಸೇ ಸರಿ ಇಲ್ಲ...

   "ಸಿಕ್ಕಿದ್ದವು ಹೂಗಳು ನನಗೆ...

   ನಕ್ಕಿದ್ದವು..
   ಕೆಲವಷ್ಟು ನೂಕಿದ್ದವು...
   ಚಚ್ಚಿ
   ಚುಚ್ಚಿದ್ದವು...
   ರಕ್ತ ನೋವು ತಂದಿದ್ದವು...

   ಸಿಕ್ಕಿದ್ದವು ಹೂಗಳು ನನಗೆ...

   ಹಾರಿ
   ಹೋಗಿದ್ದವು ಹಲವು...
   ಹಿಂದೆ
   ಉಳಿದು ಬಿಟ್ಟಿದ್ದವು ..
   ಕೆಲವು
   ಬಿಸಿಲಿಗೆ ಬಾಡಿ ಹೋಗಿದ್ದವು.. "

   ನಿರೀಕ್ಷೆಗಳ ಜಗತ್ತಿನಲ್ಲಿ ಈ ಸಂಬಂಧಗಳಿಗೇನು ಬೇಕು ?

   Delete
 6. ಹೂಗಳೇ ಹಾಗೆ ಸಾರ್,

  ಅವು ನೋಡಲು, ಮುಡಿಯೇರಲೂ ಪ್ರಾಪ್ತಿಬೇಕು.

  ನಿಮ್ಮ ಇತ್ತೀಚಿನ ಕವನಗಳಲ್ಲಿ ಅತ್ಯುತ್ತಮ ಹೂರಣ ಹೊಂದಿರುವ ಕವನವಿದು.

  ReplyDelete
  Replies
  1. ಬದರಿ ಸರ್...

   ಬದುಕೆಂಬ ಉಪವನದಲ್ಲಿ..
   ಬಾಂಧವ್ಯವೆಂಬ ಹೂಗಳು...

   "ಸಿಕ್ಕಿದ್ದವು ಹೂಗಳು ನನಗೆ..
   ಒಂಟಿ
   ಬಿಸಿಲಲ್ಲಿ ಬಾಡಿಸಿದ್ದವು...ಹಲವು..
   ನೆರಳು..
   ಛಾವಣಿಯಾಗಿದ್ದವು ಹಲವು... "

   ನನಗೆ ಸಂಧ್ಯಾರವರ ಸಾಲುಗಳೂ ಇಷ್ಟವಾದವು..

   ನಾವ್ಯಾವ ಹೂಗಳೋ ಯಾರಿಗೆ?

   ಚಂದದ ಹೂ ಬಯಸುವ ನಾವೂ ಕೂಡ ಅಂದದ ಹೂ ಆಗಿರಬೇಕಲ್ಲವೆ?

   ಬದರಿ ಸರ್ ಧನ್ಯವಾದಗಳು...

   Delete
 7. ಪ್ರಕಾಶಣ್ಣ,

  ಫೋಟೋ ಸೂಪರ್........ತಕ್ಕಂತೆ ಸುಂದರ ಸಾಲುಗಳು.....ಲೈಕ್ ಇತ್ತ್ ಮರ್ರೆ....ಓದುಕ್ ಕುಶಿ ಆತ್ತ್.....ಜೈ ಹೋ...

  ReplyDelete
 8. ಕವಿತೆಯನ್ನು ಒಂದೊಂದು ಸಾರಿ ಓದಿದಾಗಲೂ , ಒಂದೊಂದು ಅರ್ಥ ಬರುತ್ತಿದೆ. ಚಿತ್ರಕ್ಕೆ ಒಪ್ಪುವ ಕವಿತೆ.ನನಗನ್ನಿಸಿದ್ದು ಇದೂ ಹಳೆಯ ನೆನಪಿನ ಮೂಟೆಯಿಂದ ಬಂದಾ ನೆನಪಿನ ಹೂಗಳ ಬಗ್ಗೆಯಾ ಅಂತಾ ??? ಒಟ್ಟಿನಲ್ಲಿ ಹೂ ಅನ್ನೋ ಪದದಲ್ಲಿ ಬಹಳಷ್ಟು ಬಹಳಷ್ಟು ಅರ್ಥ ಅಡಗಿದೆ ...............................!! ಇದು ಆತ್ಮ ಮಂಥನದ ನಿವೇದನೆಯಾ ಪ್ರಕಾಶಣ್ಣ ?? ಒಟ್ಟಿನಲ್ಲಿ ಈ ಕವಿತೆ ಕೃಷ್ಣ ಗಾರುದಿಯಂತಿದೆ.ಜೈ ಹೋ ಹೂಗಳೇ ನೆನಪಿನ ಹೂಗಳೇ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 9. ಆ ಗೆಳೆಯ ಬೇಗ ಚೇತರಿಸಿಕೊಳ್ಳಲಿ ಸಾರ್.

  ಅವರ ಬಂಧು ಮಿತ್ರರೂ ಗೆಳೆಯರು ಅವರಿಗೆ ಮನೋಧೈರ್ಯ ತುಂಬಲಿ.

  ನನ್ನದು ರಕ್ತದ O+ ಗುಂಪು. ಬೇಕಾದರೆ ಒಂದು sms ಮಾಡಿ ಸಾಕು.

  ReplyDelete
  Replies
  1. ಬದರಿ ಸರ್...
   ಪ್ರಾಣಕ್ಕೇನೂ ಅಪಾಯವಿಲ್ಲ..
   ಅದೃಷ್ಟವಶಾತ್ ನನ್ನಗೆಳೆಯನಿಗೆ ಇದ್ಯಾವುದೂ ಸಮಸ್ಯೆ ಆಗಲಿಲ್ಲ...

   ಈ ಬೆಂಗಳೂರಿನ ಕಾಂಕ್ರೀಟ್ ಅರಣ್ಯದಲ್ಲಿ ಅವನಿಗೆ ಯಾರೂ ಹತ್ತಿರದಲ್ಲಿ ಇಲ್ಲ...
   ಅದು ಬೇಸರವಾಯಿತು...

   ಅವನೀಗ ಚೇತರಿಸಿಕೊಳ್ಳುತ್ತಿದ್ದಾನೆ..

   ನಿಮ್ಮ ಪ್ರೀತಿ..
   ಕಾಳಜಿಗೆ ಹೃದಯ ತುಂಬಿ ಬಂದಿದೆ... ಧನ್ಯವಾದಗಳು..

   Delete
 10. ಅಬ್ಬಾ ಪ್ರಕಾಶಣ್ಣ....!! ಅತ್ಗೆ ಫೋಟೋನೇ ಅದೆಷ್ಟು ಚಂದ ಮಾಡಿ ತೆಗದು ಎಂತ ಮಸ್ತ್ ಕವನ ಬರಿತ್ಯಪ...!! (ಅತ್ಗೆನು ಚಂದನೆ ಇದ್ದು ಹೇಳದು ಸೆಕೆಂಡರಿ...!) :)

  ReplyDelete
 11. ನಕ್ಕಿದ್ದವು..
  ಕೆಲವಷ್ಟು ನೂಕಿದ್ದವು...
  ಚಚ್ಚಿ
  ಚುಚ್ಚಿದ್ದವು...
  ರಕ್ತ ನೋವು ತಂದಿದ್ದವು.
  ಜೀವನಕ್ಕೆ ತುಂಬಾ ಚೆನ್ನಾಗಿ ಹೊಲಿಸಿದ್ದೀರ ಪ್ರಕಾಶಣ್ಣ ...ಇಷ್ಟ ಆತು

  ReplyDelete
 12. ಪ್ರಕಾಶಣ್ಣ;ಈ ಪ್ರಪಂಚವೇ ಒಂದು ಹೂವಿನ ತೋಟ!ನಾವೆಲ್ಲಾ ಇಂದಿದ್ದು ನಾಳೆ ಬಾಡುವ ಹೂವುಗಳು.ಚೆಂದದ ಫೋಟೋಗೆ ಅಂದದ ಕವಿತೆ.

  ReplyDelete
 13. sikkida sundara hugalu kaayalaagalilla...hubanada saviyaada gandha kadiyuva kalla pavananiddane...namma badukina banadalli baadida hugalige aa samajada prakhara surya kirana taagite??uttaravilladanuru prashnegalanaduve nakka chandira...
  heeliddu eegaste kela hoo aralide..kela moggide..avugalige ninna ananta premada beli haaku..yedeya bhaavagala neerunisu...sundara ee ninna baduka hubana ulisu..belesu...
  nimma sundara kavanakke aparupada chitrakke nanna kaavya kaanike shyaama

  ReplyDelete
 14. ಚಿತ್ರ-ಕವನ ಎರಡೂ ಸೂಪರ್..

  ReplyDelete