Tuesday, September 27, 2011

ಹಸಿರು ಮೌನದ.. ಮಾತುಗಳಂತೆ...!



ಕಣ್ಣು...
ಗುಳಿ ಕೆನ್ನೆ.. ತುದಿ ಗಲ್ಲದಲಿ...
ನಿನ್ನ..
ಹೂ ...
ನಗುವಾಗಿ...

ಈ...
ಹಸಿರು ಮೌನದ..
ಮುಗಿಯದ..
ಮಾತುಗಳಂತೆ...

ನಾ...
ನಿನ್ನಂದದ ಚಂದದ...
ನಿನ್ನಿಷ್ಟದ ...
ಬಣ್ಣಗಳಾಗಿ..


ನಲ್ಲೆ..
ನಿನ್ನೊಳಗೇ..
ನಾನಾಗಿ..
ನಾನಿದ್ದುಬಿಡಲೇ ...?







15 comments:

  1. ಪ್ರಕಾಶಣ್ಣ,
    ಹೇಗೆ ಬರೀತಿರಿ ಇಷ್ಟು ಚಂದದ ಕವನಗಳನ್ನು?
    ಆ ಕಲೆ ನಮಗೂ ಸ್ವಲ್ಪ ಹೇಳಿಕೊಡಿ.......!

    ReplyDelete
  2. ಪಕ್ಕು ಮಾಮ,,, ಸೂಪರಿ ಸರ...... ಮುಂದಿನ ಬುಕ್ ರಿಲೀಸ್ ,, ಬರಿ ಕವನಗಳದ್ದೆ ಅಂತ ಕಾಣುತ್ತೆ...

    ReplyDelete
  3. ಹಸಿರ ಕಾನನದಲ್ಲಿ ನಿಂತು , ನಿರ್ಮಲ ವಾತಾವರಣದಲ್ಲಿ , ನಿರ್ಮಲ ಪ್ರೀತಿಯಿಂದ ಬರೆದ ಸುಂದರ ಕವಿತೆ. ರಸಿಕ ಕವಿಗೆ ಜೈ ಹೋ.

    ReplyDelete
  4. ತಂಪು ಹಸುರಿನ ಹೊಳೆಯುತಿಹ ಹೂಬಿಸಿಲು
    ಕೇಳದೆಯೇ ತರುತಿಹುದು
    ನಿನ್ನದೇ ನೆನಪು

    ಬೆಚ್ಚಗಾಗಿಸಿ ಕೆನ್ನೆ, ತಾಳ ತಪ್ಪಿಸಿ ಎದೆಯ
    ಕಾಡುವುದು ಮತ್ತೆ ದಿನವಿಡೀ
    ನಿನ್ನದೆ ಕನಸು !

    ReplyDelete
  5. ಪ್ರಕಾಶಣ್ಣ ತುಂಬಾ ಚನ್ನಾಗಿದ್ದು......ತುಂಬಾ ಇಷ್ಟ ಆತು.......:)

    ReplyDelete
  6. baduke hasiru....
    prIti beretaaga.......

    very nice....

    ReplyDelete
  7. ನಲ್ಲೆ.....,
    ಒಲ್ಲೇ ಎನ್ನದೆ...
    ನಿನ್ನ ಕಣ್ಣಂಚು
    ಕೆನ್ನೆಯ ಗುಳಿ
    ಕಿರುನಗುವಿನಲ್ಲೋ
    ಎಲ್ಲೋ.....
    ನನಗೊಂದಿಷ್ಟು
    ಜಾಗ ಕೊಡೇ!

    ಸೂಪರ್ ......!

    ReplyDelete
  8. Tumba chennagide Anna.......... :-)

    ReplyDelete
  9. ನಗುವಿನ ಅರಳುವಿಕೆಯ ಮನೋಜ್ಞ ಅಭಿವ್ಯಕ್ತಿ ಮೊದಲ ಪ್ಯಾರಾದಲ್ಲೇ ಇದೆ ಸಾರ್.

    ಎರಡನೇ ಪ್ಯಾರದಲ್ಲಿ ಪ್ರಕೃತಿಯ ಸೀರೆ - ಅಂದರೆ ಹಸಿರನ್ನು ಮೌನ ಮತ್ತು ಮಾತುಗಳಲ್ಲಿ ಕಟ್ಟಿಡುವ ಪ್ರಯತ್ನ.

    ಮೂರನೇ ಪ್ಯಾರಾಗೆ ಬಂದಾಗ ಚಿತ್ತಾರವಾಗಿ ವರ್ಣರಂಜಿತ ಆಗುತ್ತದೆ.

    ಕಡೆಯಲ್ಲಿ ಲೀನವಾಗುವ ಅವಳನ್ನು ಸೇರುವ ತುಡಿತ ಸಮರ್ಥವಾಗಿ ಮೂಡಿ ಬಂದಿದೆ.

    ಪ್ರಕಾಶಣ್ಣನ ಕಾವ್ಯ ಶೈಲಿ ಅನನ್ಯ ಮತ್ತು ಅನುಕರಣಿಯ...

    ReplyDelete
  10. ಚಿತ್ರದಂತೆ , ಕವಿತೆ ಕೂಡ ಹಸಿರಾಗಿದೆ ...

    ReplyDelete
  11. ಸಿಮೆಂಟಣ್ಣಾ ಸೂಪರೋ ಸೂಪ್ಪರ್......

    ReplyDelete
  12. sooper kanri heege kelidre beda annolla ....

    ReplyDelete