Thursday, September 22, 2011

ನೋವಿನಲಿ.. ನರಳುವ.. ನೆರಳಿವೆ....




ಬೆಳಕಿನಲಿ...
ನಗು  ಮುಖ...
ನಾ..
ಒಳಗೊಳಗೆ ಉಮ್ಮಳಿಸಿ..
ಬಿಕ್ಕಿದರೂ..
ಬರ 
ಬಾರದೆ ಉಳಿವ ಹನಿಗಳು...

ನಿನ್ನ..
ನೆನಪ ಛಾಯೆಯ ನೋವಲಿ...
ನರಳಿ..
ನರಳುವ..
ನೆರಳುಗಳು..


ನಲ್ಲಾ...

ನನ್ನ..
ಕತ್ತಲಲಿ..
ನಿನಗೆ ಕಾಣದ..
ನಿನ್ನದೇ.. ಚಿತ್ರಗಳು.....





9 comments:

  1. ನಿ
    ನಯ ಈ
    ಪರಿಯ
    ಚಿತ್ತಾರವಂ
    ಪಿಡಿದು
    ಭಾವದೋಕುಳಿಯೊಳ್ಮೆರೆವ
    ನುಡಿಯಾಟವನೆಂತು
    ಪೊಗಳಲಿ...
    ಮೆಚ್ಚಿ ಅಹುದಹುದೆನ್ನದೇ
    ಸುಮ್ಮಾನಿರಲಾಗದಯ್ಯಾ
    ಜಂಬುಕೇಶ್ವರಾ...

    ReplyDelete
  2. ವ್ಹಾವ್ ಎರಡು ರೀತಿಯಲ್ಲೂ ನನ್ನ ಮನ ಗೆದ್ದ ಪೋಸ್ಟ್ ಇದು:

    1. ಲಗತ್ತಿಸಿರುವ ಫೋಟೋದಲ್ಲಿ ನೀವು ಬೆಳಕನ್ನು ಬಳಸಿರುವ ರೀತಿ, exposure, shutter speed, composition, framing ಮತ್ತು visualization ಎಲ್ಲವೂ super!

    2. ಒಳ ಮುಖ / ಹೊರ ಮುಖ, ಬೆಳಕು / ನೆಳಲು ಮತ್ತು ಬರ / ಹಸನುಗಳ ಸಮರ್ಥ ಅಭಿವ್ಯಕ್ತಿ ಇಲ್ಲಿದೆ. ನಿಮ್ಮ ಕವನಗಳ ಒಳ ತೋಟಿ ಉಳಿಸಿಕೊಂಡ ಅತ್ಯುತ್ತಮ ಕವನ.

    ReplyDelete
  3. ಆಜಾದು...

    ಆ.. ಜಾದು ಮಾಡತಿಯಲ್ಲೋ ಶಬ್ಧಗಳಲ್ಲಿ... ಜೈ ಹೋ !!

    ಬೆಳಕಿನ
    ಛಾಯೇಯಲಿ ನಗು ಮುಖ..
    ಒಳಗೊಳಗೆ..
    ಅತ್ತರೂ..
    ಶಬ್ಧವಾಗದ...ಬಿಕ್ಕಳಿಕೆಗಳು..!

    ಗೆಳೆಯಾ..

    ಒಂಟಿ..
    ಕತ್ತಲಲಿ..
    ಕಾಡುವ ನಿನ್ನಯ ಚಿತ್ತಾರಗಳು...
    ನರಳಿ ನರಳುವ..
    ನಿನ್ನ
    ನೆರಳುಗಳು..ನೆನಪುಗಳು..!

    ReplyDelete
  4. prakaashanna photo super agiddu....:) innu kavana kooda channaagiddu..........:)

    ReplyDelete
  5. prakash sir, photo n kavana yeraduu super....
    ***********
    Azad sir avra blog n comments yelladarallu modi maadibiduttare..seLedu biduttare...

    ReplyDelete
  6. ಪ್ರಕಾಶಣ್ಣ............


    ನಿನಗಾಗಿ ಕಾದು
    ಹಗಲು ಕಳೆಯುತಿದೆ
    ಕತ್ತಲು ಇಳೆಯ
    ಆವರಿಸುತಿದೆ
    ಬರಬಾರದೇ ಬೇಗ
    ನಲ್ಲೆಯರಮನೆಗೆ........................!


    Super..................

    ReplyDelete