Thursday, September 15, 2011

ಗಾಢ ಮೌನದ ಪ್ರೇಮಕೆ.....




ಹೃದಯದ..
ಮಾತೆಲ್ಲ ಕಣ್ಣಲ್ಲಿ ತುಂಬಿ..
ನೀ..
ನೋಡುವ ನೋಟ..
ನನ್ನೆದೆಯಲ್ಲಿ ಬಿಟ್ಟಿರುವೆಯಲ್ಲ..

ಈ 
ರಂಗು ರಂಗಿನ.. 
ಸಂಜೆಯಲಿ..
ತುಸು ತುಸು.. ನಷೆಯೇರುವ..
ನಿನ್ನಯ ಗುಂಗು..

ನಲ್ಲೆ...

ಸಾಕೆನಗೆ..
ಈ..
ತುಟಿಗೆ ಬಾರದ.. 
ನನ್ನ..
ಗಾಢ ಮೌನದ ಪ್ರೇಮಕೆ...

17 comments:

  1. BOMBAT PRAKASHANNA .... nimage neve Sati [;0]

    ReplyDelete

  2. ರಂಗು ರಂಗಿನ..
    ಸಂಜೆಯಲಿ..
    ತುಸು ತುಸು.. ನಷೆಯೇರುವ..
    ನಿನ್ನಯ ಗುಂಗು..

    ನಲ್ಲೆ...

    ಸಾಕೆನಗೆ..
    ಈ..
    ತುಟಿಗೆ ಬಾರದ..
    ನನ್ನ..
    ಗಾಢ ಮೌನದ ಪ್ರೇಮಕೆ...ಸಂಜೆಯ ರಂಗಿನೋಕುಳಿಗೆ ಮತ್ತೇರಿಸುವ ಪ್ರೇಮ ಚಿತ್ತಾರದ ಸಾಲುಗಳು .....!!!! ಜೈ ಹೋ .
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  3. ಧನ್ಯವಾದಗಳು ಮಹೇಶ್ ಗೌಡ್ರೆ..


    ರಂಗು ರಂಗಿನ..
    ಸಂಜೆಯಲಿ.
    ನಿನ್ನ ಪ್ರೇಮದ ಗುಂಗು..

    ತುಸು ತುಸು ಏರುವ ನಷೆಗೆ..
    ಇದೆಯೆಲ್ಲ..
    ಈ..
    ಅರೆ ಮುಚ್ಚಿದ ಕಣ್ಣುಗಳು..
    ನೀ..
    ನಸುನಾಚಿ..
    ಹೇಳಲಾಗದ ಮಾತುಗಳು..

    ReplyDelete
  4. This comment has been removed by a blog administrator.

    ReplyDelete
  5. ಸಾಂಝ್ ಢಲೆ
    ಸೂರಜ್ ಕೆ ಮಲೆ
    ದಿಗಂತೋಂಮೆ ಛಾಯಾ
    ದೂರ್ ಚಲೆ ಘರ್ ಭಲೆ
    ಪಂಚೀ ಪಹೂಂಚೆ ಹೌಲೆ ಹೌಲೆ

    ಪ್ರಕಾಶೂ ನಿನ್ನ ಚಿತ್ರ ಅತಿ ಭಾವನಾ ಮಂಥಿತ ಚಿತ್ರಕ್ಕೆ ನನ್ನ ನಾಲ್ಕು ಸಾಲುಗಳು...

    ReplyDelete
  6. ಆಕೆಯ ಸಾಂಗತ್ಯವೇ ಅಸದಳ ನಶೆ. ಪ್ರೇಮ ಪತ್ರದ ಸಾಫಲ್ಯ ಇಂಥಾ ಪ್ರೇಮ ಕವನಗಳಲ್ಲಿ ಪ್ರತಿಫಲಿಸುತ್ತವೆ.

    ಒಳ್ಳೆಯ ಕವನಕ್ಕೆ ತಕ್ಕ ಛಾಯಾಚಿತ್ರ.

    ಅಂದ ಹಾಗೆ ಇಷ್ಟು ಅದ್ಭುತ ಪ್ರೇಮ ಕವಿತೆ ಒಕ್ಕಣಿಸೋ ಪ್ರಕಾಶಣ್ಣ, ಯವ್ವನದ ಹೊಸ್ತಿಲಲ್ಲಿ ಇನ್ನೆಷ್ಟು ಆಯಸ್ಕಾಂತಿಕ ಪ್ರೇಮ ಪತ್ರ ಸೃಷ್ಠಸುತ್ತಿದ್ದರೋ? ಆಕೆಯ ಸಾಂಗತ್ಯವೇ ಅಸದಳ ನಶೆ. ಪ್ರೇಮ ಪತ್ರದ ಸಾಫಲ್ಯ ಇಂಥಾ ಪ್ರೇಮ ಕವನಗಳಲ್ಲಿ ಪ್ರತಿಫಲಿಸುತ್ತವೆ.

    ಒಳ್ಳೆಯ ಕವನಕ್ಕೆ ತಕ್ಕ ಛಾಯಾಚಿತ್ರ.

    ಅಂದ ಹಾಗೆ ಇಷ್ಟು ಅದ್ಭುತ ಪ್ರೇಮ ಕವಿತೆ ಒಕ್ಕಣಿಸೋ ಪ್ರಕಾಶಣ್ಣ, ಯವ್ವನದ ಹೊಸ್ತಿಲಲ್ಲಿ ಇನ್ನೆಷ್ಟು ಆಯಸ್ಕಾಂತಿಕ ಪ್ರೇಮ ಪತ್ರ ಸೃಷ್ಠಸುತ್ತಿದ್ದರೋ?

    ReplyDelete
  7. ಆಕೆ ನಿಮ್ಮ ಛಾಯಾ
    ನೀವವಳ ಕನ್ನಡಿ

    ಅದರ ಜೊತೆಗೆ ಬಾನಂಚಿನ ಕನ್ನಡಿ ..

    ಸೂಪರ್ ಇದ್ದು ಪ್ರಕಾಶಣ್ಣಾ :)

    ReplyDelete
  8. Mast Mast !!
    Sikkapatte ishta aatu :)

    ReplyDelete
  9. haage mana tatti bidatte brthr...super...

    ReplyDelete
  10. ತುಂಬಾ ಸುಂದರ ಕವಿತೆ ಪ್ರಕಾಶಣ್ಣ....ಸೂಪರ್..:)

    ReplyDelete
  11. photo mattu kavite eradu..ondakkondu..spardhe koduttive.....yavudu gellabahudu...

    ReplyDelete