Friday, September 9, 2011

ಬದುಕಿದು.. ಕ್ಷಣ.. ಕ್ಷಣದ..ಬಣ್ಣಗಳು..!




ನೀನೆಂಬ..
ಅನಿವಾರ್ಯ ನನಗಿಲ್ಲದಿರುವಾಗ..

ಹಾರುವೆ..
ಹೀರುವೆ..
ಹೂ.. ಸುಮಗಳ
ಅಂದವ..
ಚಂದವ..
ಮಕರಂದವ..!

ಹೇಯ್..

ಬದುಕಿದು..
ಕ್ಷಣ..
ಕ್ಷಣದ..
ನನ್ನಿಷ್ಟದ  ಬಣ್ಣಗಳು ಕಣೆ..!


9 comments:

  1. ನಾ ನಿನಗೆ ಅನಿವಾರ್ಯವಲ್ಲದಿದ್ದರೂ
    ನೀ ನನಗೆ ಅನಿವಾರ್ಯಕಣೋ
    ಗೆಳೆಯ ......!
    ಎಲ್ಲ ಹೂಗಳ ಮಕರಂದ ಹೀರುವ
    ಚಿಟ್ಟೆಯಾಗದೆ ಗೆಳೆಯ
    ನಾನು ಅರ್ಪಿತವಾಗಬಯಸುವ
    ದೇವರಾಗು!

    ReplyDelete
  2. @ಡಾ.ಕೃಷ್ಣಮೂರ್ತಿ ನಿಮ್ಮ ಸಾಲುಗಳು ನನಗೆ ಬಹಳ ಇಷ್ಟವಾಯಿತು.
    ಪ್ರಕಾಶಣ್ಣ ಬದುಕಲ್ಲಿ ಅನಿವಾರ್ಯತೆಗಳು ಬೇಕಾದಷ್ಟು ಇರುತ್ತದೆ. ಆ ಅನಿವಾರ್ಯತೆಗಳ ಜೊತೆಗೆ ಜೀವನವನ್ನು ಅನುಭವಿಸುವುದನ್ನು ಕಲಿತರೆ ಒಳ್ಳೆಯದು ಅಲ್ಲವಾ.....
    ಸಾಲುಗಳು ತುಂಬಾ ಚನ್ನಾಗಿದೆ............:)

    ReplyDelete
  3. ಡಾಕ್ಟ್ರೆ...
    ತುಂಬಾ ಸುಂದರವಾಗಿದೆ ನಿಮ್ಮ ಪ್ರತಿಕ್ರಿಯೆಯ ಸಾಲುಗಳು..

    ಪ್ರೀತಿ ಇರುವಾಗ ಎಲ್ಲವೂ ಸಹ್ಯ.. ಚಂದ..

    ಎಲ್ಲವೂ ಅವರವರ ಅನೂಕೂಲಕ್ಕೆ ತಕ್ಕಂತೆ..
    ಹೂವಿಂದ ಹೂವಿಗೆ ಹಾರೋ ಚಿಟ್ಟೆಗೆ " ನೀನೆಂಬ ಅನಿವಾರ್ಯ" ಇರಲಿಕ್ಕಿಲ್ಲ..

    ಧನ್ಯವಾದಗಳು..

    ReplyDelete
  4. ಶ್ರುತಿ ಪುಟ್ಟಾ..

    ಈ ಫೋಟೊ ತೆಗೆಯುವಾಗ ನನಗನ್ನಿಸಿದ್ದು..
    "ಎಷ್ಟೆಲ್ಲ ಹೂಗಳ ಮೇಲೆ ಕುಳಿತು..
    ಮಕರಂದ ಹೀರುವ ಈ ಚಿಟ್ಟೆಗೆ "ಒಂದೇ ಪ್ರೀತಿಯ ಬಂಧನ" ಇರಲಿಕ್ಕಿಲ್ಲ ಅನ್ನುವದು..

    ಪ್ರೀತಿ ಅನಿವಾರ್ಯವಾಗಬಾರದು..

    ಸಹಜವಾಗಿರಬೇಕು..
    ಸಹಜವಾಗಿ ಪ್ರೀತಿಯನ್ನು ಅನುಭವಿಸಿದರೆ ಅದು ಬಲು ಸೊಗಸು ಅಲ್ಲವಾ?

    ಆದರೆ ಕೆಲವು "ಅನಿವಾರ್ಯತೆಗಳ" ಜೊತೆ ಬದುಕುವದೇ ಬದುಕಿನ ಸ್ವಾರಸ್ಯ..

    ಧನ್ಯವಾದಗಳು..

    ReplyDelete
  5. ಪೊಟ್ಟಣ ಹರಿದು ಮಗುವಿಗೆ ಚಾಕ್ಲೆಟ್ ತಿನ್ನಲು ಕೊಡುವಂತೆ ಬಿಡಿಸಿ ಕೊಡುತ್ತೀರಿ ಪ್ರಕಾಶಣ್ಣ.

    ಇದು ಪ್ರಕಾಶ ಹೆಗಡೆ ಶೈಲಿ. ನಾನು ಕಲಿಯಲೇ ಬೇಕಾದ ಅನನ್ಯ ಸುಂದರ ಪ್ರಕಾರ. ಜೈ ಹೋ!

    ಪ್ರತಿ ಭ್ರಮರವೂ ಬಯಸುವ ರಸಿಕ ಲೀಲೆ. ಬಣ್ಣಗಳಿಗೆ ಆಕರ್ಷಿತವಾಗುವ ಆರೋಗ್ಯಕರ ಪೋಲಿತನ ಮನಸ್ಸನ್ನು ಯವ್ವನಾವಸ್ಥೆಯಲ್ಲೇ ಇಡುತ್ತದೆ. ನಿಮಗೆ ಚಿರ ಯವ್ವನ ಪ್ರಾಪ್ತಿಯಾಗಲಿ.ಪೊಟ್ಟಣ ಹರಿದು ಮಗುವಿಗೆ ಚಾಕ್ಲೆಟ್ ತಿನ್ನಲು ಕೊಡುವಂತೆ ಬಿಡಿಸಿ ಕೊಡುತ್ತೀರಿ ಪ್ರಕಾಶಣ್ಣ.

    ಇದು ಪ್ರಕಾಶ ಹೆಗಡೆ ಶೈಲಿ. ನಾನು ಕಲಿಯಲೇ ಬೇಕಾದ ಅನನ್ಯ ಸುಂದರ ಪ್ರಕಾರ. ಜೈ ಹೋ!

    ಪ್ರತಿ ಭ್ರಮರವೂ ಬಯಸುವ ರಸಿಕ ಲೀಲೆ. ಬಣ್ಣಗಳಿಗೆ ಆಕರ್ಷಿತವಾಗುವ ಆರೋಗ್ಯಕರ ಪೋಲಿತನ ಮನಸ್ಸನ್ನು ಯವ್ವನಾವಸ್ಥೆಯಲ್ಲೇ ಇಡುತ್ತದೆ. ನಿಮಗೆ ಚಿರ ಯವ್ವನ ಪ್ರಾಪ್ತಿಯಾಗಲಿ.

    ReplyDelete
  6. ಚಿಟ್ಟೆ ನಾನು, ಮಕರಂದ ಆಹಾರ ಕಣೋ ಗೆಳೆಯಾ
    ಅದಕೆ ನಿನ್ನದೇ ಅರ್ಥ ಕೊಟ್ಟು ಬಂಧಿಸಬೇಡ...
    ನಿಮ್ಮ ಕರಾ(ಬ್)-ಮತ್ತುಗಳಿಗೆ ನನ್ನ ಹೆಸರೇಕೆ??
    ಹೂ ನನಗೆ ಕೇವಲ ಮಾಧ್ಯಮ ಹಾಗೆಂದೇ
    ನೀನೇ ಎನ್ನುವ ಬಂಧವಿಲ್ಲ, ಕಟ್ಟುಪಾಡಿಲ್ಲ..
    ಹೂವಿಗೋ ಚಿಟ್ಟೆ ಅನಿವಾರ್ಯ ಇಲ್ಲವಾದರೆ
    ಎಲ್ಲಿಯದು ಪರಾಗಸ್ಪರ್ಶ? ಎಲ್ಲಿಯದು ಪರಿಮಳ??
    ಬಂಧಿಸು ಕವನವ ಪದಗಳಲಿ...
    ಬಂಧನ ಪದಗಳಲಿ ಎನಗಿದು ತರವಲ್ಲ..
    ನನ್ನ ಪಾಡಿಗೆ ನನ್ನ ಬಿಡು..
    ಬಿಡು ಬೇರೆ ಉಮೆಯಲೊಂದು ಬೀಡು

    ReplyDelete
  7. ನಿಮ್ಮ ಕವನಗಳಿಗೆ ಪ್ರತಿಕ್ರಿಯೆ ನೀಡುವಷ್ಟು ಜ್ಙಾನ ನನಗೆ ತಿಳಿದಿಲ್ಲ.

    ಆದರೂ ನಿಮ್ಮ ಕವನಗಳು ಛಾಯಚಿತ್ರಗಳು ತುಂಬಾ ತುಂಬಾ ಚೆನ್ನಾಗಿವೆ ಎಂದು ಹೇಳಬಲ್ಲೆ.

    ReplyDelete