Friday, April 29, 2011

ನನ್ನಿಷ್ಟದ.." ಮೌನ " ನೀನು...


ಈ..
ಇರುಳು..
ತಿಳಿ...
ಬೆಳಕಿನಲಿ...
ಕಾಡುವ..
ಬಚ್ಚಿಟ್ಟ..
ನೆನಪುಗಳಲಿ...

ಗೆಳೆಯಾ..

ನೀ..

ನನ್ನೊಳಗಿನ..

ಏಕಾಂತದ..


ನನ್ನಿಷ್ಟದ.." ಮೌನ "  ನೀನು...

19 comments:

  1. Thank you Stayaprakash Sir...

    ಕವಿದ
    ಕರಿ
    ಕತ್ತಲೆಯಲಿ
    ಕಾಡುವ
    ದ್ವಂದ್ವ..
    ಗೊಂದಲಗಳಲಿ..

    ಗೆಳೆಯಾ..

    ನೀ..
    ನನ್ನೊಳಗಿನ
    ಏಕಾಂತದ..
    ನನ್ನಿಷ್ಟದ.."ಮೌನ" ನೀನು...

    ReplyDelete
  2. ನಿನಗಾಗಿ ಕಾಯುವ
    ಈ ಏಕಾಂತದ ರಾತ್ರಿ...
    ಇನಿಯಾ... ಏನ ಹೇಳಲಿ..
    ಮೌನದಿ ಮನ ಮಜಬೂರು...

    ನನಗಾಗಿ ನೀ ಬರುವೆ...
    ಈ ಇಂಗಿತವು ಖಾತ್ರಿ..
    ಗೆಳೆಯಾ.. ಅದುವರೆಗೂ..
    ನಿನ್ನ ಧ್ಯಾನದೀ ಮಜ ನೂರು...!!

    ReplyDelete
  3. ನಿದ್ರೆ ಬಾರದ
    ಇರುಳಿನಲಿ
    ಕಾಡುವುದು ,
    ತಿಳಿ ಬೆಳಕೋ
    ನಿನ್ನ ನೆನಪೋ
    ಅಥವಾ
    ನೀನಿರದ ಏಕಾಂತವೋ
    ನೀ ಹೇಳು ಗೆಳೆಯಾ...

    ReplyDelete
  4. ನನ್ನಿಷ್ಟದ.." ಮೌನ " ನೀನು...
    sogasada bhaava. abhinandanegalu sir.

    ananth

    ReplyDelete
  5. ಮನಸು...

    ಫೋಟೊ ಇಷ್ಟಪಟ್ಟಿದ್ದಕ್ಕೆ..
    ಅದನ್ನು ನೋಡಿ ನಿಮ್ಮ ಬ್ಲಾಗಿನಲ್ಲಿ ಸೊಗಸಾದ ಕವನ ಬರೆದಿದ್ದಕ್ಕೆ ಧನ್ಯವಾದಗಳು.. ಜೈ ಹೋ !

    ತಿಂಗಳು
    ಬೆಳಕಿನ
    ತಂಪಲ್ಲಿ..
    ಒಳೊಗೊಳಗೆ
    ಕಾಡುವ..
    ಮನದ
    ದ್ವಂದ್ವ... ಗೊಂದಲ..
    ದುಮ್ಮಾನವಿದ್ದರೂ...

    ಗೆಳೆಯಾ..

    ನೀ..

    ನನ್ನೊಳಗಿನ...

    ನನ್ನಿಷ್ಟದ... ಮೌನ ನೀನು...

    ReplyDelete
  6. " ಗೆಳೆಯ ಕಾನನದ ಮೌನದಲಿ , ತಂಗಾಳಿ ಬೀಸಿರಲು , ಸುಂದರ ನೆನಪುಗಳ ಮೆರವಣಿಗೆ ನಮ್ಮಿಬ್ಬರ ಪ್ರೀತಿ ಸಾರುತ್ತಾ ಹೊರಟಿತ್ತು.!!!!

    ReplyDelete
  7. Wah Wah Prakash sir,
    The silence in between the words and content of the poetry too amused me.

    ನನ್ನಿಷ್ಟದ.." ಮೌನ " ನೀನು...

    There is some hidden meaning within the lines.
    Tread of intimacy up helped the friendship and sense of togetherness expressed over here.
    This is a short, but sweet poem. Gr8

    ReplyDelete
  8. ಸುಂದರ ಛಾಯಾಚಿತ್ರ ಹಾಗು ಚೆಂದದ ಸಾಲುಗಳು ಪ್ರಕಾಶಣ್ಣಾವ್ರೆ.. :)

    ReplyDelete
  9. ಬಿಚ್ಚಿಡಬೇಕು ಬಾ ಬೇಗ
    ಮುಚ್ಚಿಟ್ಟ ಎದೆಯ ಮೌನ
    ಮನದೊಳಗೆ ಅದೇನೋ ಆವೇಗ
    ಹೇಳಿ ಬಿಡಬೇಕು ಮನದ ಮಾತನ್ನ

    ಆದರೂ
    ಓ ಸಖ..

    ನೀ ಬರುವೆಯೆಂಬ
    ನಿರೀಕ್ಷೆಯಿದೆಯಲ್ಲಾ..
    ಅದೆಷ್ಟು ಸುಖ..

    ReplyDelete
  10. ಫೋಟೋ ಸೂಪರ್!!
    ಫೋಟೋ ಮಾಡೆಲ್ ಯಾರು??
    Lighting , Posture perfect !!
    liked it :):)

    ReplyDelete