Monday, June 28, 2010

ದೂರು..ದೂರುತ್ತ..,,


ದೂರು..
ದೂರುತ್ತ..
ದೂರಾದರೂ....

ನೆನಪಾಗಿಬಿಡುತ್ತೀಯಲ್ಲ.....

ನೀ....

ನವಿರಾಗಿ ...
ಹಸಿರಾಗಿ...
ಚಿಗುರಾಗಿ...
ಮೊಗ್ಗಾಗಿ....

ಈ...

ಹೂವಿನ
ಮೇಲಿನ
ಹನಿ..
ಹನಿಯಾಗಿ.....

ಆ...

ನಿನ್ನ.. 
ಬೆಚ್ಚನೆಯ..
ಕೆಂದುಟಿಯ..
ನಗುವಾಗಿ.....

27 comments:

  1. ಹ್ಮ್.. ಹುಣ್ಣಿಮೆ ರಾತ್ರಿ.. ನೆನಪಾಗಿದ್ದು ಸಮಂಜಸವೇ ;-)

    ReplyDelete
  2. ಮಸ್ತ್ ಆಗಿದೆ ಸಾಲುಗಳು...

    ReplyDelete
  3. ದೂರುತ್ತ ದೂರುತ್ತ ದೂರಾದುದು ಹತ್ತಿರವಾಗುವುದಕ್ಕೇ,ಮತ್ತೆ ಮತ್ತೆ ನೆನಪಾಗುವುದಕ್ಕೆ!ಚಿತ್ರ ಮತ್ತು ಕವನ refreshingly beautiful.

    ReplyDelete
  4. ಹರೀಷ್...

    ಹತ್ತಿರದವರ
    ದೂರು...
    ದೂರಾದರೂ...
    ಹತ್ತಿರವೇ...
    ಇರುವದು..
    ಅವರ...
    ಮಾತು..
    ನಗು..
    ನೆನಪುಗಳು..
    ಬಳಿಯಲ್ಲಿ..
    ಹಸಿರಾಗಿರುವದು...
    ಚಿಗುರಾಗಿ...
    ಎದೆಯಲ್ಲಿ...


    ಥ್ಯಾಂಕ್ಯೂ.... ವೆರಿ ಮಚ್ !

    ReplyDelete
  5. ಸವಿಗನಸು.. (ಮಹೇಶ್)



    ಈ..

    ತುಂತುರು..
    ಸೋನೆ ಮಳೆಯಲಿ..
    ಕಣ್ಣು..
    ನುಣುಪು.
    ಕೆನ್ನೆ..
    ಕೆಂದುಟಿಯಲಿ..
    ಮುತ್ತಂತೆ...
    ಜಾರುವ..
    ಹನಿಗಳಾಗಿ..

    ಹುಡುಗಿ...
    ನೀ..
    ಬಂದುಬಿಡುವೆಯಲ್ಲ...
    ನೆನಪಾಗಿ...

    ಧನ್ಯವಾದಗಳು ಮಹೇಶ್....

    ReplyDelete
  6. ದೂರದೆ
    ದೂರದಲ್ಲಿದ್ದೂ,
    ಹನಿ ಹನಿಯಾಗಿ
    ನೆನಪಲ್ಲಿ
    ಹನಿಸಿ,
    ದೂರಾಗಿದ್ದಕ್ಕೆ
    ಹುಸಿದೂರಿ,
    ಹತ್ತಿರದ
    ಸೊಗಡ
    ಸುರಿವೆಯಲ್ಲ!
    ಬಾಚಿ ಹೆಕ್ಕಿ ಕಟ್ಟಿ
    ಇಟ್ಟಿದ್ದೇನೆ ಮೂಟೆ!
    ಅದು ಬಾಳ ಬುತ್ತಿ
    ಜೋಪಿಸಿ ಇಟ್ಟಿರುವೆ ಎದೆಗೊತ್ತಿ....

    ಚೆ೦ದದ ಚುಟುಕು ಪ್ರಕಾಶರವರೇ!

    ReplyDelete
  7. ಒಲವಾಗಿ
    ಗೆಲುವಾಗಿ
    ಕನಸಾಗಿ
    ನನಸಾಗಿ.....

    ಸುಂದರ ಕವನ..

    ReplyDelete
  8. ದೂರು ದೂರುತ್ತ
    ದೂರಾದರೂ
    ದೂರದೂರ ಜನ ಜಾತ್ರೆಯಲಿ
    ಕಳೆದೋದರೂ
    ದೂರಾಗದು ಮರೆಯಾಗದು
    ದೊರೆಸಾನಿ ನೆನಪು..
    ಹಸಿರಿನಲಿ ಹೆಸರಾಗಿ
    ಉಸಿರಾಗಿ
    ಕೆಂಪಿನಲಿ ಇಂಪಾಗಿ
    ತಂಪಾಗಿ
    ಅವಳದೇ ಒನಪು


    ಸಕತ್ ಫೋಟೋ ಮತ್ತೆ ಕವನ ಪ್ರಕಾಶಣ್ಣ

    ReplyDelete
  9. ದೂರವಾದರೆಂದು ದೂರದಿರಿ
    ನೆನಪು ಇದೆಯಲ್ಲ ಸನಿಹ...
    ಹೂವ ಮೇಲಿನ ಹನಿಯು
    ಕೆಂದುಟಿಯ ನಗುವು
    ಮರೆಸದೇ ಕಹಿಯ...

    ReplyDelete
  10. ದೂರುವುದೊಂದು ನಿನಗೆ ನೆಪ,
    ನನ್ನಿಂದ ದೂರವಾಗುವುದಕ್ಕೆ ....,,
    ದಾರಿ ತೋರದಾಗಿದೆ ನನಗೆ,,
    ನಿನ್ನ ನೆನಪ,
    ದೂರ ಮಾಡುವುದಕ್ಕೆ...

    ತುಂಬಾ ಚೆನ್ನಾಗಿದೆ ಪ್ರಕಾಶಣ್ಣ... ಕವನ ಮತ್ತು ಚಿತ್ರ ಎರಡೂ super...

    ReplyDelete
  11. ಸೀತಾರಾಮ್ ಸರ್..

    ತುಂತುರು..
    ಸೋನೆ
    ಮಳೆಯ
    ಹನಿಗಳು..
    ಮೆತ್ತಗೆ..
    ನಿನ್ನ..
    ಕೆನ್ನೆ..
    ಕೆಂದುಟಿಗಳ
    ಬಳಿ
    ಜಾರುವ

    ಹೊತ್ತು..
    ದೂರು..
    ದೂರಾಗುವ
    ಮಾತೇಕೆ...
    ಹುಡುಗಿ..?

    ನಿಮ್ಮ ಚಂದದ ಸಾಲುಗಳಿಗೆ ಧನ್ಯವಾದಗಳು ಸರ್... !

    ReplyDelete
  12. ಪ್ರಕಾಶಣ್ಣ
    ತುಂಬಾ ಚೆನ್ನಾಗಿ ಇದೆ ನಿಮ್ಮ ಈ ಕವನ. ಹಾಗು ಫೋಟೋ...
    ನೋಡಿ ನೋಡಿ ದಷ್ಟು....ನವಿರಾಗಿ ಕಾಣುತಿದೆ ನಿಮ್ಮ ಕವನ.....

    ReplyDelete
  13. ಡಾ. ಕೃಷ್ಣಮೂರ್ತಿಯವರೆ..

    ದೂರು..
    ದೂರುತ್ತ..
    ದೂರವಾದರೂ...

    ನೀ..
    ನುಡಿಸಿದ..
    ನಿನಾದ..
    ನನ್ನೆದೆಯೊಳಗೆ..
    ನೆನಪುಗಳ..
    ಸುಂದರ
    ಹಾಡಾಗಿಬಿಟ್ಟಿದೆಯಲ್ಲೇ...

    ಧನ್ಯವಾದಗಳು ಸರ್... ನಿಮ್ಮ ಪ್ರೋತ್ಸಾಹಕ್ಕೆ....

    ReplyDelete
  14. ಪ್ರಕಾಶಣ್ಣ,
    ಸೂಪರ್ ಕವನ, ಫೋಟೋ..... ಬಂದ ಪ್ರತಿಕ್ರೀಯೆಗಳೂ ಸಕ್ಕಾತಾಗಿದೆ.... ಅದರಲ್ಲೂ, ಪ್ರಗತಿ ಹೆಗಡೆಯವರ ಚುಟುಕು ಚೆನ್ನಾಗಿದೆ.....

    ReplyDelete
  15. ರಂಜನಾ...

    ತುಂತುರು..
    ಸೋನೆ..
    ಮಳೆಯ..
    ಹನಿಗಳು..
    ನುಣುಪು
    ಕೆನ್ನೆಯಮೇಲಿಳಿದು..
    ಕೆಂದುಟಿ..
    ಅಧರದೀ..
    ಜಾರುವ...
    ಈ..
    ಹೊತ್ತು....
    ದೂರು..
    ದೂರಾಗುವ..
    ಮಾತೇಕೆ..
    ಚಿನ್ನಾ..?
    ತುಸು..
    ಬಳಿ..
    ಬರಲೇ.. ಸನಿಹ.. ?


    ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  16. ಸಿಮೆಂಟು ಮರಳಿನ ಮಧ್ಯೆ ,

    ನಿನ್ನ..
    ಬೆಚ್ಚನೆಯ..
    ಕೆಂದುಟಿಯ..
    ನಗುವಾಗಿ.....
    ನಗುವ ಹೂವಾಗಿ.."
    ಚೆನ್ನಾಗಿದೆ.

    ReplyDelete
  17. ದಿಲೀಪ್...

    ವಾಹ್.. !
    ನಿಮ್ಮ ಸುಂದರ ಸಾಲುಗಳಿದೋ.. ನನ್ನ ನಮನಗಳು... !

    ನನ್ನೊಳಗೆ....
    ನಿನ್ನ
    ಪ್ರೇಮದ..
    ನಿನಾದದ..
    ದನಿ..
    ದನಿಯೂ..
    ನಿದ.. ನಿದ..
    ಪದ..ಪದ..
    ಪದ.. ನೀ...
    ನೀ..ರಸ...
    ಭಾವವೂ....
    ರಸ.. ರಸ..
    ರಿಸ.. ರಿಸ..
    ನೀ..
    ಸರಿ.. ಸರಿ..
    ಸರಿಯೆನ್ನುತ್ತಿದೆಯಲ್ಲೇ...

    ಧನ್ಯವಾದಗಳು... ದಿಲೀಪ್...

    ReplyDelete
  18. ದೂರುತ್ತಲೇ ಇದ್ದಾಗ
    ದೂರಿಸಿಕೊಂಡವರು
    ಹತ್ತಿರವಾಗುತ್ತಿರುತ್ತಾರೆ.
    ಏಕೆಂದರೆ
    ದೂರಿದಾಗಲೆಲ್ಲಾ
    ಅವರ
    ನೆನಪಾಗುತ್ತಾ
    ಇರುತ್ತಲ್ಲಾ.
    ಒಂದು ದಿನ
    ಸನಿಹಕ್ಕೆ ಬಂದಾಗ
    ಆಗುವ
    ಅನುಭವ !!!!

    ReplyDelete
  19. ಪ್ರಗತಿ...


    ಎಳೆ..
    ಪಕಳೆಗಳ
    ಮೇಲಿನ
    ಫಳ.. ಫಳ..
    ಹನಿ
    ಹನಿಗಳ..
    ಜೊತೆ ಜೊತೆಯಲ್ಲಿ
    ನೆನಪಾಗುವದು...
    ಮುಳ್ಳು
    ಗೀರಿದ...
    ಗಾಯದ
    ಚೀರು..
    ಚೂರು..
    ಚೂರು..
    ಉಳಿದುಬಿಟ್ಟಿದೆಯಲ್ಲೇ..
    ಕಲೆಯಾಗಿ..
    ನನ್ನ
    ಎದೆಯಲ್ಲಿ...

    ದಿನೇಶ್ ಹೇಳಿದ ಹಾಗೆ ನಿಮ್ಮ ಪ್ರತಿಕ್ರಿಯೆ ಬಲು ಸುಂದರವಾಗಿದೆ...

    ಅಭಿನಂದನೆಗಳು ಚಂದದ ಪ್ರತಿಕ್ರಿಯೆಗೆ..

    ReplyDelete
  20. ಹಸಿರಾದ ನೆನಪುಗಳ
    ಮರೆಯಾಗದ ಭಾವಗಳ
    ನೆನೆ ನೆನೆದು ನಗುವ......
    ನಿಮ್ಮ ಕವನ
    ಚೆನ್ನಾಗಿದೆ.........

    ReplyDelete
  21. ಸವಿಯಾಗಿ
    ಹಿತವಾಗಿ
    ನವಿರಾಗಿದೆ ನಿಮ್ಮಯ ಕವನ
    ಓದಲು ಬಂದ ಈ ಮನ ಓದುತ ಕಳೆದಿದೆ ನೆನಪಾಗಿ.
    ನಿಮ್ಮವ,
    ರಾಘು.

    ReplyDelete
  22. ಎಳೆ ....
    ಎಳೆ ಎಳೆ ....
    ಹನಿ....
    ಹನಿಯಾಗಿ......
    ಕ....
    ವ...
    ನ....
    ವಾಗಿ....
    ಬೆ...
    ಳೆದು....
    ತೊ...
    ಟ್ಟಿಕ್ಕು ವ ಪರಿ..
    ಮುಂಜಾನೆಯ....
    ಮಂಜ ಹನಿ ...
    ಎಲೆಯ ತುದಿಯಿಂದ ....
    ನಿಧಾನ....
    ನಿಧಾನಗತಿಯಲ್ಲಿ....
    ಜಾರುವ,,,,
    ಗತಿ.....
    ನಿಮ್ಮ ರೀತಿ,,,
    ಅದ್ಬುತ......
    ಧನ್ಯವಾದಗಳು

    ReplyDelete
  23. ಪ್ರಕಾಶಣ್ಣ,
    ಚಿತ್ರ ಅದಕ್ಕೆ ತಕ್ಕಂತ ಹನಿಹನಿ ಕವನ... ಕೆಂಪಾದವೋ ಎಲ್ಲ ಕೆಂಪಾದವೋ ಎಂಬಂತೆ ಅಕ್ಷರಗಳೂ ಹೂವಿನ ಬಣ್ಣವೂ...
    ಚೆನ್ನಾಗಿದೆ..
    ಸ್ನೇಹದಿಂದ,

    ReplyDelete
  24. tumbaa sundara saalugaku..keep writing....

    ReplyDelete