Thursday, July 22, 2010

ನೆನಪಾಗುತ್ತಿದೆ.... !


ಈ...

ಕವಿದ..
ಮೋಡಗಳ...
ತುಂತುರು..
ಹನಿಗಳ.....
ಬೆಳಗಿನ..
ಚುಮು ಚುಮು
ಛಳಿಯಲ್ಲಿ....

ನೆನಪಾಗುತ್ತಿದೆ..

ಗೆಳೆಯಾ...

ತುಂಬು..
ಬಾಹುಗಳ..
 ಗಾಢಾಲಿಂಗನಾ....

ನಿನ್ನ
ಸಿಹಿ..
ಪಿಸು..
ಮಾತುಗಳ..
ಬಿಸಿಯುಸಿರಿನ..
ಬೆಚ್ಚನೆಯ ..

ಆ..
ಬಿಸಿ..
ಚುಂಬನಾ ...

35 comments:

 1. ಚುಂಬನವಲ್ಲಾ...
  ಆಲಿಂಗನಾ...
  ಸುಂದರ ಚಿತ್ರದೊಡನೆ
  ರಸಭರಿತ ಕವನ
  ಪ್ರಕಾಶಣ್ಣ ಸೂಪರ್

  ReplyDelete
 2. ಪ್ರಕಾಶಣ್ಣ,
  ಹನಿ ಹನಿಗಳ ತಂಪು ನೆರಳು
  ಮನ ಮನಗಳ ಮೌನ ರಾಗ...
  ನೈಸ್ ಒನ್..
  ನಿಮ್ಮವ,
  ರಾಘು.

  ReplyDelete
 3. ಸೀತಾರಾಮ್ ಸರ್...


  ತುಂತುರು..
  ಮಳೆಯ..
  ತಣ್ಣನೆಯ..
  ಛಳಿ..
  ಗಾಳಿಯಲ್ಲಿ..

  ಗೆಳೆಯಾ...

  ನಿನ್ನದೇ..
  ನೆನಪಿನ..
  ನಿನಾದ..
  ನನ್ನೆದೆಯಲ್ಲಿ..
  ಧೀಂ..
  ಧೀಂ..
  ತೋಂ... ತನನ..

  ಪ್ರತಿಕ್ರಿಯೆಗೆ ಧನ್ಯವಾದಗಳು ಸರ್...

  ReplyDelete
 4. ಇಳೆಯ ಸ್ಪರ್ಶವ ಬಯಸಿ
  ಕವಿದಿಹುದು ಮಳೆಮೇಘ
  ಸವೆಸಬೇಕಿದೆ ನಾವು ದೂರ ದಾರಿ...
  ಗುಡುಗಿದರೆ ಅಂಜದಿರು
  ಚಳಿಗೆ ನೀ ನಡುಗದಿರು
  ಬೆಚ್ಚನೆಯ ಮುತ್ತಿಗಿದೆ ರಹದಾರಿ...

  ಸಖತ್ ಫೋಟೋ ಮತ್ತು ಕವನ ಪ್ರಕಾಶಣ್ಣ

  ReplyDelete
 5. ಪ್ರೀತಿಯ ರಘು...

  ಮೋಡ ಕವಿದಿಲ್ಲ..
  ಗೆಳೆಯಾ..
  ಬಾನು..
  ಬೆಳಗುವ..
  ಭಾನು
  ಕಣ್ಮುಚ್ಚಿ..
  ಇತ್ತ..
  ಸಮ್ಮತಿ ಇದು..
  ನಿನ್ನ
  ಪ್ರೇಮ ಹನಿಗಳಿಗೆ..
  ಬೆಚ್ಚನೆಯ.
  ಭರವಸೆಯ..
  ಸಿಹಿ
  ಚುಂಬನಕೆ..

  ಧನ್ಯವಾದಗಳು ಪ್ರತಿಕ್ರಿಯೆಗೆ...

  ReplyDelete
 6. Chendada photo..
  Yaavooru idu..nangu hogbeku :-)
  kavana sooper..

  ReplyDelete
 7. ದಿಲಿಪ್...

  ಅಂಕುಡೊಂಕಿನ.
  ದಾರಿ..
  ದಿಕ್ಕಿಲ್ಲದ
  ಗುರಿ..

  ಗೆಳೆಯಾ....

  ಮುಂದಿನ
  ಬದುಕಿನಲ್ಲಿ
  ಇಂಥಹ
  ಛಳಿಯಲ್ಲಿ..
  ಇದ್ದೇ.. ಇದೆಯಲ್ಲ..
  ನಿನ್ನ
  ಬೆಚ್ಚನೆಯ..
  ಬಾಹುಗಳ..
  ಭರವಸೆ..

  ದಿಲಿಪ್ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

  ReplyDelete
 8. ಫೋಟೋ ,ಕವನ,ದಿಲೀಪ್ ಹೆಗ್ಡೆಯವರ ಪ್ರತಿಕ್ರಿಯೆಯ ಕವನ,ಎಲ್ಲಾ ಸೂಪರ್ !!ಬೆಳಗಾಗೆದ್ದು ಚುಮು ಚುಮು ಚಳಿಯಲ್ಲಿ ಬೆಚ್ಚನೆಯ ಅನುಭವ!

  ReplyDelete
 9. ವನಿತಾ...

  ಇದು ನಮ್ಮೂರಿನ ರಸ್ತೆ...

  ಕಾಡೆಲ್ಲ
  ಕಡಿದರೂ..
  ಅಳಿದುಳಿದ ಮರಗಳ.
  ಬೆಟ್ಟ ಸಾಲುಗಳು..
  ಗತ ದಿನಗಳ
  ದಟ್ಟಾರಣ್ಯದ..
  ಕಾಡುವ..
  ಕಾಡಿನ
  ನೆನಪುಗಳು..
  ನನ್ನೂರು...

  ನನ್ನೂರನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

  ReplyDelete
 10. Super photo as well as kavithe sir

  ReplyDelete
 11. ತುಂತುರು ಮಳೆ, ತಣ್ಣಗಿನ ಗಾಳಿ.....
  ನಡುಗಿದೆ ಮೈ..,
  ಚಳಿಗೋ....,
  ಇಲ್ಲ ನಿನ್ನ ಚುಂಬನ, ಅಲಿಂಗನದ...,,
  ಮಧುರ ನೆನಪಿಗೋ.....!!
  ಸುಂದರ ಚಿತ್ರದ ಜೊತೆಗೆ romantic ಕವನ...ತುಂಬಾ ಚೆನ್ನಾಗಿದೆ ಪ್ರಕಾಶಣ್ಣ...

  ReplyDelete
 12. ಸು೦ದರ ಚಿತ್ರ....
  ಹನಿ ಹನಿ ಕವನ,
  ಓದುಗನಿಗೂ....
  ಗಾಢಾಲಿಂಗನಾ....

  ReplyDelete
 13. ವ್ಹಾವ್............
  ಕ್ಯಾ ಬಾತ್ ಹೈ.............

  ಹನಿಯ
  ಮಧುರ
  ರಸಾಯನ..........
  ನಿಮ್ಮ
  ಕವನದ
  ಪಾರಾಯಣ........  ಪ್ರಕಾಶಣ್ಣ, ಸೂಪರ್ರೋ ಸೂಪರ್ರು..............!

  ReplyDelete
 14. ಅಂಕುಡೊಂಕು ದಾರಿಯಲ್ಲಿ
  ದಟ್ಟ ಕಾಡ ನಡುವಿನಲ್ಲಿ
  ಮೋಡ ಮುಸುಕಿದ ಬಾನಿರಲು
  ಭಯವಾಗಿದೆ....
  ಗೆಳೆಯ, ಆಗ ನಿನ್ನ ನೆನಪಾಗಿದೆ!!!!...
  :-) ಚಿತ್ರ ಕವನ ಎರಡೂ ಸೂಪರ್..

  ReplyDelete
 15. Super lines prakashanna

  ಹೆಪ್ಪುಗಟ್ಟಿದ ಕಾರ್ಮೋಡ ಕರಗಿ
  ಭೂರಮೆಯ ಮುತ್ತಿಡಲು
  ಹನಿಯಾಗಿ ಧರೆಗಿಳಿಯೆ
  ನನ್ನ ಮನದಲಿ ಏನೋ ಮಧುರ ಭಾವ

  ತುಂತುರು ನೀರಲ್ಲಿ ನೆನೆದು
  ಇನಿಯನ ಕೈ ಬಳಸಿ ನಡೆದ ಆ ನೆನಪು
  ನೀಡಿದೆ ಇಂದಿಗೂ ಎದೆಯಲಿ
  ಮಧುರ ನೋವ

  ReplyDelete
 16. ಚೈತ್ರಾ..

  ಪ್ರತಿಕ್ರಿಯೆಗೆ ಧನ್ಯವಾದಗಳು...

  ತುಂತುರು..
  ಹನಿ..
  ಹನಿ..
  ಮಳೆ..
  ಚುಮು..
  ಚುಮು..
  ಛಳಿ...ಗಾಳಿಯಿದೆ...
  ಗೆಳತಿ..
  ನೆನಪಾಗುತ್ತಿದೆ..
  ನಡುಗುವ...
  ನಿನ್ನ...
  ಆ..
  ಅಧರ..
  ಅದರ..
  ಸಿಹಿ...
  ಚುಂಬನ...!

  ಮತ್ತೊಮ್ಮೆ ಧನ್ಯವಾದಗಳು ಪ್ರತಿಕ್ರಿಯೆಗೆ...

  ReplyDelete
 17. kavana...photo...eradoo super.

  ReplyDelete
 18. ಪ್ರಕಾಶಣ್ಣ,
  ಹೊಟ್ಟೆಕಿಚ್ಚಾಗುವಷ್ಟು ಚೆನ್ನಾಗಿದೆ ಫೋಟೋ ಮತ್ತು ಕವನ.....

  ReplyDelete
 19. ಗೆಳೆಯಾ..
  ಬಾಹುಗಳ....
  ಬಿಸಿಉಸಿರಿನ.. ..
  ಬೆಚ್ಚನೆಯ ಆ ಚುಂಬನ.. ..
  --
  ಸೂಪರ್ ಸಾಲುಗಳು.....
  ಮಾಮ, ನನಗೆ ಇಗ ಅರ್ಥ ಆಗ್ತಿದೆ ನನ್ನಂತೋರಿಗೆ ಯಾಕೆ ಇನ್ನು ಒಂದು ಹುಡುಗಿ ಸಿಕ್ಕಿಲ್ಲ ಅಂತ.. :-)

  ReplyDelete
 20. ಸರಳ ಪದಗಳ ಸುಂದರ ಕವನ...ತುಂಬಾ ಚೆನ್ನಾಗಿದೆ...

  ReplyDelete
 21. tumba chennagide..
  adbhuta chitra,, takkudaada kavana..

  ReplyDelete
 22. ತುಂತುರು ಮಳೆಗೆ
  ಚುಮು ಚುಮು ಚಳಿಗೆ
  ಉಸಿರಿನ ಬಿಸಿಗೆ
  ಕರಗುವ ಬಯಕೆಯಲಿ
  ನಿನ್ನ ಕಾಯುತಿದೆ ಹೃದಯಾ ..

  ಪ್ರಕಾಶಣ್ಣ , ಸೂಪರ್ ಕವಿತೆ !
  ಫೋಟೋ ಅಂತೂ ರಾಶಿ ಚಂದ ಇದ್ದು . ಆ ದಾರೀಲಿ ಮಳೆ ಬೀಳಕಾದ್ರೆ ನಡ್ಕಂಡು ಹೋಗಣ ಅನಿಸ್ತಾ ಇದ್ದು .

  ReplyDelete
 23. ಕೃಷ್ಣಮೂರ್ತಿಯವರೆ...

  ದಿಲಿಪ್ ಒಳ್ಳೆಯ ಬರಹಗಾರಷ್ಟೇ ಅಲ್ಲ...
  ಅತ್ಯುತ್ತಮ ವ್ಯಂಗ್ಯಚಿತ್ರಕಾರರು..
  ಈಗ ಗೊತ್ತಾಗುತ್ತಿದೆ.. ಅವರ ಬಾಳ ಸಂಗಾತಿ ಕೂಡ ಅವರಷ್ಟೇ ಪ್ರತಿಭಾವಂತರು.. !

  ಹನಿ..
  ಹನಿ..
  ಮಳೆಯಿದೆ..
  ಗಡಗಡ
  ಛಳಿಯಿದೆ...
  ಚಾದರ ಹೊದ್ದು..
  ಮಲಗಿದರೆ..
  ಗೆಳೆಯಾ..
  ನಿನ್ನ..
  ನೂರಾರು..
  ಬೆಚ್ಚನೆಯ
  ಕನಸಿದೆ...

  ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು...

  ReplyDelete
 24. ಸುಂದರ ಕವನ.
  ಚೆಂದದ ಚಿತ್ರ.

  ReplyDelete
 25. ಒಳ್ಳೇ ಚಿತ್ರ, ರಸ್ತೆ ತುದಿಯಲ್ಲಿ ಯಾರೋ ನಿತ್ತಹಾಗೆ ಕಾಣುತ್ತಿದೆಯಲ್ಲ....
  ಕವನವೂ ಚೆನ್ನಾಗಿದೆ

  ReplyDelete
 26. ಸಿಮೆಂಟು ಮರಳಿನ ಮಧ್ಯೆ ,

  ಚುಂಬನ..
  ಆಲಿಂಗನ..
  ಬಾಹುಬಂಧನ..
  ಚಂದೈತಣ್ಣ ಕವನ..
  ಈ ಹನಿಗವನ..
  ಬಿಸಿಗವನ..

  ReplyDelete
 27. ಪ್ರಕಾಶಣ್ಣ,
  ಫೋಟೋ ಸಕ್ಕತಾಗಿದ್ದು..... ಈಗಲೂ ಇಂಥಹ ಫೋಟೋ ಸಿಗೋದು ಹಳ್ಳಿಗಳಲ್ಲೇ ಆಲ್ವಾ ಅಣ್ಣ.... ಕವನದ ಬಗ್ಗೆ ಮಾತಾಡೋದೇ ಬೇಡ.... ಯಾವುದರ ಬಗ್ಗೆ ಅನಿಸಿಕೆ ಬರೆಯಲಿ, ನಿಮ್ಮ ಕಾಮೆಂಟ್ ಬಾಕ್ಸ್ ನಲ್ಲೂ ತುಂಬಾ ಕವನಗಳಿವೆ.... ಕವಿತೆಗಳ ಕಣಜ ನಿಮ್ಮ ಛಾಯ ಚಿತ್ತಾರ ಬ್ಲಾಗ್....

  ReplyDelete
 28. Nimmoora daariyantide. photo & kavana sogasaagide

  ReplyDelete
 29. ಅದ್ಭುತವಾದ ಚಿತ್ರ, ಅಲ್ಲಿಯ ಮಳೆ ಹನಿಗಳ೦ತೆಯೇ ತು೦ತುರು ತು೦ತುರು ಹನಿಗಳಿ೦ದಾದ ಭಾವಪೂರ್ಣ ಕವನ. ಎಲ್ಲಕ್ಕಿ೦ತಲೂ ಪ್ರತಿಕ್ರಿಯೆಗಳಲ್ಲಿಯ 'ಝರಿ' ವೈಭವ! ಒ೦ದು ಆಕರ್ಷಕ ಗೋಷ್ಠಿಯಲ್ಲಿಯೇ ಪಾಲ್ಗೊ೦ಡ೦ತಾಯ್ತು. ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

  ReplyDelete