Monday, June 7, 2010

ಎಳೆ.. ಎಳೆಯಾಗೀ..ಎಳೆದು...

ನೀ...
ಮರೆ..
ಮರೆಯಾಗಿ..
ಕಳೆ..
ಕಳೆದು..
ಹೋದರೂ....
ಎಳೆ..
ಎಳೆಯಾಗಿ..
ಎಳೆದು..
ಬಳಿ..
ಸೆಳೆದು...
ತೆರೆ..
ತೆರೆಯಾಗಿ..
ತೆರೆದು..
ತರ..
ತರಹದೀ.....
ತಹತಹಿಸಿ...
ತರುವದು...
ನಿನ್ನ.....
ಆ...
ನೆನಪು......!

32 comments:

  1. tumba chanagide chitra haagu aksharagala chittaara....

    ReplyDelete
  2. ಆ ನೆನಪು ಮರೆಯಾಗದೆ ಜೊತೆಯಲ್ಲೆ ಇರಲಿ....
    ಸೂಪರ್ ಸಾಲುಗಳು....

    ReplyDelete
  3. ಸಮುದ್ರದಲೆಯಂತೆ ಪದೆ ಪದೇ ಅಪ್ಪಳಿಸುವ ನಿನ್ನ ನೆನಪು, ನನ್ನ ಕಲ್ಲು ಮನಸ್ಸನ್ನು, ಸದ್ದಿಲ್ಲದೇ ದಿನೇ ದಿನೇ ಕರಗಿಸುತ್ತಿದೆ ಗೆಳತಿ, ಅನ್ನುವಂತಿದೆಯೇ..? ಪ್ರಕಾಶಣ್ಣ ಕವನ ರಾಶಿ ಚಂದ ಇದ್ದು.. ಅದಕ್ಕೆ ತಕ್ಕಂತ beautiful picture .....

    ReplyDelete
  4. ಕವಿರಾಜ್...

    ನೀ..
    ಸುಳಿ..
    ಸುಳಿಯಾಗಿ..
    ಸುಳಿವಿಲ್ಲದೆ..
    ಸೆಳೆಯುವ...
    ಸೆಳೆತವಾಗಿ...
    ಬಳಿ..
    ಬಳಿಯೇ..
    ಸುಳಿಯುತ್ತಿದೆಯಲ್ಲೇ..
    ನಿನ್ನ
    ಆ..
    ನೆನಪು...
    ಆ...
    ಒನಪು...

    ಧನ್ಯವಾದಗಳು... ಕವಿರಾಜ್ !

    ReplyDelete
  5. wow, super chitra hagu kavithe

    ReplyDelete
  6. ಪ್ರಕಾಶಣ್ಣ,
    ಬರ..
    ಬರೆದಷ್ಟೂ...,
    ಸಾಲದು,
    ಈ...
    ನಿಮ್ಮ
    ಕವನ
    ಮತ್ತು,ಫೊಟೊದ,
    ಸೊಗಸು.
    ಅಬಿವ೦ದನೆ
    ಅಭಿನ೦ದನೆ.

    ReplyDelete
  7. ಆಹ್ ಪ್ರಕಾಶಣ್ಣ .. ಕವನ ಸೂಪರ್ .. ಕವನಕ್ಕಿಂತ ಫೋಟೋನೇ ಸಿಕ್ಕಾಪಟ್ಟೆ ಸೂಪರ್ :D

    ReplyDelete
  8. ಮುತ್ತು ಪೋಣಿಸಿದಂತೆ ಹಣೆದಿರುವ ನೆನಪುಗಳ
    ಸಾಲುಗಳಲಿ ಹುದುಗಿರುವ ಚೆಲುವೆ ನೀನಲ್ಲವೆ..
    ಮಬ್ಬು ಬೆಳಕಲಿ ತೆಗೆದ ಛಾಯಾಚಿತ್ರದಲಿ ಚಿತ್ತಾರವಾಗಿ ಅಡಗಿ
    ನಸುನಗೆಯ ಚೆಲ್ಲುತಿಹ ಬೆಡಗಿ ನೀನಲ್ಲವೆ....

    ಸುಂದರ ಪತ್ನಿಯ ಸುಂದರ ಛಾಯಾಚಿತ್ರದೊಂದಿಗೆ ಸುಂದರ ಬರಹ ಪ್ರಕಾಶಣ್ಣಾ.

    ReplyDelete
  9. ಆಹಾಹ..ಆಗ್ರಾದ ಹುಡುಗಿ ಬಲು ಚೆನ್ನ ...:))

    ReplyDelete
  10. ಸವಿಗನಸು (ಮಹೇಶ್...)

    ನೀ...
    ಇಳೆಗೆ..
    ಎಳೆ..
    ಎಳೆಯಾಗಿ.
    ಇಳಿ...
    ಇಳಿಯುವ ...
    ಮುಂಗಾರಿನ..
    ಮಳೆಯ..
    ಹನಿ..
    ಹನಿಗಳ..
    ಗೀಳಿನಂತೆ..

    ನಿನ್ನ

    ಆ ನೆನಪು...
    ಆ...
    ಒನಪು..!

    ಥ್ಯಾಂಕ್ಸು ಮಹೇಶ್...

    ReplyDelete
  11. ಚಿತ್ರಕ್ಕೆ ತಕ್ಕ ಚುಟುಕು
    ಚುಟುಕಿಗೆ ತಕ್ಕ ಚಿತ್ರ
    ಎರಡಕ್ಕೂ ತಕ್ಕ ಅದರ ಕರ್ತೃ.
    ವ್ಹಾ!

    ReplyDelete
  12. ಪ್ರಕಾಶ್;ಮೊನ್ನೆ ನವ ಕರ್ನಾಟಕದ ಪುಸ್ತಕದ ಅಂಗಡಿಯಲ್ಲಿ ಸಿಮೆಂಟು ಇಟ್ಟಿಗೆ ಮಧ್ಯೆ 'ಹೆಸರೇ ಬೇಡ'ಅಂತ ಪುಸ್ತಕದ ಸಾಲುಗಳಲ್ಲಿ ತಣ್ಣಗೆ ಕುಳಿತಿದ್ದಿರಿ.ನಿಮ್ಮ ಪಕ್ಕದಲ್ಲಿ 'ವೆಂಡರ್ ಕಣ್ಣಿನ'ಶಿವೂ!ಇಬ್ಬರು ಸಹ ಬ್ಲಾಗಿಗರ ಪುಸ್ತಕಗಳನ್ನೂ ಒಟ್ಟಿಗೆ ನೋಡಿ ನನ್ನ ಸಂತೋಷಕ್ಕೆ ಪಾರವಿರಲಿಲ್ಲ.ಆ ಖುಷಿಯಲ್ಲಿ ನಿಮ್ಮ ಪುಸ್ತಕದಲ್ಲಿದ್ದ ನಂಬರಿಗೆ ಎಷ್ಟು ಸಲ ಫೋನಾಯಿಸಿದರೂ ನೀವು ವ್ಯಾಪ್ತಿಪ್ರದೆಶದಿಂದ ಹೊರಗೇ!ಇಲ್ಲಿ ನೋಡಿದರೆ ಎಳೆ ಎಳೆಯಾಗಿ,ಮಳೆ ಮಳೆಯಾಗಿ ನಿಮ್ಮ ನೆನಪು!
    ನಿಮ್ಮಿಬ್ಬರಿಗೂ ನನ್ನ ಹಾರ್ದಿಕ ಅಭಿನಂದನೆಗಳು.

    ReplyDelete
  13. super prakashanna..... aasha avarige dristi agutte husharu...hahaha

    ReplyDelete
  14. ಫೋಟೋ ಸೂಪರ್... ಪ್ರಕಾಶಣ್ಣ.

    ReplyDelete
  15. ಸೂಪರ್ ಪ್ರಕಾಶಣ್ಣ. ಅದ್ಭುತ ಫೋಟೋ ..ಸುಂದರ ಸಾಲುಗಳು.

    ReplyDelete
  16. ನೆನೆದಾಗ ಎದಿರಿರುವ ....
    ಕರೆದಾಗ ಜೊತೆಲಿರುವ....
    ಸಂಗಾತಿಯ,
    ಮಧುರ ನೆನಪಿನ..
    ಕಪ್ಪು ಬಿಳುಪು ಚಿತ್ರ...
    ಹಾಗೂ ಕವನ ಚೆನ್ನಾಗಿದೆ...

    ReplyDelete
  17. A photo can speak thousend words...tuumba chennagide photo hagu nimma kavana

    ReplyDelete
  18. ಎಳೆ ಎಳೆಯಾಗಿ,,,
    ಪ್ರತಿ ಬಾರಿ,,, ನೋಡಿದರು.....
    ನಿಮ್ಮ ಕವನದ ಸಾಲು.....
    ಇನ್ನು ನೋಡಬೀಕೆನಿಸುತಿದೆ.........
    ಕವನಕ್ಕೆ ಒಪ್ಪುವ ಫೋಟೋ ನೋ ಅಥವಾ ಫೋಟೋಗೆ ತಕ್ಕ ಕವನನೋ.... ಏನೆ ಆದರು,,, ಎರಡು ಸೂಪರ್....ಪ್ರಕಾಶಣ್ಣ....

    ReplyDelete
  19. ದೂರ ದಿಗಂತದಲಿ
    ನೆಟ್ಟ ಕಣ್ಣು
    ಕಾಯುತಿದೆ ನಿನ್ನ
    ಬರವನ್ನು ...
    ಮರೆಯಾಗದೆ
    ಕಳೆದು ಹೋಗದೇ
    ಬರಿ ನೆನಪಾಗದೆ
    ನಿನಗಾಗಿ
    ತಹ ತಹಿಸುವ ಮನಕೆ
    ತಂಪೆರೆಯಲು
    ಬಳಿ ಬಾರೆಯಾ ಗೆಳೆಯಾ?

    ಚೆಂದದ ಕವನ ಪ್ರಕಾಶಣ್ಣ !
    ಮತ್ತು ಚಿತ್ರದಲ್ಲಿನ ' ಆಶಾ " ಭಾವ ಇನ್ನೂ ಚಂದ !!

    ReplyDelete
  20. really nice.. both .. foto n lines with emotions

    ReplyDelete
  21. ಫೋಟೋ ಗೆ ಕವನ ಸ್ಪೂರ್ತಿಯೋ? ಕವನಕ್ಕೆ ಫೋಟೋ ಸ್ಪೂರ್ತಿಯೋ?? ಒಟ್ಟಿನಲ್ಲಿ ಎರಡು ಚೆನ್ನಾಗಿದೆ.. ಫೋಟೋ ಸ್ವಲ್ಪ ಜಾಸ್ತಿನೇ ಚೆನ್ನಾಗಿದ್ದು ಅದರ ರೂಪದರ್ಶಿಒಂದಿಗೆ ಅಂತ ಅಂದ್ರೆ partiality ಅಂತ ಹೇಳದಿಲ್ಲೆ ಅಲ್ದ? :P

    ReplyDelete
  22. ಶುಭಾ....

    ನಾ..
    ಕಾದು..
    ಕಾದು..
    ಕಾಯುವೆ..
    ಕರಗುವೆ..
    ಆವಿಯಾಗಿ..
    ಹನಿ..
    ಹನಿಗಳಾಗಿ...
    ಮಳೆಯಾಗುವೆ..

    ಗೆಳತಿ..

    ನಿನ್ನೀ..

    ಇಳೆಗೆ..
    ನಿನ್ನೆಡೆಗೆ..
    ನಿನ್ನ..
    ನೆನಪಿಗೆ..
    ಆ...
    ಒನಪಿಗೆ..

    ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  23. ಚಂದದ ಕವನ.........
    ಅಷ್ಟೇ ಚಂದದ ಚಿತ್ರ........
    ಪ್ರಕಾಶಣ್ಣ ಸೂಪರ್!

    ReplyDelete
  24. ಪ್ರಕಾಶಣ್ಣ,
    ನೆನಪೆಂದರೆ,
    ಕಾಡುವ,
    ಹಾಡುವ,
    ಪೀಡಿಸುವ,
    ತೀಡುವ,
    ಸುಂದರ ,
    ನೋವು.....
    ಅಲ್ಲವಾ.......

    ReplyDelete
  25. This comment has been removed by a blog administrator.

    ReplyDelete
  26. ನಿಶಾ..

    ನೀ..
    ಕೊಡುವ..
    ಪ್ರೀತಿಗೆ.
    ಪ್ರೇಮಕ್ಕೆ..
    ಬಿಡಿಸಲೆ..
    ನನ್ನೊಲವಿನ..
    ಬಣ್ಣದ..
    ಬಣ್ಣದ..
    ಚಿತ್ತಾರ..
    ಈ..
    ನಿನ್ನ...
    ಕೆನ್ನೆಯ
    ಹತ್ತಿರ...?

    ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  27. ಚಿತ್ರ ಹಾಗೂ ಕವನ ಎರಡೂ ಸೂಪರ್ ....ತುಂಬಾ ಚೆನ್ನಾಗಿವೆ....

    ReplyDelete
  28. ಫೋಟೋ ಚೆಂದ,
    ಸಾಲುಗಳು ಇನ್ನೂ ಚೆಂದ.
    ಶಾಯರಿಯ ಭಾವ ತಂದ
    ಸಾಲುಗಳಿಂದ ಆನಂದ.

    ReplyDelete
  29. Oh, variety of actions and reactions. Enjoyed every bit of it. but am poor in kavana. totally it was a week end dose for me. Thanks

    ReplyDelete
  30. ಪ್ರಕಾಶಣ್ಣ..ಸೂಪರ್.. ನೆನಪು ಮಧುರ.!
    ನಿಮ್ಮವ,
    ರಾಘು.

    ReplyDelete
  31. ಸಿಮೆಂಟು ಮರಳಿನ ಮಧ್ಯೆ ,

    ಭಾವ ತುಂಬಿದೆ..

    ReplyDelete