Thursday, April 29, 2010

ಜಾರುವ ಹನಿಗಳಾಗಿ...

ನಾ...

ನೋಡುವ..

ನೋಟದ..

ಪ್ರೇಮ ಚಂದಿರನಾಗಿ..

ಹೃದಯದ..

ಭಾವಗಳ..

ಹಾಡಾಗಿ..

ನೀನಿರಬೇಕಿತ್ತು..

ಗೆಳೆಯಾ..

ಮರೆಯದ..

ನೆನಪಾಗಿ..

ನನ್ನ..

ಕಣ್ಣಲ್ಲಿ..

ಜಾರುವ

ಹನಿಗಳಾಗಿ ಬಿಟ್ಟೆಯಲ್ಲ....!

17 comments:

 1. ಜಾರಿದ ಹನಿ
  ಕಪ್ಪೆಚಿಪ್ಪಲ್ಲಿ
  ಸ್ವಾತಿಮುತ್ತು ಮುತ್ತಾದ೦ತೆ
  ತಾನು ಮುತ್ತಾಗಿ.....
  ಮುತ್ತನ್ನಲ್ಲೆಲ್ಲೋ ನೋಡಿ
  ನಿನ್ನ ನೆನಪಾಗಿ
  ಮತ್ತೆರೆಡು ಹನಿ ಜಾರಿದವೋ ಗೆಳೆಯ....
  ನಿನ್ನ ನೆನಪು
  ಮನದ ಕದ ತಟ್ಟಿ.....
  ಚೆ೦ದದ ಕವಿತೆ ಪ್ರಕಾಶರವರೇ.

  ReplyDelete
 2. ಚಂದದ ನುಡಿ ಕಟ್ಟು

  ReplyDelete
 3. ಜಾರುವ ಹನಿಗಳನ್ನೇ
  ಬೊಗಸೆಯಲ್ಲಿ ಹಿಡಿದು
  ಸ್ವಾತಿಮುತ್ತಾಗಿಸುವೆ
  ನಿನ್ನ ನೆನಪುಗಳನ್ನೇ
  ದಾರವಾಗಿಸಿ ಮಾಲೆಯನ್ನು ಕಟ್ಟುವೆ

  ಸುಂದರ ಸಾಲುಗಳು ಹೆಗ್ದೆಯವ್ರೆ

  ReplyDelete
 4. ಜಾರುವ ಕಣ್ಣೀರು
  ಖಾಲಿ ಆದರೂ..
  ನಿನ್ನ ನೆನಪು
  ಕರಗಲೇ ಇಲ್ಲ ಗೆಳೆಯಾ.
  ಕಣ್ಣ ಹನಿ ಸಾಗರ
  ಸೇರಿ ಉಪ್ಪಾದರೂ..
  ನಿನ್ನ ನೆನಪು
  ಮುಪ್ಪಾಗಲೇ ಇಲ್ಲ ಗೆಳೆಯಾ.

  ಪ್ರಕಾಶ್ ಅವ್ರೆ ಚುಟುಕಾಗಿ ಚೊಕ್ಕದಾಗಿ ಚಂದ ಇದ್ದು.

  ReplyDelete
 5. ಜಾರಿದ ಹನಿಗಳಲಿ
  ನಿನ್ನದೇ ಬಿಂಬ..
  ಕೆಳಗುರುಳಿಸಲಾರೆ ಗೆಳೆಯಾ
  ಬೊಗಸೆಯಲ್ಲೇ ಹಿಡಿದು
  ಜೋಪಾನ ಮಾಡುವೆ
  ಪ್ರೀತಿಸುವೆ ಎಂದೆಂದೂ
  ನಿನ್ನನ್ನು
  ನಿನ್ನ ನೆನಪುಗಳನ್ನು.


  ಸಕತ್ ಪ್ರಕಾಶಣ್ಣ.... ಭಾವಗಳ ಭಾರವಿದೆ ನಿಮ್ಮ ಸಾಲುಗಳಲ್ಲಿ. ರಾಶಿ ರಾಶಿ ಚೋಲೋ ಇದ್ದು.

  ReplyDelete
 6. ಸೀತಾರಾಮ್ ಸರ್..

  ನಿನ್ನಲ್ಲಿ
  ಹೃದಯದ
  ಭಾವಗಳಾಗಿ..
  ನಿನ್ನಲ್ಲೊಂದಾಗ
  ಬೇಕೆಂದಿದ್ದೆ..
  ಮತ್ತೆ
  ಮತ್ತೆ
  ಬರುವೆಯಲ್ಲ..
  ನೆನಪಾಗಿ..
  ನನ್ನ
  ಕಣ್ಣಲ್ಲಿ..
  ಹನಿಗಳಾಗಿ..

  ಸೀತಾರಾಮ್ ಸರ್...
  ನಿಮ್ಮ ಚಂದದ ಸಾಲುಗಳಿಗೆ
  ನನ್ನ ನಮನಗಳು...

  ReplyDelete
 7. ಹೆಬ್ಬಾರ್ ಸರ್...

  ಬರುವದಾದರೆ..
  ಬಾ..
  ಗೆಳೆಯಾ..
  ಬಾಳ ಬೆಳಕಾಗಿ..
  ಹೃದಯದ..
  ಪ್ರೇಮವಾಗಿ..
  ನೂರು..
  ಭಾವಗಳ..
  ಅರಳಿಸಿ..
  ನನ್ನ..
  ಕಣ್ಣಿನ
  ಕನಸುಗಳಾಗಿ..

  ಹೆಬ್ಬಾರ ಸರ್ ಧನ್ಯವಾದಗಳು..

  ReplyDelete
 8. ಮಾಲತಿಯವರೆ...

  ನೀನೇ..
  ಕಟ್ಟಿಕೊಟ್ಟ
  ಕನಸಾಗಿತ್ತು..
  ನೀನೇ..
  ಬೆಳೆಸಿದ
  ಪ್ರೇಮ...
  ಭಾವಗಳಾಗಿತ್ತು...
  ಅವೆಲ್ಲ...
  ಆವಿಯಾಗಿ..
  ನಿನ್ನ
  ನೆನಪಲ್ಲಿ
  ಕೆನ್ನೆಯಲಿ
  ಜಾರುವ
  ಹನಿಗಳಾಗಿಬಿಟ್ಟವಲ್ಲೊ
  ಗೆಳೆಯಾ....

  ನಿಮ್ಮ ಚಂದದ ಸಾಲುಗಳಿಗೆ ನನ್ನ ಪುಟ್ಟ ಸಲಾಮ್...

  ReplyDelete
 9. This comment has been removed by the author.

  ReplyDelete
 10. ಜಾರುವ ಕಣ್ಣೀರ
  ಹನಿಗಿಲಿಗಿಲ್ಲವೇ
  ಸಂತೋಷದ ಬೇಲಿ.............
  ಆ ಹನಿಗಳೇ
  ಸ್ವಾತಿ ಮುತ್ತಾದ ಮೇಲೆ
  ಮೂಡಬಾರದೇಕೆ ಪ್ರೀತಿ
  ಮೀನ ಕಂಗಳಲ್ಲಿ..................

  ಪ್ರಕಾಶಣ್ಣ ಸುಂದರವದ ಚುಟುಕು ಕವನ.

  ReplyDelete
 11. ಚಂದ್ರು...

  ಬರುವೆಯಲ್ಲ..
  ಕನಸಲ್ಲಿ
  ಮನಸಲ್ಲಿ
  ಒಮ್ಮೊಮ್ಮೆ..
  ತುಟಿಯಲ್ಲಿ
  ನಗುವಾಗಿ..
  ಗೆಳೆಯಾ..
  ಮರೆಯದೇ..
  ಮರೆಯದ
  ನೆನಪಾಗಿ..
  ಹನಿ
  ಹನಿಗಳಾಗಿ..

  ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

  ReplyDelete
 12. ಸಕ್ಕತ್ ಆಗಿದೆ ಪ್ರಕಾಶ್ ಅವರೆ ತುಂಬಾ ಇಷ್ಟವಾಯಿತು ಕವನದ ಸಾಲುಗಳು. ಎರಡನೇ ಭಾಗದ ಭಾವನೆಯಂತೂ ಅದ್ಭುತ....!

  ReplyDelete
 13. ಓ.. ಮನಸೇ.. ನೀನೇಕೆ ಹೀಗೆ...

  ಬಾನಿನ..
  ಚಂದ್ರಮ
  ದೂರದಿ.. ಅಂದ..
  ಗೆಳೆಯಾ..
  ನಿನ್ನ
  ಸನಿಹದ
  ಮಾತು..
  ನೆನಪು..
  ಹನಿಗಳಾದರೂ..
  ಅಂದ..
  ಚಂದ.. ಚಂದಾ..!

  ಚಂದದ ಸಾಲುಗಳ ಪ್ರತಿಕ್ರಿಯೆಗೆ ಧನ್ಯವಾದಗಳು..

  ReplyDelete
 14. ಚಂದ್ರು...

  ದೂರು..
  ದೂರುತ್ತ..
  ದೂರವಾದೆಯಲ್ಲ..
  ಭಾವದ....
  ಬಾನಿನಲ್ಲಿ..
  ಚಂದದ
  ಚಂದಿರನಂತೆ....
  ನನಗಿಷ್ಟು ಸಾಕು..
  ಗೆಳೆಯ..
  ಒಂದಿಷ್ಟು..
  ಮಾತು..
  ಬಿಸಿಯಪ್ಪುಗೆಯ..
  ನೆನಪು..
  ಬೇಡವೆಂದರೂ..
  ಬರುವ..
  ನಾಲ್ಕು..
  ನಾಲ್ಕು..
  ಹನಿಗಳು..!


  ಥ್ಯಾಂಕ್ಸು ಚಂದ್ರು ಪ್ರೋತ್ಸಾಹದ ನುಡಿಗಳಿಗೆ...

  ReplyDelete
 15. ಪ್ರಕಾಶ್ ಸರ್, ಏನೆಂದು ಹೇಳಲಿ...? ಕವಿತೆಯ ಭಾವ ಭಾರವೆನಿಸಿದರು, ಸಾಲುಗಳು ತುಂಬಾ ಮುದವೆನಿಸುತ್ತದೆ. ತುಂಬಾ ಚೆನ್ನಾಗಿದೆ.

  ReplyDelete
 16. ಭಾವನಾತ್ಮಕವಾದ ಪದಗಳ ಜೋಡಣೆ, ತುಂಬಾ ಚೆನ್ನಾಗಿದೆ ಪ್ರಕಾಶ್....

  ReplyDelete