Sunday, April 18, 2010

ಬದುಕಿಲ್ಲದ... ಚಿಗುರುಗಳು...


ನನ್ನಲ್ಲಿ..

ನನ್ನ..

 ಕನಸಲ್ಲಿ ..

ನೀ,,,

ಇದ್ದರೂ..

ಅವೆಲ್ಲವೂ..

ನನ್ನವು.., ಹುಡುಗಿ...

ನನ್ನೊಳಗೆ..

ಮೊಳಕೆಯೊಡೆದು..

ಚಿಗುರಿದರೂ...

ಬದುಕಿಲ್ಲದ...

ಅವ್ಯಕ್ತ ..

ಭಾವಗಳು..

ಬಚ್ಚಿಟ್ಟ..

ನೋವುಗಳು...


(ದಯವಿಟ್ಟು..ಪ್ರತಿಕ್ರಿಯೆಗನ್ನೂ ಓದಿ...)

33 comments:

 1. bhavanatmakavagi manassina aaLakkiLidu novina beejavanne hekkidantide.hrudayakke muttuvantaha saalugaLu! Prakasha, hats off!!

  ReplyDelete
 2. ಪ್ರಕಾಶಣ್ಣ,
  ಮುಚ್ಚಿಟ್ಟ ಅವ್ಯಕ್ತ ಭಾವಗಳ, ಮುನ್ನುಡಿಯಂತಿದೆ ಕವನ............. ಸೂಪರ್........... ಚಿತ್ರ ಕೂಡ....

  ReplyDelete
 3. ಪ್ರಕಾಶಣ್ಣ,
  ತುಂಬಾ ಚೆಂದದ ಕವನ. ಬಹಳ ವರ್ಷಗಳ ಹಿಂದೆ ಯಾವಾಗಲೋ ಡೈರಿಯಲ್ಲಿ ಗೀಚಿಟ್ಟ ಕವನವೊಂದು ನೆನಪಾಯಿತು. ಹುಡುಕಬೇಕು

  ReplyDelete
 4. ಗಂಗಾ.. (ಚಿಕ್ಕಮ್ಮ)

  ಕನಸು
  ನಿನ್ನದಾರೂ..
  ಆಸೆಯ..
  ಚಿಗುರು..
  ಚಿಗುರಿದರೂ...
  ನನಸಾಗದ..
  ದಕ್ಕಲಾರದ..
  ದುಃಖದ..
  ಭಾವಗಳು..
  ನನ್ನದು...
  ನನ್ನದೊಬ್ಬನದು..

  ಪ್ರತಿಕ್ರಿಯೆಗೆ ಧನ್ಯವಾದಗಳು...

  ReplyDelete
 5. Photo and Kavana is good.
  I have seen u in Etv kannada yede tumbi....

  ReplyDelete
 6. ಈಶು....

  ನಿನ್ನ
  ದಟ್ಟ ಕಣ್ಣುಗಳು..
  ಮೃದು ಕೆನ್ನೆ..
  ತುಂಬು ಗಲ್ಲ..
  ಹೂ...
  ನಗೆ...
  ಸವಿ..
  ನೆನಪುಗಳು..
  ಎಲ್ಲವೂ..
  ನನ್ನದು...
  ಹುಡುಗಿ..
  ನೀ..
  ನನ್ನವಳಲ್ಲದಿದ್ದರೂ...
  ನನ್ನೊಬ್ಬನದು..
  ನನ್ನೊಬ್ಬನದು...

  ಥ್ಯಾಂಕ್ಯೂ ಈಶು...

  ReplyDelete
 7. ದಿನು...


  ನೀ..
  ನನ್ನ
  ನೆನಪುಗಳಾಗಿ..
  ನನ್ನೊಳಗೆ..
  ಸಿಹಿ..
  ನಗುವಾಗಿ..
  ಮರೆಯಲಾಗದ..
  ಹೇಳದ..
  ಹೇಳಲಾಗದ...
  ಮಧುರ..
  ಭಾವಗಳ
  ಹಾಡುಗಳು...
  ರಾಗಗಳು..
  ತರುವ..
  ನೋವುಗಳು..
  ನೀನು..

  ಧನ್ಯವಾದಗಳು.. ದಿನೂ...

  ReplyDelete
 8. ಪ್ರಕಾಶಣ್ಣಾ........ಶಬ್ದಗಳೇ ಸಿಗುತ್ತಿಲ್ಲ ನಿಮ್ಮ ಸುಂದರ ಸಾಲುಗಳನ್ನು ಹೊಗಳಲು. ತುಂಬಾ ತುಂಬಾ ಚೆನ್ನಾಗಿವೆ.

  ReplyDelete
 9. prakashanna yavattuu superre :)
  mast iddu prakashanna

  ReplyDelete
 10. ಚಿತ್ರಾ..

  ನಿನ್ನ
  ಕುಡಿ ಕಣ್ಣೋಟ..
  ಕಂಡೂ..
  ಕಾಣದ
  ಕಿರು ನಗು..
  ಕಣ್ಣೆದುರು
  ಕಂಡರೂ..
  ನನ್ನದಲ್ಲ...
  ಅದು..
  ನನ್ನೊಳಗೆ
  ನಾನೊಬ್ಬನೆ..
  ಅನುಭವಿಸುವ..
  ಅನುಭಾವ...

  ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

  ReplyDelete
 11. ಮನಸ ಮೂಲೆಯಲ್ಲಿನ ಮುರ್ತಾಮುರ್ತದಲ್ಲಿ ಬಸವಳಿದ ಭಾವನೆಗಳ ವ್ಯಕ್ತಾವ್ಯಕ್ತದ ಅಭಿವ್ಯಕ್ತಿಯನ್ನು ಸರಳ ಸು೦ದರ ಸಾಲಲ್ಲಿ ಹೇಳಿದ್ದಿರಾ...ನೋವುಗಳ ಮನದಾಳದಲ್ಲಿ ಹುದುಗಿ ಸಮಾಧಿಯಾಗಿರುವದನ್ನು ಎನೆ೦ದು ಹೇಳದೇ ಕಲ್ಪನೆಗೆ ಅನಾವರಣಗೊಳಿಸಿದ್ದಿರಾ...
  ಅದ್ಭುತ!!

  ReplyDelete
 12. ಅಶೋಕ್....

  ನೀನಿರುವೆ
  ನನ್ನೊಳಗೆ..
  ನನ್ನ...
  ಮನದ..
  ಹೃದಯದ..
  ಭಾವದೊಳಗೆ..
  ನನ್ನೆದುರಿಗಿದ್ದರೂ..
  ನನ್ನದಲ್ಲವೆನ್ನುವ..
  ಕಹಿ..
  ಸತ್ಯದಲ್ಲೂ...
  ನೀನಿರುವೆ....

  ನಿಜ ನಾನು ನಿನ್ನೆ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ಬಂದಿದ್ದೆ...
  ನಮ್ಮನೆಯ ಹೆಮ್ಮೆಯ ಹುಡುಗ "ರಜತ್" ಹಾಡು ಕೇಳಲು ಹೋಗಿದ್ದೆ...

  ಧನ್ಯವಾದಗಳು ಅಶೋಕ್...

  ReplyDelete
 13. ಓ ಮನಸೆ.. ನೀನೇಕೆ ಹೀಗೆ ?

  ನನ್ನ
  ಪುಟ್ಟ ಹೃದಯದಿ...
  ನೀ
  ಆವರಿಸಿ..
  ಬಿಡಿಸುತ್ತಿರುವೆಯಲ್ಲ..
  ನಿನ್ನ..
  ಚಂದನೆಯ..
  ಚಿತ್ತಾರ..
  ಎದುರಿದ್ದರೂ..
  ನೋಡಲಾರೆಯಾ..
  ಗೆಳತಿ..
  ನನ್ನ
  ನೋಟದ
  ಭಾವದಲಿ...?

  ಪ್ರತಿಕ್ರಿಯೆಗೆ ಧನ್ಯವಾದಗಳು...

  ReplyDelete
 14. ರಂಜಿತಾ..

  ಮನದ..
  ಹೃದಯದ..
  ಭಾವಗಳಿಗೆ..
  ರೆಕ್ಕೆಯಿರ ಬೇಕಿತ್ತು...
  ಮಾತಿರ ಬೇಕಿತ್ತು...
  ಗೆಳತಿ..
  ಅವೆಲ್ಲ..
  ನಿನ್ನಬಳಿ..
  ಹಾರಿ ಬಂದು..
  ನನ್ನೊಳಗೆ..
  ಅರಳಿದ..
  ಪ್ರೇಮಭಾವಗಳನು..
  ನಿನಗೊಬ್ಬಳಿಗೇ..
  ಕೇಳಿಸಬೇಕಿತ್ತು...
  ನಿನ್ನ..
  ಕಣ್ಣುಗಳಲ್ಲಿ..
  ನನ್ನ.
  ಪ್ರೀತಿಯ ಮಾತು...
  ಹಾಡಾಗ ಬೇಕಿತ್ತು..

  ಫೋಟೊ, ಸಾಲುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

  ReplyDelete
 15. ನಾವೇ ಹುಟ್ಟಿಸಿದ ಭಾವನೆಗಳಿಗೆ ಜೀವ ತುಂಬಲಾಗದ ಅಸಹಾಯಕತೆ!!!! ಸುಪ್ತ, ಅತೃಪ್ತ, ಭಾವನೆಗಳ,,, ಹೇಳಲಾಗದ ಸಿಹಿ ನೋವುಗಳ, ಭವಿಷ್ಯವಿಲ್ಲದ ಕನಸುಗಳ, ............ ಬಿಂಬಿಸಿದ ಕವನ ತುಂಬಾ ಚೆನ್ನಾಗಿದೆ..,, ಪ್ರಕಾಶಣ್ಣ...

  ReplyDelete
 16. ಚಿತ್ರ-ಕವನ ಎರಡೂ ಸೂಪರ್

  ReplyDelete
 17. ತುಂಬಾ ಅದ್ಭುತವಾಗಿ ಬರೆದಿದ್ದೀರ ಪ್ರಕಾಶ್ ಸರ್.

  ಕವಿತೆ ಯಾವುದೋ ನೋವು
  ಹೇಳ ಹೋಗಿ,
  ಗಂಟಲು ಕಟ್ಟಿದಂತಾಗಿ,
  ಹೇಳಬೇಕಾದ ನೂರು ಮಾತು
  ಮರೆತಂತಿದೆ....!
  ಹೇಳಲಾಗದ ನೋವಿನಂತೆ!

  ಕವಿತೆ ಮುದ ನೀಡಿತು :-)

  ReplyDelete
 18. ಚಂದ್ರು.. (ಕ್ಷಣ ಚಿಂತನೆ..)

  ಅಂದು..
  ನಾ..
  ಹೇಳದ..
  ಹೇಳಲಾಗದ..
  ಮನದ
  ಹೃದಯದ..
  ಭಾವಗಳು..
  ಸಮಾಧಿಯಾಗಿ..
  ನನ್ನೊಳಗಿದ್ದರೆ..
  ಇಂದು..
  ಕತ್ತಲ..
  ಒಂಟೀ..
  ಏಕಾಂತದ...
  ರಾತ್ರಿಯಲಿ..
  ಹನಿಗಳಾಗಿವೆ..
  ನಿನ್ನ..
  ನೆನಪಲಿ..
  ಕಣ್ಣೀರಾಗಿ....

  ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಚಂದ್ರು ಭಾಯ್ !

  ReplyDelete
 19. ಸೀತಾರಾಮ್ ಸರ್...

  ಅಂದು..
  ಇಂದಿನ..
  ಮಾತೇಕೆ
  ಗೆಳತಿ..
  ಎಂದೆಂದಿಗೂ..
  ನನ್ನಲ್ಲಿ..
  ನನ್ನೊಳಗೆ..
  ನನ್ನ..
  ಒಂಟಿ..
  ಏಕಂತದಲಿ..
  ನೀ
  ಬಂದು ಬಿಡುವೆಯಲ್ಲ..
  ಹೃದಯ..
  ಹಿಂಡುವ..
  ನೋವಿನ..
  ಹಿತವಾದ..
  ನೆನಪಾಗಿ...

  ಸೀತಾರಾಮ್ ಸರ್..
  ಪ್ರೋತ್ಸಾಹದ ನುಡಿಗಳಿಗಾಗಿ ಧನ್ಯವಾದಗಳು...

  ReplyDelete
 20. ಗೌತಮ್....

  ನಿನ್ನ..
  ಮರೆತಿದ್ದೆ..
  ಎಂದುಕೊಂಡಿದ್ದೆ...
  ನಿನ್ನ
  ದಟ್ಟ
  ನೋಟ..
  ತುಂಬು
  ಗಲ್ಲ..
  ಮೃದು
  ತುಟಿಗಳ...
  ನೆನಪು
  ಮಾಸಿದ್ದರೂ..
  ಇಳಿಯುವ..
  ಹನಿಗಳು..
  ಕೆನ್ನೆಯಲಿ..
  ಇನ್ನೂ..
  ಬಿಸಿಯಾಗಿ..
  ಹಸಿಯಾಗಿದೆಯಲ್ಲೇ...
  ಗೆಳತಿ...
  ನಿನ್ನ..
  ನೆನಪಲ್ಲಿ...

  ಗೌತಮ್...
  ಇಷ್ಟಪಟ್ಟು ಪ್ರತಿಕ್ರಿಯೆ ಹಾಕಿದ್ದಲ್ಲದೆ..
  ಎಸ್ಸೆಮ್ಮೆಸ್ಸೂ ಮಾಡಿದ್ದೀಯಲ್ಲ ಹುಡುಗಾ...
  ನನ್ನ ಧನ್ಯವಾದಗಳು..

  ReplyDelete
 21. ಶುಭಾ...
  ಪ್ರತಿಕ್ರಿಯೆಗೆ ವಂದನೆಗಳು...

  ಇಂದು..
  ನೀ..
  ಯಾರದ್ದೋ..
  ನನಸು..
  ಅವನಲ್ಲೇ..
  ಮನಸು..
  ಅವನದ್ದೇ..
  ಬದುಕು...
  .........
  ನೀನು..
  ನನ್ನವಳಲ್ಲ....
  ಇದು ಸತ್ಯ..
  ನೀ..
  ಬಿಟ್ಟು ಹೋದ..
  ಆ..
  ನಗು..
  ನೆನಪು..
  ಈ..
  ಒಂಟೀ..
  ಏಕಾಂತದ..
  ಹನಿಗಳು..
  ಮಾತ್ರ..
  ನನ್ನದು ಕಣೆ..
  ಹುಡುಗಿ...
  ಇವು ..
  ಮಾತ್ರವೇ.... ನನ್ನವು..!

  ಇಷ್ಟಪಟ್ಟಿದ್ದಕ್ಕೆ ..
  ಚಂದವಾದ ಪ್ರತಿಕ್ರಿಯೆಗೆ..
  ಧನ್ಯವಾದಗಳು.. ಶುಭಾ...!

  ReplyDelete
 22. ಪರಾಂಜಪೆಯವರೆ...


  ನೀ..
  ನನ್ನವಳಾಗಿದ್ದು..
  ಬದುಕಲ್ಲಿ..
  ನೀನಿದ್ದು...
  ಬೇಕು ಬೇಡಗಳ..
  ಬವಣೆಯ..
  ಸಂಸಾರದ..
  ಜಂಜಾಟದಲಿ..
  ನಿನ್ನ
  ಪ್ರೀತಿಗೆ..
  ಸಿಡುಕು..
  ಕೋಪ..
  ಕಷ್ಟ..
  ಕೋಡುವದಕ್ಕಿಂತ..
  ನೀ..
  ನನ್ನ..
  ನೆನಪಲ್ಲೇ..
  ಇರು..
  ಗೆಳತಿ..
  ನೀ.. ನಲ್ಲೇ..
  ಸುಂದರ..
  ಅಲ್ಲೇ..
  ಚಂದಿರ..

  ಧನ್ಯವಾದಗಳು ಸರ್...

  ReplyDelete
 23. ಪ್ರಕಾಶ
  ಏನೀ ವಿಕಾಸ?
  ಗರಿಬಿಚ್ಚಲು, ಕುಣಿಯಲು
  ಸೆಕೆ..ಮಳೆಯಲ್ಲ
  ದನಿಬಿಚ್ಚಲು
  ಕುಹು-ಕುಹೂವಲು
  ಹೂವಿಲ್ಲ ಮಾಮರದಲ್ಲಿ
  ಪೊರೆಬಿಚ್ಚಲು
  ನಳನಳಿಸಲು
  ಪೌರ್ಣಮಿ
  ಅಡಗಿದೆ ಚಂದ್ರನಲ್ಲಿ
  ಪ್ರತಿಕ್ರಿಯೆಗೊಂದು
  ಕವನಿಸಿ
  ಕವನಕೆ ವ್ಹಾ ಎನಲೋ
  ಕವನದ-ಕವನಕೆ
  ಭಳಾರೇ ಎನಲೋ..?

  ReplyDelete
 24. ಸಿಮೆಂಟು ಮರಳಿನ ಮಧ್ಯೆ..,

  ತುಂಬಾ ಚೆಂದದ ಸಾಲುಗಳು..
  ಪ್ರತಿಕ್ರಿಯೆಗಳಲ್ಲೂ ಉತ್ತಮ ಸಾಲೆ...

  ReplyDelete
 25. "avyaktha Bhava" nimma kavanadalli e pada nan hrudaya muttitu. a hudugiya nenapanna nimma kavanadalli saralavagi gichidira. nice kavana sir

  ReplyDelete
 26. ಎಲ್ಲವು ಚೆನ್ನಾಗಿದೆ,ಇದಕ್ಕೆಲ್ಲ ಸಮಯ ಹೇಗೆ ಹೊಂದಿಸ್ತಿರಿ ಅಂತನೆ ಗೊತ್ತಗ್ತಿಲ್ಲ..........

  ReplyDelete
 27. ಮನಸಾರೆ ತೆಗೆದ ಛಾಯಾಚಿತ್ರ, ಮನದಾಳದ ಮಧುರ ಭಾವ ಎರಡು ಬಹು ಸುಂದರವಾಗಿದೆ ಪ್ರಕಾಶಣ್ಣಾ

  ReplyDelete
 28. abbbbbbbbbbbbbbbbbbbbbbbba :)
  yochne madi comment hakthinnni swalpa time kodi :) :)

  ಜೆಡೆ ಹೆಣೆದಂತೆ ಉದ್ದ ಉದ್ದ ಸಾಲಿನ ಭಾವಪೂರ್ಣ ಕವಿತೆಗಳು ಅದ್ಭುತವಾಗಿದೆ ಪ್ರಕಾಶಣ್ಣ :)

  U really have great potential in creative writing ...

  ReplyDelete
 29. ಪ್ರೀತಿಂದ ವೀಣಾ ಅವರೆ, ನೀವು ಹೇಳಿದ್ದು ಅಕ್ಷರಶಃ ನಿಜ..:-)

  ReplyDelete