Wednesday, July 22, 2009

ಮಾತು... ಮೌನವಾಗುವ ಮುನ್ನ....







ಬದುಕಲ್ಲಿ... ....

ಅತ್ತಿತ್ತ....

ತಡಕಾಡಿ ...

ಹುಡುಕುತ್ತಿರುವ ಹಾಗೆ......

ಗೊತ್ತಿಲ್ಲದೆ.....

ಹೊತ್ತು...

ಕಳೆದು ಹೋಗುತ್ತದೆ.... ಗೆಳೆಯಾ....!!

ಮನಬಿಚ್ಚಿ ಮಾತಾಡು....

ಕತ್ತಲೆಯಲಿ...

ಮಾತು...

ಕರಗಿ ಹೋಗುವ ಮುನ್ನ...


11 comments:

  1. ಈ ಸಾಲುಗಳು ಅಲೆಗಳ ಥರ ಅಪ್ಪಳಿಸುದುವು.. ಕಳೆದುಕೊಂಡ ಗೆಳೆಯನ ನೆನಪಾಯಿತು!!

    ReplyDelete
  2. ರೂಪಾರವರೆ....

    ಮನಬಿಚ್ಚಿ ಮಾತಾಡದೆ
    ತಿರುಗಿ ಹೊರಳಿ
    ನೋಡದೆ......
    ಹೋದ...
    ಗೆಳೆಯ...ನಿಲ್ಲದ...
    ಬಾಳಲ್ಲಿ...
    ಬರಿ ನೆನಪುಗಳು...
    ಹೇಳಲಾಗದ..
    ಮೌನ ಮಾತುಗಳು....
    ಕಣ್ಣ ಹನಿ ಬಿಂದುಗಳು..

    ಹೀಗೆ ಸುಮ್ಮನೆ..
    ಗೀಚಿದ ಸಾಲುಗಳು...
    ಗೆಳೆಯನ ನೆನಪು ಮಾಡಿದ್ದರೆ... ನನ್ನ ಶಬ್ಧಗಳು ಧನ್ಯ....

    ReplyDelete
  3. ಫೋಟೊ ಸೂಪರ್, ಈ ಮೂಕ ದೆವ್ವಗಳ ಜೊತೆ ಏಗೋದು ಸ್ವಲ್ಪ ಏನ್ ಬಂತು ತುಂಬಾನೆ ಕಷ್ಟಾರೀ. ಅವರುಗಳ ಒಪ್ಪಿಗೇನೂ ಗೊತ್ತಾಗೊಲ್ಲ, ನಕಾರವೂ ಗೊತ್ತಾಗೊಲ್ಲ. :-) ಚುಟುಕು ಚೆನ್ನಾಗಿದೆ.

    ReplyDelete
  4. ಜಯಲಕ್ಷ್ಮೀಯವರೆ...

    ಅಂತರಂಗದ ಮಾತು...
    ತುಟಿಗಳ ಮಧ್ಯ ಬಾರದೆ...
    ಬಾಳೆಲ್ಲ..
    ಹನಿ.. ಹನಿಯಾಗಿ..
    ಮುತ್ತುಗಳಾಗುವದು...
    ಕಣ್ಣಲ್ಲಿ....
    ಕಂಬನಿಯಾಗಿ...

    ಹಂಗೆಲ್ಲ ದೆವ್ವ ಅನ್ನಬ್ಯಾಡ್ರವ್ವೋ...

    ಅದಕೂ ಒಂದು ಭಾವ ಇರ್ತದ...
    ಹೆಳಿಕೊಳ್ಳಲಾಗದೆ ಇದ್ರೂ...
    ಭರಪೂರ್..
    ಪ್ರೇಮ ತುಂಬಿರ್ತದ...

    ನಿಮ್ಮ ಪ್ರತಿಕ್ರಿಯೆ ತುಂಬಾ ಖುಷಿಯಾಯ್ತು..
    ಮಂಗಳತ್ತೆ...
    ಧನ್ಯ...
    ಧನ್ಯವಾದಗಳು...

    ReplyDelete
  5. Nice photos and nice 'chutuku's too.
    :-)
    malathi S

    ReplyDelete
  6. ಫೋಟೋ ಮಸ್ತಾಗಿದೆ. ಜೊತೆಯಲ್ಲಿ ಚಳಿಯಿದ್ದಾಗ ಚುರುಮುರಿಯಂತೆ ನಿಮ್ಮ ಪದಪುಂಜಗಳು... Simply Superb.

    ReplyDelete
  7. ಫೋಟೊ ಸಂಜೆಯ ಹೊತ್ತಲ್ಲಿ ತುಂಬಾ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಕವನವೂ ಚೆನ್ನಾಗಿದೆ...

    ReplyDelete
  8. ಕಳೆದುಹೋದ ಸಮಯ ಮತ್ತೆ ಸಿಕ್ಕಿದ್ದರೆ ಎನ್ನುವ ಹಂಬಲ ನಿಮ್ಮ ಕವಿತೆ ಓದಿ ಆಯಿತು ಪ್ರಕಾಶ್!!...
    ಹೀಗೆ ನಿಮ್ಮ 'ದೃಶ್ಯ-ಕಾವ್ಯ' ಮುಂದುವರಿಯಲೆಂಬ ಹಾರೈಕೆಯೊಡನೆ----

    ReplyDelete