Monday, March 23, 2015

ಒಂಟಿ ಕತ್ತಲಲಿ ಸಾವಿರ ಆಸೆಗಳ ಮಿನುಗು ... !

ಒಂಟಿ
ಕತ್ತಲಲಿ
ಸಾವಿರ ಆಸೆಗಳ ಮಿನುಗು ...
ನಿನ್ನ ಕಣ್ಣು....

ಮತ್ತೇಕೆ ಮಾತು..
ನಲ್ಲೆ
ಮತ್ತೇರುವ ಮೌನವೇ ಸಾಕು....

ಹೂ
ನಗು ಬಿರಿದು ಅರಳಲಿ
ಹರಡಲಿ
ಕಂಪು ಕೆಂದುಟಿಯಲಿ....

ಮತ್ತೇಕೆ ಮಾತು 
ನಲ್ಲೆ
ಮತ್ತೇರುವ ಮೌನವೇ ಸಾಕು..... 


(ರೂಪದರ್ಶಿ  ::: "  ನಾಗಶ್ರೀ  "
ಕಿರು ತೆರೆ ಮತ್ತು ಯಕ್ಷಗಾನ ಪ್ರತಿಭೆ )


4 comments:

  1. ಕಣ್ಣು ಭಾಷೆಗಳ ಹಂಗಿರದ ಮಾತಿನ ಸೇತುವೆ.
    ಆ ಕಣ್ಣ ಮಿನುಗು ಸಾವಿರ ಪುಟಗಳ ಒಲವಿನ ಕಾವ್ಯದ ಸಶೇಷ ಸಂಪುಟ.
    ಮೌನವೇ ನಿಜ ಆಭರಣ.

    ಕವನಕ್ಕೆ ಮತ್ತು ಛಾಯಾಚಿತ್ರಕ್ಕೆ ಸೇರಿ ನೂರಕ್ಕೆ ನೂರೈವತ್ತು ಅಂಕಗಳು.

    ReplyDelete
  2. ಮೌನ ಬಂಗಾರ ಮಾತು ಬೆಳ್ಳಿ
    ಒಂದು ಬೆಳಗುತ್ತೆ ಇನ್ನೊಂದು ಹೊಳೆಯುತ್ತೆ
    ಒಂದು ಮತ್ತನ್ನು ಹೆಚ್ಚಿಸಿದರೆ ಮತ್ತಿಗೆ ಚೌಕಟ್ಟನ್ನು ಕೊಡುತ್ತದೆ
    ಕವಿತೆಗೆ ತಕ್ಕ ಚಿತ್ರ.. ಚಿತ್ರಕ್ಕೆ ತಕ್ಕ ಪದ.. ಪದಕ್ಕೆ ತಕ್ಕ ಕವಿತಾ ಚಿತ್ರ
    ಒಂದೊಕ್ಕೊಂದು ಬೆಸೆದು ನಿಂತಿದೆ ಇಟ್ಟಿಗೆ ಜೊತೆಯಲ್ಲಿ ಸೀಮೆಂಟಿನ ಹಾಗೆ !!!

    ಸೂಪರ್ ಸೂಪರ್

    ReplyDelete
  3. "ಮತ್ತೇರುವ ಮೌನವೇ ಸಾಕು...." ಎಷ್ಟು ಚಂದ.....

    ಒಳ್ಳೆ ಚಿತ್ತಾರ ಕೂಡಾ..... ಡಬಲ್ ಲೈಕ್..

    ReplyDelete
  4. ಮತ್ತೇಕೆ ಮಾತು; ಮುತ್ತು ಬಲು ದುಬಾರಿ, ಮತ್ತೇರಿಸುವ ಮೌನ ಻ಮೌನಕ್ಕೂ ಮತ್ತೇರಿಸುವ ಗುಣವಿರುವ ಆ ಮಾತಿಲ್ಲದೇ ಕೊಲ್ಲುವ ಮೌನಿ ನಿಜಕ್ಖೂ ಸ್ತುತ್ಯಾರ್ಹಳು....ಬಹಳ ಚನ್ನಾಗಿದೆ ಪ್ರಕಾಶೂ... ಕವನ ಕಟ್ಟುವ ಪರಿ ನಿನಗೆ ನೀನೇ ಸಾಟಿ...

    ReplyDelete