Friday, February 18, 2011

ಬಾ... ಒಮ್ಮೆ.. ನನಸಾಗಿಬಿಡು..


ನಿನ್ನಂದ..
ಚಂದ..
ಪ್ರೀತಿ  ಪ್ರೇಮ.. ಸವಿ ಮಕರಂದ ....
ಬಾಚಿ..
ಬಾಚಿ..
ಬಚ್ಚಿಟ್ಟುಕೊಳ್ಳುವಾಸೆ....
ಎನ್ನ..
ಮನದಂಗಳದ....
ಪುಟ್ಟ.. ಭಾವಗೂಡಿನೊಳಗೆ ...


ನೀನೆನ್ನ....
ಮರೆಯದ..
ಕನಸುಗಳಾಗುವ ಮುನ್ನ..
ಬಾ..
ಬಾ...
ಒಮ್ಮೆ..
ನನ್ನೆದೆಯಲಿ..ನನಸಾಗಿಬಿಡು...
ಈ..
ನನ್ನ...
ತೆರೆದ ಬಾಹು... ಬಂಧನದೊಳಗೆ......

25 comments:

  1. wow... enta saalugaLu... super prakashanna
    jai oh!!!

    ReplyDelete
  2. ಮನಸ್ಸೆಂಬ ಕೊಳದಲ್ಲಿ......
    ಕನಸ್ಸೆಂಬ ಕಲ್ಲೆಸೆದು ....
    ನನಸಾಗುವ ಮೊದಲೇ.....
    ದೂರಾಗುವ ಹಂಬಲವೇ....?

    ಬಿಡಲಾರೆ ನಿನ್ನ....... ಅಂತ ನೀವು ಹೇಳಿದ ಪರಿ ಸೊಗಸಾಗಿದೆ....
    ಸುಂದರ ಛಾಯಾಚಿತ್ರ... ಸೊಗಸಾದ ಕವನ ...

    ReplyDelete
  3. ಬಾ...
    ಒಮ್ಮೆ..
    ನನ್ನೆದೆಯಲಿ..
    ನನಸಾಗಿಬಿಡು...
    ತುಂಬಾ ಚನ್ನಾಗಿದೆ..
    brother ತಪ್ಪೋ ಒಪ್ಪೋ ಗೊತ್ತಿಲ್ಲಾ... ನಿಮ್ ಕೈಚಳಕದ ಫೋಟೋ ಬಳ್ಸ್ಕೊಂಡಿದಿನಿ.......

    ReplyDelete
  4. ಮನಸು...
    ಚಿತ್ರ ಮತ್ತು ಸಾಲುಗಳು ಇಷ್ಟವಾಗಿದ್ದಕೆ ತುಂಬಾ ತುಂಬಾ ಧನ್ಯವಾದಗಳು..

    ಆಸೆ..
    ಅಧೂರ..
    ದೂರವಾಗುವ..
    ಮುನ್ನ..
    ಆರದ..
    ಅಧರದ.. ಕನಸು.. !

    ReplyDelete
  5. ಸು೦ದರ ಸಾಲುಗಳ ಭಾವಪೂರ್ಣ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.

    ReplyDelete
  6. ಚಿತ್ರ ಮತ್ತು ಸಾಲುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು "ಸರಿತ್ಸಾಗರ.."
    ನಿಮ್ಮ ಪ್ರತಿಕ್ರಿಯೆಯೂ ಸೊಗಸಾಗಿದೆ...

    ದೂರು..
    ದೂರುತ್ತ..
    ದೂರಾಗುವ...
    ಮುನ್ನ..
    ಬಾ..
    ಹುಡುಗಿ..
    ನನ್ನ..
    ಎದೆಗಾನಿಸಿ ಕೇಳು..
    ನನ್ನೆದೆಯ ಬಡಿತಗಳಲಿ..
    ನಿನ್ನ ಪ್ರೇಮದ ರಿಂಗಣವ...

    ReplyDelete
  7. ಒಮ್ಮೆ..
    ನನ್ನೆದೆಯಲಿ..ನನಸಾಗಿಬಿಡು...
    ಈ..
    ನನ್ನ...
    ತೆರೆದ ಬಾಹು... ಬಂಧನದೊಳಗೆ......
    ತಬ್ಬಿ ನನ್ನೋಳಗೊಂದಾಗಿಬಿಡು ಅಲ್ಲವ ಪ್ರಕಾಶಣ್ಣ ??? Nice feelings

    ReplyDelete
  8. ಇಷ್ಟೆಲ್ಲ ಕರೆದ ಮೇಲೆ ಆಕೆ ಬಾರದೇ ಇರುವ ಚಾನ್ಸ್ ಇಲ್ಲ ಬಿಡಿ. ಸರಳ ಸುಂದರ ಪ್ರಯತ್ನ. ಸೂಪರ್

    ReplyDelete
  9. ತುಂಬಾ ಚೆನ್ನಾಗಿದೆ ಪ್ರಕಾಶ್ ಸರ್. ತೆರೆದ ಬಾಹು ಬಂಧನದೊಳಗೆ ಬಂದ ಮೇಲೆ ಬಿಗಿಯಾಗಿ ಅಪ್ಪಿಲೊಳ್ಳಿ ಮರಳಿ ಹೋಗದಂತೆ.

    ReplyDelete
  10. ಭಾವನೆಗಳ ಉತ್ಕಟತೆ ಕವನದಲ್ಲಿದೆ, ಚೆನ್ನಾಗಿದೆ.

    ReplyDelete
  11. ಚಿತ್ರ..ಚಿತ್ರಕ್ಕಷ್ಟು ಕವನ...ಕನ್ನಡ ಬ್ಲಾಗ್ ಲೋಕದ ಅದ್ಬುತ ಬೆಳವಣಿಗೆ. ಏನ೦ತೀರಾ?

    ReplyDelete
  12. ಪ್ರಕಾಶಣ್ಣ,
    ತುಂಬಾ ಸುಂದರವಾದ ಸಾಲುಗಳು....ಇಷ್ಟ ಆಯಿತು...
    ಜೈ ಹೊ..

    ReplyDelete
  13. ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ...
    ಒಲವೆ ನಿನ್ನೊಂದಿಗೆ ನನ್ನ ಬದುಕಿರಲಿ....!!!!!!??????

    ReplyDelete
  14. ತುಂಬ ಬಾವಪೂರ್ಣವಾದ ಸುಂದರ ಸಾಲುಗಳು ಪ್ರಕಾಶಣ್ಣ.. :)

    ಹುಟ್ಟಿದ ಭಾವ ಬರಿದಾಗುವ ಮುನ್ನ..
    ತನು ಮನ ಭರಿಸಿ ಆವರಿಸಿಬಿಡು ನನ್ನ..
    ಮುಚ್ಚಿದ ರೆಪ್ಪೆಯ ಕನವರಿಕೆ ಬಿಚ್ಚಿ ಹಾರುವ ಮುನ್ನ,,
    ನನಸಾಗಿ ನಿನ್ನೊಳಗೆ ಬಚ್ಚಿಟ್ಟುಕೊ ನನ್ನ....

    ReplyDelete
  15. nimma saalugalige saati yaaru.....itz superb lines...

    ReplyDelete
  16. sundaravaada saalugalu.abhinandanegalu.

    ReplyDelete