Wednesday, March 3, 2010

ಮೊಗ್ಗರಳುತಿದೆ...!

ನಾನು..

ನನ್ನೊಳಗೇ...

ಬೆಳೆಸಿದ..

ಭಾವಗಳು...

ಮೊಗ್ಗರಳುತಿದೆ...

ಸಂಭ್ರಮದಿ..

ಕಾದಿವೆ..

ಕಾತುರದಿ...

ನಿನಗಾಗಿ...

ನನ್ನ...

ಪ್ರೇಮ...

ನಿವೇದನೆಗಾಗಿ...!!










21 comments:

  1. ಹನಿಗವನಗಳ ಸರದಾರರೇ,
    ಚಂದದ ಕವನ !
    ಆದಷ್ಟು ಬೇಗ ಒಂದು ಕವನ ಸಂಕಲನ ಹೊರಬರಲಿದೆಯ ಅಂತ ?

    ReplyDelete
  2. ಹೂವುಗಳು
    ಮನದಾಳದ ಭಾವಗಳು
    ಮೊಗ್ಗಾಗಿ ಅರಳಿ
    ಭಾವಗಳು ಬೆಳಗಿ
    ಸೊಬಗಿನ ಮುಡಿಯೇರಿ
    ಭಾವ-ಭಾವಗಳ ಸ೦ಗಮ
    ಪ್ರ್‍ಏಮಿಗಳ ಮಿಲನ
    ಆಗಲಿ ಎ೦ದು ಹಾರೈಸುತ್ತ
    ತಮ್ಮ ಕಾವ್ಯ ಪರಿಯ ಅನುಭವಿಸುತ್ತಾ,
    ಮನದಾಳದಲ್ಲೆಲ್ಲೋ
    ಹುದುಗಿದ ಭಾವ ಮತ್ತೆ ಮೊಗ್ಗಾಗ ತೊಡಗಿದೆ
    ಭಾವವಾಗಿ ಅರಳಲು...
    ಯಾರದೋ ಮೂಡಿಯೇರಲು...

    ReplyDelete
  3. ಆತ್ಮೀಯ
    ಮೊಗ್ಗೊಳಗಿನ
    ’ಮಧು’ರ ಭಾವದ
    ನಾದ ನಿನಾದ
    ತು೦ಬಿ ತು೦ಬಿದಾಗ
    ಹೊರಡಿತು ಮಧುರ ಸ್ವನ
    ಕೇಳದೋ ನಿನ್ನವಳ ತನsನss
    ಝೇ೦ಕಾರದೋ೦ಕಾರ
    ರ೦ಗಾಗಲಿ ರಿ೦ಗಣ
    ಮಧುರ ಒಲವ ಸಿ೦ಚನ
    ನಿಮ್ಮವ
    ಹರೀಶ ಆತ್ರೇಯ

    ReplyDelete
  4. wow!! tumba chennagide red rose jotege kavana

    ReplyDelete
  5. ಭಾವಡ ಘಮ ಅರಳಲಿ. ನಿವೇದನೆ, ಮತ್ತಷ್ಟು ಪ್ರೀತಿ ಶೋಧನೆಯಲ್ಲಿ ತೋಡಗಿಕೊಳ್ಳಲಿ. ಕವನ ಸುಂದರವಾಗಿದೆ. ಇಷ್ಟವಾಯಿತು ಪ್ರಕಾಶ್.

    ReplyDelete
  6. ಚಿತ್ರಾ...

    ನನ್ನ
    ಭಾವಗಳು
    ಮೊಗ್ಗರಳಿ..
    ಎಳಸು..
    ಎಸಳುಗಳು..
    ಫಳ..ಫಳ..
    ಪಕಳೆಗಳು..
    ಕಾದಿವೆ..
    ಕಾತರದಿ..
    ನಿನ್ನ
    ಪ್ರೇಮ..
    ಮಳೆಗಾಗಿ..
    ಆ..
    ಘಳಿಗೆಗಾಗಿ...!!

    ಪುಸ್ತಕಗಳಿಗಾಗಿ ತಲೆಕೆಡಿಸಿಕೊಂಡಿಲ್ಲ...

    ಆದರೆ..
    ಇಟ್ಟಿಗೆ ಸಿಮೆಂಟಿನ..
    ಎರಡನೇ ಪುಸ್ತಕ ಮಾಡಲು ಹಲವಾರು..

    ಪ್ರಕಾಶಕರು ಕೇಳಿದ್ದಾರೆ..

    ಇನ್ನೂ ನಿರ್ಣಯವಾಗಿಲ್ಲ...

    ಚಿತ್ರ..
    ಕವನ
    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ReplyDelete
  7. ಪ್ರಕಾಶಣ್ಣ..
    ಸೂಪರ್ ಕವನ...
    ಮೊಗ್ಗು..
    ಅರಳದೆ...
    ಕಾದಿದೆ...
    ನಿನಗಾಗಿ..
    ಪರಿಮಳ..
    ಪಸರಿಸದೆ...
    ಕಾದಿದೆ...
    ನಿನಗಾಗಿ....
    sooopar ಫೋಟೋ....

    ReplyDelete
  8. ಸೀತಾರಾಮ್ ಸರ್..

    ನಾನು ಬರೆದ ಸಾಲುಗಳಿಗಿಂತ
    ನೀವು ಬರೆದ ಕವನ
    "ಸತ್ವಯುತವಾಗಿದೆ"

    ಇದು
    ಬದುಕು..
    ಅನುಭವ..
    ಓದಿನಿಂದ ಬರುವಂಥದ್ದು...

    ನಿಮ್ಮ ಚಂದದ ಕವಿತೆಗಾಗಿ..
    ಪ್ರತಿಕ್ರಿಯೆಗಾಗಿ.. ವಂದನೆಗಳು...

    ನಿಮ್ಮ ಬ್ಲಾಗಿಗೆ ಬಹಳದಿನಗಳಿಂದ ಬರಲಾಗಲಿಲ್ಲ..

    ದಯವಿಟ್ಟು ಕ್ಷಮಿಸಿ...

    ReplyDelete
  9. ಪ್ರಕಾಶ್.. ಮೊಗ್ಗು ಅರಳುವುದನ್ನು ಸುಪ್ತವಾದ ಭಾವನೆಗಳು ಅರಳುವುದಕ್ಕೆ ಹೋಲಿಸಿದ್ದೀರಿ.. ತುಂಬಾ ಸುಂದರವಾದ ಕಲ್ಪನೆ! ಕೆಂಪು ಗುಲಾಬಿ ರಸಿಕತೆಯ ಪ್ರತೀಕ!! ತುಂಬಾ ಒಳ್ಳೆಯ ಫೋಟೋಕ್ಕೆ ಅದಕ್ಕಿಂತ ಚೆಂದಾದ ಕವನ..keep going!

    ReplyDelete
  10. ಚಂದದ ಕವನಕ್ಕೆ ಸೂಪರ್ ಫೋಟೋ!

    ReplyDelete
  11. photo ,kavana erduva mast mast prakashanna :)

    ReplyDelete
  12. ಚ೦ದದ ಭಾವ ಸ್ಪುರಣ,ಕಾವ್ಯ ಕನ್ನಿಕೆಗೊ೦ದು ಹೂರಣ.
    ಅಭಿನ೦ದನೆಗಳು.

    ReplyDelete
  13. ಸವಿಗನಸು..(ಮಹೇಶ್)

    ಧನ್ಯವಾದಗಳು..
    ನಿಮ್ಮ ಚುಟುಗಳು ಸ್ಪೂರ್ತಿ ಕೊಡುತ್ತವೆ...

    ReplyDelete
  14. ಪ್ರಕಾಶಣ್ಣ,
    ಸುಂದರವಾದ ಚಿತ್ರ ......................
    ಅದಕ್ಕಿಂತ ಸುಂದರವಾದ ಕವನ..........
    ನನ್ನ ಕೆಲಸ ಹೊಗಳೋದು ಮಾತ್ರ........
    ಯಾಕಂದ್ರೆ.....
    ನೀವೇ ಬ್ಲಾಗ್ ಲೋಕದ ಯಜಮಾನ............

    super combination

    ReplyDelete
  15. chitra kavite tumba tumba sundaravagide.

    ReplyDelete
  16. ನಾನು ನನ್ನೊಳಗೆ ಮೂಡಿಸಿ, ನನ್ನ ಕಲ್ಪನೆಯ ಲೋಕದಲ್ಲಿ ಮಿಂದು ಬೆಳೆಸಿದ ನನ್ನ ಭಾವನೆಗಳು ಈಗಷ್ಟೇ ತಾಯ ಗರ್ಭದಲ್ಲಿ ಬೆಳೆಯುತ್ತಿರುವ ನವಜಾತ ಶಿಶುವಂತೆ ನನ್ನ ಮನಸ್ಸಿನ ಭಾವನೆಗಳು ಬೆಳೆಯುತ್ತಿದೆ ಸಂತಸದಿಂದ ಅದು ನವಮಾಸಗಳು ತುಂಬಿ ತಾಯ ಗರ್ಭದಿಂದ ಹೊರಬರಲು ಕಾತುರದಿಂದ ಕಾದಿರುವ ಹಾಗೆ ನಿನಗಾಗಿ ನನ್ನ ಪ್ರೀತಿ - ಪ್ರೇಮವನ್ನ ನಿನಗೆ ಸಮರ್ಪಿಸಲು ಕಾಯುತ್ತಿದೆ ನನ್ನ ಮನ ನಿನ್ನ ಬರುವಿಕೆಗಾಗಿ.

    ReplyDelete
  17. 'ಸಿಮೆಂಟು ಮರಳಿನ ಮಧ್ಯೆ ' ಅವ್ರೆ..,

    ಹೂವಿನಂಥ ಸಾಲುಗಳು ...


    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

    ReplyDelete
  18. ಸುಂದರ ಸುಂದರ ಕವನ ಸುಂದರ
    ಸುಂದರ ಸುಂದರ ಅವಳ ಪ್ರೇಮ ಸುಂದರ..
    ನಿಮ್ಮವ,
    ರಾಘು.

    ReplyDelete
  19. ಪ್ರಕಾಶಣ್ಣ, ಚಿತ್ರ ಮತ್ತು ಕವನ ಬೊಂಬಾಟಾಗಿದೆ.

    ReplyDelete